Tuesday, December 31, 2013

" ವ್ರತ "

ಏಕೋ ಏನೋ ನಿಂದು ಅತಿಯಾಯ್ತು ಕಣೆ
ನೀ ಮಾಡುವ ಪ್ರತಿನಿತ್ಯದ ಅಡುಗೆಗೆ
ಎಲ್ಲವೂ ಉದ್ದುದ್ದದ ತರಕಾರಿಗಳೇ ಬೇಕೇನೋ
ನನಗೂ ಕಹಿಯ ತಿಂದು ತಿಂದು ಸಾಕಾಯ್ತು
ಮೊನ್ನೆ ಹಾಗಲಕಾಯಿಯ ಗೊಜ್ಜು, ಮೂಲಂಗಿ ಸಾರು
ನಿನ್ನೆ ಸೋರೆಕಾಯಿ ಪಲ್ಯ, ಹೀರೆಕಾಯಿ ಚಟ್ನಿ
ಇಂದು ನುಗ್ಗೆಯ ಸಾಂಬಾರು, ಬೆಳ್ಳುಳ್ಳಿ ಕೂಟು
ನಾಳೆಗೆ ಏನು ಕಾದಿದೆಯೋ ಆ ಪರಮಾತ್ಮನೇ ಬಲ್ಲ !

ರ್ರೀ... ಗಂಡು ಮಗು ಬೇಕೋ ಬೇಡವೋ ನಮಗೆ ?
ಸುಮ್ಮನೆ ತಿಂದು ತೆಪ್ಪಗೆ ನನ್ನ ಹಿಂದೆ ರೂಮಿಗೆ ಬನ್ನಿ
ಹಾಗೆಯೇ ಅಲ್ಲಿಟ್ಟಿರುವ ಕಷಾಯವ ಕುಡಿದು,
ಈ ಬೇವಿನ ಸೂಪ್ಪು ಸೊಂಟದ ಸುತ್ತಾ ಕಟ್ಟಿ
ಬರೀ ಮೈಯಲಿ ಒಂಟಿ ಕಾಲಲ್ಲಿ ನಿಲ್ಲಿ ;
ಹುಣ್ಣಿಮೆಯಿಂದ ಹುಣ್ಣಿಮೆವರೆಗೂ ವ್ರತ
ಮದ್ಯದಲ್ಲಿ ನನ್ನ ಮುಟ್ಟಿ ವ್ರತ ಕೆಡಿಸಿದಿರೋ
ಪ್ರತಿನಿತ್ಯ ಬೆಳಗಿನ ಜಾವ ತಣ್ಣೀರಲ್ಲಿ ಸ್ನಾನ,
ಮುಚ್ಚಿರಬೇಕು ಲಂಗೋಟಿಲಿ ನಿಮ್ಮ ಮಾನ
ಅರ್ಥವಾಯ್ತೇ, ಇಲ್ಲಾಂದರೆ ಈಗಲೇ ಇದ ಓದಿ
ಮಹಾತ್ಮರು ಬರೆದ " ಸಂತಾನ ಭಾಗ್ಯ " ಪುಸ್ತಕ !!

ಲೆ ಲೇ... ನಿನಗೇನಾದ್ರೂ ತಲೆ ಕೆಟ್ಟಿದೆಯೇ
ಮುದ್ದಾದ ಎರಡು ಅವಳಿ ಹೆಣ್ಮಕ್ಕಳಿರುವಾಗ
ಗಂಡು ಗಂಡೆಂದು ನೀನೇಕೆ ಬಾಯ್ ಬಿಡುವೆ
ಗಂಡಿದ್ದರೆ ನಿನಗೇನು ಎರಡು ಕೋಡು ಬರುವುದೆ
ನಾ ಏನಾದರು ಹೇಳಿದರೆ ನೀ ಕಣ್ಣೀರ ಸುರಿಸುವೆ ॥

Sunday, December 22, 2013

" ಕ್ರಿಸ್‌ಮಸ್ ಶಾಪಿಂಗ್ "

ರ್ರೀ... ಸ್ವಾಮಿ ಮಹಾಪ್ರಭುಗಳೇ,
ಮೇಲೇಳಿ ನಿದ್ದೆ ಮಾಡಿದ್ದು ಸಾಕು
ಆಗಲೇ ಗಂಟೆ ಹನ್ನೊಂದಾಯ್ತು ;
ಸೂರ್ಯ ನೆತ್ತಿಯ ಮೇಲೆ ಬರುವ ಮುಂಚೆ
ಮಾರ್ಕೆಟ್ ಗೆ ಹೋಗಿ ಹಣ್ಣು ತರಕಾರಿಯ ತನ್ನಿ !

ಲೆ ಲೇ.... ನಿನ್ನದೇನೇ ಸುಪ್ರಭಾತ
ವಾರದಲ್ಲಿ ಸಿಗುವ ಒಂದು ರಜಾ ದಿನ
ನಾ ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ
ಯಾವಾಗಲೂ ನಿಂದು ಇದ್ದದ್ದೇ ರಾಮಾಯಣ
ನನ್ನ ರೇಗಿಸಬೇಡ ಸುಮ್ಮನೆ ಒಳ ಹೋಗು
ಇಲ್ಲದಿದ್ದರೆ ನೀನೂ ಬಂದು ತೆಪ್ಪಗೆ ಮಲಗು !

ರ್ರೀ... ನಿಮಗೇಳುವುದ ನಾ ಮರೆತಿದ್ದೆ
ಯಾರೋ ಮಾರ್ಗರೇಟಂತೆ
ಎರಡೆರಡು ಬಾರಿ ಫೋನ್ ಮಾಡಿದ್ದರು
ನಿಮಗೇಕೆ ತೊಂದರೆ ಎಂದು ಸುಮ್ಮನಾದೆ
ಎಲ್ಲಿ ನನ್ನ ಬೈಯ್ಯುವಿರೆಂದು ಎಬ್ಬಿಸಲಿಲ್ಲ !

ಅಯ್ಯೋ ...... ನಿನ್ನ ಮಕ್ಕೇ....
ಎಬ್ಬಿಸಬಾರದಿತ್ತೇನೇ... ಹಾಳಾದವಳೆ
ಎಲ್ಲಾ ನಿನ್ನಿಂದ ಹಾಳಾಯ್ತು ನೋಡು,
ಕ್ರಿಸ್ಮಸ್ ಶಾಪಿಂಗ್ ಗೆ ಕರೆದೊಯ್ಯಬೇಕಿತ್ತು
ನನ್ನ ಬಾಸ್ನ ಬಾಸು ಇನ್ನೇನು ಮಾಡುವಳೋ !

Friday, December 20, 2013

" ವ♢ಡರ್ ಗಣ್ಣು "

ಅಳಿಯಂದರಿಗೇಕೇ ಸೌಗಂಧಿಕಾ ...
ನನ್ನ ಮೇಲೆ ಒಂದು ರೀತಿಯ ಕೆಟ್ಟ ಕಣ್ಣು,
ನನಗೆ ಒಂಥರಾ ಆಗುತ್ತೆ ಕಣೆ ಅವರ ನೋಡಿದರೆ !
ಈ ಪ್ರಾಣಿ, ಹೆಂಗಸರನ್ನು ಕಂಡೇ ಇಲ್ಲವೋ ಏನೋ ?
ಹೀಗೆ ನೋಡಿ ಹಪಹಪಿಸಿ ಜೊಲ್ಲು ಸುರಿಸುವುದೇ ... ? ಯಾವುದಕ್ಕೂ ನಿನ್ನ ಗಂಡನ ಮೇಲೆ ಒಂದು ಕಣ್ಣಿಟ್ಟಿರು !
ನನ್ನ ಅಕ್ಕ, ಈ ಹುಂಬನಿಗೆ ನಿನ್ನ ಕೊಟ್ಟು ಕೆಟ್ಟರು ;
ನಾ ಹೇಳುವುದ್ದೆಲ್ಲಾ ನಿನಗೆ ಹೇಳಿಯಾಗಿದೆ
ಇಷ್ಟರ ಮೇಲೆ ನಿನ್ನ ಇಷ್ಟಾ ಕಣೇ ಸೌಗಂಧಿಕಾ
ನಾನೇ ಉಗಿದು ಉಪ್ಪು ಹಾಕೋಣ ಎಂದರೆ
ನಿನ್ನ ಬಾಳೆಲ್ಲಿ ಮೂರಾ ಬಟ್ಟೆಯಾಗುವುದೋ ಎಂದು ಹೆದರಿ,
ನಾ ಇಂದು ಸುಮ್ಮನಿರಬೇಕಾಗಿದೆಯೇ
ಇಲ್ಲದಿದ್ದರೆ ಆ ಕತೆಯೇ ಬೇರೆಯಾಗುತ್ತಿತ್ತು ಬಿಡು !
ಅಯ್ಯೋ.... ಚಿಕ್ಕಮ್ಮಾ.... ,
ನಿಮಗೇನು ತಲೆಗಿಲೆ ಕೆಟ್ಟಿದೆಯೇ,
ಕಣ್ಣು ಕುರುಡೆ ಅಥವಾ ಅರಳು ಮರುಳೋ
ನನ್ನವರು ಎಂದೂ ಅಂತವರಲ್ಲ ತಿಳೀತೆ
ಯಾವುದಕ್ಕೂ ಡಾಕ್ಟರ್ ಬಳಿ ಹೋಗಿ ಕಣ್ಣು ಪರೀಕ್ಷಿಸಿ ಕೊಳ್ಳಿ ಇಲ್ಲದಿದ್ದರೆ ತೆಪ್ಪಗೆ ಈಗಲೇ ಊರಿಗೆ ಹೊರಡಿ
ಏನೋ ನನ್ನವರಿಗೆ ಹುಟ್ಟಿನಿಂದ ಮೆಳ್ಳಗಣ್ಣಷ್ಟೆ
ಅವರೆಲ್ಲೋ ನೋಡಿದರೆ ನಮ್ಮನ್ನೇ ನೋಡಿದಂತೆ ಕಾಣುತ್ತೆ, ಅದು ಅವರ ತಪ್ಪೇ.... ? ನೀವೇ ಹೇಳಿ ?
ಕ್ಷಮಿಸೇ..... ನನ್ನನ್ನ , ಸೌಗಂಧಿಕಾ .....
ಏನೋ......ಹಾಳಾದ್ದು ತಪ್ಪಾಗಿ ಹೋಯಿತು
ಅಳಿಯಂದಿರು ಈ ಮಾತ ಕೇಳಿಸಿಕೊಂಡರೆ
ನನ್ನ ಬಗ್ಗೆ ಏನೆಂದು ತಿಳಿದಾರು ಇನ್ನು ಅಕ್ಕಬಾವನಿಗೆ ಗೊತ್ತಾದರೆ ನನ್ನ ಜನ್ಮ ಜಾಲಾಡಿಸದೆ ಬಿಡರು
ಹೋಗಲಿ ಬಿಡು, ನಿನ್ನ ಗಂಡನಿಗೆ ವಂಡರ್ ಗಣ್ಣೇ ..... !?

Wednesday, December 18, 2013

" ಬೇಡ ಸ್ವಾಮಿ ನನ್ನ ಫಜೀತಿ " ಭಾಗ - ೨

ನನಗೆ  ಯಾಕಾದರು
ಇಂತಹ ಹೆಸರಿಟ್ಟರೋ
ನನ್ನ ಮುದ್ದಿನ ಅಪ್ಪ ಅಮ್ಮ ,
ಬೇಕಿತ್ತೆ ಅಣ್ಣಯ್ಯ ಎಂದು
ಕಿರಿಯರಿಂದಿಡಿದು
ಹಿರಿಯರಾದಿಯಾಗಿ
ನನ್ನ ಹೆಸರಿಡಿದು ಕರೆವಾಗ
ನನಗೋ ಖುಷಿಯೋ ಖುಷಿ;
ಮದುವೆಯ ಮೊದಲ ರಾತ್ರಿಯಲಿ
ನನ್ನವಳು ಹಾಲಿಡಿದು, ಹಲ್ಕಿರಿದು
ಬಳುಕಿ ವಯ್ಯಾರದಿ ಬರುವಾಗ
ನಾ ಏನೇನೋ ಕನಸ ಕಂಡಿದ್ದೆ;
ಹಾಲು ಕುಡಿದು, ಬಾಯಿ ಒರಸಿ
ನಗೆ ಬೀರಿದ್ದೆ, ನಾ ಇಂದು ಸುಖಿ ಎಂದು
ನನ್ನವಳು ಕಿವಿಯಲ್ಲಿ ಅಣ್ಣಯ್ಯ ಎಂದು
ಮೆಲ್ಲನೆ ಬಂದು ಉಸಿರಿದಾಗಲೇ  
ನನಗೆ ಏರಿದ್ದ ಬಿಸಿ ಒಮ್ಮೆಲೇ  ತಣ್ಣಗಾಗಿದ್ದು !  

Tuesday, December 17, 2013

" ಬೇಡ ಸ್ವಾಮಿ ನನ್ನ ಫಜೀತಿ " ಭಾಗ - ೧

ನಾ ಹೇಗೆ ಕರೆಯಲಿ ಹೇಳಿ
ನನ್ನವಳ ಹೆಸರಿಡಿದು ,
ಹಾಗೆ ಕರೆಯಲು ನನಗೆಂದೂ
ನನ್ನ ಮನ ಒಪ್ಪದು
ಬೇರೆ ಹೆಸರಿಡಿದು ಕರೆಯುವ ಎಂದರೆ
ನನ್ನವಳು ಸುತರಾಂ ಒಪ್ಪಳು
ಲೇ ಬಾರೇ ಇಲ್ಲಿ ಎಂದರೆ
ಅವಳಿಗೆ ಎಲ್ಲಿಲ್ಲದ ಸಿಟ್ಟು;
ಚಿನ್ನ ರನ್ನ ಎನ್ನಲು ನನಗೆ ಬರದು
ನೋಡು ಮೊದಲು ಆ ನಿನ್ನ ಹೆಸರ,
ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೋ 
ಸಿಂದು, ಬಿಂದು, ಲಾವಣ್ಯ ಎಂದು
ಹಾಗೆ ಕರೆಯಲು ನನಗೂ ಚೆನ್ನ
ನಾನೇಕೆ ಹೆಸರ ಬದಲಾಯಿಸಿ ಕೊಳ್ಳಲಿ
ನನ್ನ ಅಜ್ಜ ಅಜ್ಜಿ ಮುದ್ದಿನಿಂದಿಟ್ಟ ಹೆಸರು;
ಅಕ್ಕಮಹಾದೇವಿ ಎಂದು ಕರೆಯಲಾಗದಿದ್ದರೆ
ಶಾರ್ಟಾಗಿ, ಸ್ವೀಟಾಗಿ ನೀವು ನನ್ನನ್ನ
" ಅಕ್ಕಾ " ಎಂದು ಕರೆಯಿರಿ ಎನ್ನುವದೇ ?

Friday, December 13, 2013

ರಾಮ ರಾಮ

ಆಳಗಸನ ಮಾತ ಕೇಳಿ
ಅಂದು ಕಾಡಿಗಟ್ಟಿದ ಸೀತೆಯ,
ಅಯ್ಯೋಧ್ಯೆಯ ಶ್ರೀರಾಮ ;
ವರದಕ್ಷಿಣೆ ತರಲು ಹೊಡೆದು ಬಡಿದು
ತನ್ನವಳ ತವರಿಗೆ ಕಳುಹಿಸಿದ ಇಂದು
ಅಯ್ಯೋಗ್ಯ ಪರಂಧಾಮ !

ಸಂಸಾರದ ಸರಿಗಮ

ನನ್ನವಳಿಗೆ ನಾ ಆಗಾಗ
ಕೊಡುವದೆಲ್ಲಾ ಕೊಟ್ಟರೆ
ನನ್ನವಳ ಪ್ರತಿ ಮಾತೂ ಸಕ್ಕರೆ
ಅಪರೂಪಕ್ಕೊಮ್ಮೆ ನಾ ರೇಗಿದರೆ
ಆಪತ್ತು ನನ್ನ ಬೆನ್ನಿಗೆ;
ಉಪವಾಸದ ಬರೆ ನನಗೆ ಖರೆ !
ಮುನಿದು ಮುಟ್ಟಾಗುವಳು
ಜಡಿದು ಬಾಗಿಲ, ಒಳ ಸೇರುವಳು
ನಾನೋ ಬಿಸಿ ಬಿಸಿ ಬೆಲ್ಲದಂತವ
ಕೋಪಕೆ ಬೀಗ ಬಡಿದು ರಮಿಸಿದರೆ
ನಗೆ ಬೀರಿ ನನ್ನೊಳು ಒಂದಾಗುವಳು !

ಹೃದಯದ ಪಿಸು ಮಾತು

ಹೃದಯವೆ
ಕೂಗಿ ಕರೆಯಲು
ನಿನ್ನನ್ನೂ
ಮರೆಯದೆ
ಕೇಳು
ಮನದ ಮಾತನ್ನೂ;
ಕಣ್ಣಲೇ
ನಾ ಹೇಳುವೇ
ನಲ್ಲ ನಿನಗೆಲ್ಲಾ
ನಿನ್ನದೇ
ಈ ಬದುಕು
ಜೊತೆಗೆ ನೀನೆಲ್ಲಾ !
ಏಕೋ ಕಾಣೆ
ನನ್ನೊಳಗೆ
ಪ್ರೀತಿಯ ದೀವಳಿಗೆ
ನನ್ನೇ ನೀನು
ಮೈ ಮರೆಸಿರುವ
ಈ ರಸ ಘಳಿಗೆಗೆ
ನಿನಗೇ ನಾ ಸೋತಿರುವೆ !

Wednesday, December 11, 2013

ಸಹಬಾಳ್ವೆ ಭಾಗ - 2

ರ್ರೀ.... ನಿಮಗೇನಾದರೂ,
ತಲೆಗಿಲೆ ಕೆಟ್ಟಿದೆಯೋ ಹೇಗೆ
ಪಿಎ ಆದವಳ ಪ್ರಿಯೆ ಎಂದರೆ
ಆಗುವುದೆಲ್ಲಾ ಹೀಗೆಯೇ;
ತಿಂಗಳಲ್ಲಿ ಹದಿನೈದು ದಿನ
ಅವಳ ಜೊತೆ ಸುಖ ಸಂಸಾರ
ಇನ್ನುಳಿದ ಹದಿನೈದು ದಿನ
ನನ್ನ ಜೊತೆ ಸಂಸಾರ, ವಿಹಾರ
ಕೋರ್ಟಿನ ಆದೇಶ, ಉಪದೇಶ
ಇದಕ್ಕೆ" ಲಿವಿಂಗ್ ಟುಗೆದರ್ " ನ
ಸಂಬಂಧಗಳ ಹೆಸರು ಬೇರೆ ?

ಏನೋ ಆದದ್ದಾಯ್ತು ಹಾಳಾದವಳಿಗೆ
ಒಂದಷ್ಟು ದುಡ್ಡು ಕಾಸು ಕೊಟ್ಟು ಹೆದರಿಸಿ,
ಬಾಯ್ಮುಚ್ಚಿಸಿ ಕಳಿಸದೆ
ಹೀಗೆ ಮನೆಗೆ ಕರೆತರುವುದೆ;
ನಿಮ್ಮ ಹೆಸರಿಗೆ ತಕ್ಕಂತಿದ್ದೀರಿ ಬಿಡಿ
ಎಲ್ಲಾ ನನ್ನ ಪೂರ್ವ ಜನ್ಮದ ಕರ್ಮ
ದುಂಬಿ ಮುಟ್ಟದ ಹೂವು ಇಲ್ಲ,
ಗಂಡ ನೋಡದ ಹೆಣ್ಣಿಲ್ಲಾಂತಾಯ್ತು !

ನಾನೇನೂ ಅವಳ ಜೊತೆ
ಬೇಕೂಂತ ತಪ್ಪೆಸಗಲಿಲ್ಲವೆ ನಿನ್ನಾಣೆಗೂ,
ಪಾರ್ಟಿಯಲ್ಲಿ ಒಂದಷ್ಟು ಮಧಿರೆ ಹೆಚ್ಚಾಗಿ
ನಶೆ ತಲೆಗೇರಿ, ಈಗೆಲ್ಲಾ ಆಯ್ತು ಅಷ್ಟೆ;
ಏನೋ ನಿನ್ನ ಪುಣ್ಯದ ಫಲ
ಎಲೆಕ್ಟ್ರಾನಿಕ್ ಮೀಡಿಯಾ ( ಟಿ ವಿ )
ನ್ಯೂಸ್ ಪೇಪರ್, ಪೊಲೀಸ್ ಮುಂದೆ
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಅಂತ
ಹೋಗಿ ಕಂಪ್ಲೇಂಟ್ ಕೊಟ್ಟಿದ್ದರೆ ಅವಳು
ಇಷ್ಟೊತ್ತಿಗೆ ನನ್ನ ಸ್ಥಾನ - ಮಾನ,
ಮನೆ - ಮರ್ಯಾದೆ ಹರಾಜಾಗುತ್ತಿತ್ತು 
ಮೊದಲ ಹೆಂಡತಿ ಜೀವಂತ ಬದುಕಿರುವಾಗ 
ಎರಡನೆಯವಳಿಗೆ ಕಾನೂನಿನಲ್ಲಿ
ಮದುವೆಗೆ ಅವಕಾಶವಿಲ್ಲ
ಏನೋ ನೀನು ಮನಸ್ಸು ಮಾಡಿದರೆ 
ಈ ತಾಪತ್ರಯದಿಂದ ಪಾರಾಗ ಬಹುದು !