Monday, January 9, 2017

ವೆರೈಟಿ_ವೆರೈಟಿ_ರಿಂಗ್_ಟೋನ್ಸ್



ರ್ರೀ.... ಅಳಿಯಂದ್ರೇ, ಅಳಿಯ ದೇವ್ರೂ
ಅಯ್ಯೋ..... ನಿಮ್ ಮಕ್ಕೆ ದೋಸೆ ಹುಯ್ಯಾ
ಆಗ್ಲಿಂದ ಒಂದೇ ಸಮ ರಿಂಗ್ ಆಗ್ತಿದೆ
ಅದೇನ್ ನಿದ್ದೆಯೋ... ಅಥವಾ ಮೈ ಮರೆವೋ
ನನ್ ಕೈಯಲ್ಲಂತೂ ಕೇಳಕ್ಕಾಗ್ತಿಲ್ಲ
ಇನ್ನು ಅಕ್ಕಪಕ್ಕದವರು ಕೇಳಿಸಿಕೊಂಡ್ರೆ
ನನ್ ಮುಖ ನೋಡಿ, ನೋಡಿ ನಗ್ತಾರಷ್ಟೆ
ನೀವೋ... ನಿಮ್ ಇನ್ ಕಮ್ಮಿಂಗ್ ಕಾಲ್ಸೋ
ನಿಮ್ಮನ್ನ ಕಟ್ಟಿಕೊಂಡ ನನ್ನ ಮಗಳಿಗೆ
ಬೇಕಾದ್ರೆ ಕೇಳಿಸಿಕೊಳ್ಳೋ ಜಾಣ್ಮೆ ,ತಾಳ್ಮೆ ಎರಡೂ ಇರಲಿ
ಎದ್ದೇಳ್ರಿ ಸಾಕು ಅಳಿಯ ಅಂತೆ ಅಳಿಯ
ಒಂದೆ ಎರಡೆ ಬಂದಿದ್ದೇ... ಬಂದಿದ್ದು, ಬಿಟ್ಟಿದ್ದೇ.... ಬಿಟ್ಟಿದ್ದು
ಅಬ್ಬಬ್ಬಾ.... ಅವೇನು ರಿಂಗ್ ಟೋನ್ಸ, ಕಾಲರ್ ಟೋನ್ಸ
ಅದು ಹೋಗಿ ಹೋಗಿ ಈ ಅಪರಾತ್ರಿಯಲ್ಲಿ
ಛೆಛೆಛೆಛೆಛೇ....  ಸಂಜೆ ರೀ ಛಾರ್ಜು ಮಾಡಿಸಿದ್ದರ
ಅಜೀರ್ಣದ ಸೌಂಡ್ ಎಫೆಕ್ಟು;
ನನ್ನವಳ ಅಪ್ಪಿ ಸಿಹಿಗನಸು ಕಾಣುತ್ತಿದ್ದವನ ಎಬ್ಬಿಸಿದ
ಆ ಕಿರಾತಕಿ ಅತ್ತೆಗೆ ಎರಡು ಇಡಬೇಕೆನಿಸಿದರೂ
ಛೇ.... ಎಷ್ಟಾದರು ಹೆಣ್ಣು ಕೊಟ್ಟ ದೇವರಲ್ಲವೆ
ನನ್ನದೇ ತಪ್ಪು;
ಫೋನ್ ಸ್ವಿಚ್ ಆಫ್ ಮಾಡಿದ್ದರೆ ಇಷ್ಟೆಲ್ಲಾ ನಾ  ಕೇಳಬೇಕಿರಲಿಲ್ಲ
ನಿದ್ದೆಗಣ್ಣಲ್ಲೇ.... ನನ್ನವಳ ಎಬ್ಬಿಸಿ ಯಾರದ್ದೆ ಕಾಲು ?
ನೀನೇ....  ಎದ್ದು ಅದೇನೆಂದು ಸ್ವಲ್ಪ ನೋಡಬಾರದೆ ?
ಸುಮ್ನೆ ಬಿದ್ಕೊಳ್ರಿ ನಂದೆ ಕಾಲು , ಏನಾಯ್ತ್ ಈಗ
ನಿಮ್ ಕಾಲ್ಮೇಲೆ ನನ್ ಕಾಲು ಹಾಕ್ ಬಾರದಿತ್ತೆ !
ಆ ಹಾ.. ನನ್ನನ್ನ ಚಿನ್ನ,ರನ್ನಾ ಅಂತ ಸೊಂಟ ಮುಟ್ಟಿ
ಆಗ ಇದೆ ನೋಡಿ, ನಿಮಗೆ ಮಾರಿ ಹಬ್ಬ !! ಕಾಲಂತೆ ಕಾಲು
ಅಲ್ಲಾ... ನನ್ನವಳ ಕೇಳಿದ್ದಕ್ಕೆ ಇಷ್ಟು ಕೆರಳಿದರೆ
ಇವಳ ಜೊತೆ ನಾ ಸಂಸಾರ ಮಾಡಿದಂತೆ
ಯಾವ ಕಾಲರ್ ರಿಂಗೂ ಇಲ್ಲ,
ನೋಟಿಪಿಕೇಷನ್ ಮೊದಲೇ ಇಲ್ಲ
ಫೋನ್ ಸ್ವಿಚ್ ಆಫ್
ಆದರೂ ರಿಂಗ್ ಟೋನ್ಸ್ ಎಲ್ಲಿಂದ ಬಂತು !?
ಈ ವಯಸ್ಸಿಗೆ ಅತ್ತೆಗೆಲ್ಲೋ ಅರಳು ಮರುಳಿರಬೇಕು
ಅರ್ಥವಾಗದೆ ಬೆಳಿಗ್ಗೆ ಎದ್ದಾಗಲೇ ಗೊತ್ತಾಗಿದ್ದು
ಸಂಜೆ ತಿಂದ ವೆರೈಟಿ ವೆರೈಟಿ ಹಿದಕವರೆ ಬೇಳೆಯ
ಬಿಸಿಬಿಸಿ ತಿಂಡಿಗಳ " ರಿಂಗ್ ಟೋನ್ಸ್ " ಪ್ರಭಾವವೆಂದು