Friday, July 4, 2014

" ಮಾಟವೋ, ದೆವ್ವದ ಕಾಟವೋ.... ತಿಳಿಯದಾಗಿದೆ

ಹೌದೇನೇ.... ಉಮಾ, ನಾ ಕೇಳಿದ್ದು ನಿಜವೆ ?
ಅಳಿಯಂದಿರಿಗೆ ಭೂತವೋ... ಏನೋ ... ಮೆಟ್ಟಿದೆಯಂತೆ
ಛೇ... ಹೀಗಾಗಬಾರದಿತ್ತು, ಮೊದಲೇ ಸುರ ಸುಂದರಾಂಗ ಯಾವ ಮೋಹಿನಿಯ ಕಣ್ಣು ಬಿತ್ತೋ... ಏನೊ ತಾಯಿ;
ಇದ ಕೇಳಿಯೇ ಮನಸ್ಸು ತಡೆಯದೆ ಬಂದೆ ಕಾಣೆ
ರಾತ್ರಿಯೆಲ್ಲಾ ಏನೇನೋ ತಮ್ಮಷ್ಟಕ್ಕೆ ತಾವೆ ಮಾತಾಡುವರಂತೆ ಗಾಳಿ ಆಂಜನೇಯನ ತಾಯಿತ ಕಟ್ಟಿಸ ಬಾರದಿತ್ತೇ.... ಚಿಕ್ಕಮ್ಮಾ.... ಇದೆಲ್ಲ ನಿಮಗೆ ಹೇಳಿದ್ದಾದರು ಯಾರು ?
ಕೆಲಸದ ಕೆಂಪಿ ಹೇಳಿರಬೇಕು ಬರಲಿ ಅವಳು
ಅಯ್ಯೋ.... ಚಿಕ್ಕಮ್ಮಾ ಮೊದಲೇ ನೀವು fm ರೇಡಿಯೋ ಇದ್ದಂತೆ
ಇನ್ನು ನನ್ನ ಮಾನ, ಮರ್ಯಾದೆ
ಊರು ಊರಲ್ಲಿ ಹರಾಜು ಹಾಕುವಿರಿ
ಏನೂ.... ಹಾಗಿಲ್ಲ ನನ್ನವರಿಗೆ, ಸುಮ್ಮನೆ ಇಲ್ಲದ್ದು ಹೇಳಬೇಡಿ ಅಲ್ಲವೆ ಉಮ, ನನಗೇನು ಬುದ್ಧಿಯಿಲ್ಲವೆ ಮಗಳ ಮನೆ ವಿಷಯ ಬೀದಿಗೆ ತರುವೆನೆ
ಎಲ್ಲೋ.... ಮಾಟ, ಮಂತ್ರ ತಂತ್ರ ಮಾಡಿಸಿರಬೇಕು ನೋಡು ಕೈ ಮೀರಿದರೆ ಅಳಿಯಂದಿರ ಕತೆ ಗೋವಿಂದ ಗೋ.... ವಿಂದ !!
ಅಯ್ಯೋ .... ಚಿಕ್ಕಮ್ಮ ಹೀಗೆಲ್ಲ ಹೆದರಿಸಿದರೆ ಹೇಗೆ ?
ತಾಯಿತ, ಡಾಕ್ಟರ್, ಮಾಂತ್ರಿಕ
ಕೊನೆಗೆ ನಿಮಾನ್ಸಿಗೆ ಹೋಗಿ ಬಂದಾಯ್ತು
ದೆವ್ವವೂ ಇಲ್ಲ, ಮಾಟವೂ ಇಲ್ಲ
ಎಲ್ಲಾ ... ನನ್ನ ಹಣೆಯ ಬರಹ
ನೀವೇ ನೋಡಿ ಇತ್ತೀಚೆಗಂತು ರೂಮಲ್ಲಿ ಒಬ್ಬರೇ ಕೂತು ಏನೋ.... ತಮ್ಮಷ್ಟಕ್ಕೆ ತಾವೆ ಮಣ ಮಣ ಗುಟ್ಟುವರು ಅಳಬೇಡವೇ..... ನೋಡು ನಿನ್ನ ತಮ್ಮ ಬಂದ
ಅವ ಎಲ್ಲಾ....., ಸರಿ ಮಾಡುವ, ನಿಶ್ಚಿಂತೆಯಿಂದಿರೆ ತಾಯಿ ಬಾರೊ... ಚೆನ್ನು, ನೋಡೋ... ನಿಮ್ಮ ಬಾವನ ಸ್ಥಿತಿಯ.... ಅಯ್ಯೋ.... ಅಕ್ಕಾ.... ಇದು ಮಾಟ, ದೆವ್ವದ ಕಾಟವಲ್ಲ ಇದೇನಿದ್ದರು ಫೇಸ್ ಬುಕ್ ಮೇನಿಯಾ....
ಈಗ ಲ್ಯಾಪ್ ಟಾಪ್ ಕೊಡುವೆ ನೀನೆ ನೋಡು...
ಬಾವ ಹೇಗೆ ಬದಲಾಗುವರು....

" ಮಟನ್ ಗುನ್ಯ "

ಎರಡು ಮೂರು ದಿನದಿಂದ ಮೈಸರಿಯಿರದೆ
ಮೈ, ಕೈಕಾಲು ನೋವು ನೋವು
ಚಳಿ ಜ್ವರಕ್ಕೆ ನಾನೀಗ ಮನೆಯಲ್ಲಿಯೇ ...
ಆಸ್ಪತ್ರೆಗೆ ಹೋಗಿ, ದುಡ್ಡು ಸುರಿದು ಬಂದಾಯ್ತು
ಆತ್ಮೀಯ ಮಿತ್ರರೆಲ್ಲರ ಶುಭ ಹಾರೈಕೆ
ಬೇಗ ಗುಣ ಮುಖರಾಗಿ, fbಗೆ ಹಾಜರಾತಿ ಹಾಕಿ ಒಬ್ಬೊಬ್ಬರದ್ದೂ.... ಒಂದೊಂದು ಸಲಹೆ, ಓಲೈಕೆ
ಏನು ಚಳಿ ಜ್ವರವೆ, ಈ ಕ್ಲೈಮೇಟೇ ಹಾಗೆ ಸ್ವಾಮಿ
ಮೊನ್ನೆ ಬಿದ್ದ ಮಳೆಗೆ ಎಲ್ಲೋ.... ನೆನೆದಿರಬೇಕು
ಆಗಲೇ .... ಒಂದು ನೈಂಟಿ ಹೊಡೆದಿದ್ದರೆ
ಈ ಕೆಮ್ಮು ದಮ್ಮು ,ಶೀತ ಗೀತ ಬರುತ್ತಿರಲಿಲ್ಲ ನೋಡಿ
ಹೋಗಲಿ ಡಾಕ್ಟರ್ ಬಳಿ ಹೋಗಿದ್ದಿರೋ... ಇಲ್ಲವೋ?
ಏನಂದರು ಚಿಕನ್ ಗುನ್ಯ, ಹೆಚ್1 ಎನ್1, ಮಲೇರಿಯ ಅದ್ಯಾವುದೋ .... ಹೊಸ ರೋಗವಂತೆ
ಬೆಂಗಳೂರಿನ ತುಂಬೆಲ್ಲಾ.... ಅದೇ ಸುದ್ದಿಯಂತೆ
ನನ್ನ ತಲೆಯೊಳಗೆ ಅನುಮಾನದ ಹುಳ ಬಿಟ್ಟು
ಯೋಚಿಸುವಂತೆ ಮಾಡಿ,
ಡಾಕ್ಟರ್ ಹೇಳಲಿಲ್ಲವೆ ನಿಮಗೆ? ಸರಿ ಹೋಯ್ತು ಬಿಡಿ
ನಾನೇ... ಗಾಭರಿಯಿಂದ ಯಾವ ರೋಗವಂತೆ
ಬೇಗ ಹೇಳಬಾರದೇ... " ಮಟನ್ ಗುನ್ಯ " ಎನ್ನಬೇಕೆ
ಆ ಸುಸ್ತಲ್ಲೂ.... ನಕ್ಕಿದ್ದೇ... ನಕ್ಕಿದ್ದು

Wednesday, July 2, 2014

" ಇದೆಲ್ಲಾ .... ನನಗೆ ಬೇಕಿತ್ತೆ ".... ?

ಇನ್ಮುಂದೆ ನಾ ಬರೆಯುವುದ ಬಿಟ್ಟು ಬಿಡಬೇಕೆಂದಿದ್ದೇನೆ
ನನ್ನವಳ ಕಿವಿಯ, ಯಾರು ಕಚ್ಚಿದರೋ.... ಏನೋ ?
ನನ್ನ ಇಡೀ ಜಾತಕವನ್ನೆಲ್ಲಾ... ಜಾಲಾಡಿ
ಇದೆಲ್ಲಾ .... ನಿಮಗೆ ಬೇಕಿತ್ತೇನ್ರೀ.... ?!
ಕಂಡ ಕಂಡವರೆಲ್ಲ ನನ್ನ ಏನೆಂದು ತಿಳಿದಾರು ?
ನೀವು ಬರದದ್ದೆಲ್ಲಾ ಮೆಚ್ಚಿ, ಒಳಗೊಳಗೆ ನಕ್ಕು ;
ಇವನೆಂಥಹ ಕಲಿಯುಗದ ಗಂಡಸು ಛೇ...
ಹೀಗೆ ಹೆಂಡತಿಗೆ ಹೆದರುವುದೇ... ಹೆದರು ಪುಕ್ಕಲ

ಅಯ್ಯೋ ... ಪಾಪ, ಹೀಗಾಗಬಾರದಿತ್ತು
ಎಲ್ಲಾ... ಲೊಚಗುಟ್ಟುವವರೇ.... ಹೆಚ್ಚು
fbಯಲ್ಲಿ ಪೊರಕೆಯಿಡಿದ ನನ್ನ ಫೋಟೋ ಬೇರೆ ?
ಇವಳೆಂಥಹ ಗರತಿ ಗಂಗಮ್ಮನಿರಬೇಕು...
ಹೀಗೆಲ್ಲ ಕೈಹಿಡಿದವನ ಹಿಂಸಿಸುವುದೆ....?
ಮನೆಯಲ್ಲಿ ದಿನನಿತ್ಯ ಎಷ್ಟು ಕಾಟ ಕೊಡುವಳೋ...!! ಶೂರ್ಪಣಿಕಿ, ಡಾಕಿಣಿ ಹೆಣ್ಣು ಕುಲಕ್ಕೇ ಅವಮಾನ
ಫೇಸ್ ಬುಕ್ಕಿನ ಲಲನೆಯರು, ಮಹಿಳಾಮಣಿಗಳು
ನಿಮ್ಮಂತಿರೊ ಆ ಗಂಡಸರು ಶಪಿಸುವರೋ....
ಹೆಸರಿಗೆ ತಕ್ಕಂತೆ ಚೆನ್ನ, ದಿನಾ ಒಂದಿಲ್ಲೊಂದು ರಗಳೆ
ಮನದ ಭಾವನೆಗಳ, ಕಲ್ಪನೆಯ ಕನಸುಗಳ
ನಿಮಗೇಳಿಕೊಳ್ಳಲು fb ಚಾವಡಿಯಷ್ಟೆ;
ಎಂದಾದರು ಕಸ ಗುಡಿಸಿ, ಪಾತ್ರೆ, ಅಡಿಗೆ ಕೊನೆಗೆ
ನನ್ನ ಕಾಲು ಒತ್ತಿ ಎಂದಿರುವೆನೆ....?!
ಏನೋ .... ನಿಮಗಾಗಿ ಕಾದು ಕಾದು ಸುಸ್ತಾಗಿ
ಮನೆಗೆ ಬೇಗ ಬರದಿದ್ದಾಗ ಕೋಪವಷ್ಟೆ...
ಏನೋ ... ಪ್ರೀತಿ ಹೆಚ್ಚಾದಾಗ ಲಟ್ಟಣಿಗೆಯಿಡಿಯುವೆ
ಅದು ಬಿಟ್ಟು ನೀವೇ... ಹೀಗೆ ಸಂಸಾರದ ಗುಟ್ಟು ವ್ಯಾಧಿರಟ್ಟು ಜಗಜ್ಜಾಹೀರು  ಮಾಡುವುದೆ ?
ನನ್ನವಳು ನಕ್ಕು ನಿಮಗೆ ಗೊತ್ತಲ್ಲಾ....
ನಾ " ಒಲಿದರೆ ನಾರಿ, ಮುನಿದರೆ ಮಾರಿ " ಎನ್ನುವುದೆ...!!

Friday, June 27, 2014

" ದೇವರ ಆಟ ಬಲ್ಲವರಾರು "....??

ಆಗಷ್ಟೇ ... ಸ್ನಾನ ಮುಗಿಸಿ, ತಿಂಡಿ ತಿಂದು
ಒಂದರ್ಧ ಗಂಟೆ ನಿದ್ರಿಸಿದರೆ ಹೇಗೆ...?
ಆಯಾಸದ ಮೈಮನಸ್ಸಿಗೂ... ಕೊಂಚ ಆರಾಮ
ಆಸ್ಪತ್ರೆಗೆ ಆನಂತರ ಹೋದರಾಯ್ತೆಂದು
ಹಾಸಿಗೆಯ ಮೇಲೆ ಹಾಗೆಯೇ.... ಮೈ ಚೆಲ್ಲಿ
ಇನ್ನೇನು ಮಲಗಿ ವಿಶ್ರಮಿಸಬೇಕು
ಒಮ್ಮೆಲೇ... ಬಾಗಿಲ ದಬ ದಬ ಬಡಿವ ಸದ್ದು
ಜೊತೆಗೆ ಕಾಲಿಂಗ್ ಬೆಲ್ ನ ಜೋರು ಶಬ್ಧ
ಹಾಳಾದ್ದು ನೆಮ್ಮದಿಯಾಗಿ ನಿದ್ರಿಸುವಂತಿಲ್ಲ
ಅಭೀ... ಅಭೀ... ಹೋಗಿ ನೋಡ ಬಾರದೆ
ಕರೆದರೂ... ಇವಳ ಸುಳಿವಿಲ್ಲ, ಉತ್ತರವಿಲ್ಲ
ಐದು ತಿಂಗಳ ಗರ್ಭಿಣಿ ಬೇರೆ, ಎಲ್ಲಿ ಹೋದಳೋ...? ಕಂಗಾಲಾಗಿ ದಡಬಡಿಸಿ ಎದ್ದು
ಜೋರು ದನಿಯಲ್ಲಿಯೇ... ಯಾರು ಯಾರೆಂದು ಪ್ರಶ್ನಿಸಿ
ಬಾಗಿಲ ತೆಗೆದಿದ್ದೆ ತಡ
ಹಸಿದ ಹೆಬ್ಬುಲಿ ಕಾದಂತೆ ಹತ್ತಾರು ಕೈಗಳು
ಒಮ್ಮಿಂದಲೊಮ್ಮೆ ಮುಖ ಮೂತಿ ನೋಡದೆ
ಹಿಗ್ಗಾ-ಮುಗ್ಗ ಎಲ್ಲಂದರಲ್ಲಿ ಹೊಡೆದ ಹೊಡೆತಕ್ಕೆ
ತುಟಿ ಒಡೆದು, ಮೂಗು ಬಾಯಲೆಲ್ಲಾ.... ರಕ್ತಸಿಕ್ತ
ಸೂ... ಮಗನಿಗೆ ಇನ್ನೆರಡು ತದಕ್ರಿ ಅಯ್ಯೋಗ್ಯನ ತಂದು
ಪ್ರೀತಿ ಮಾಡೋಕೆ, ಸುತ್ತಾಡೋಕೆ ಒಬ್ಬಳು
ಕಟ್ಕೊಂಡು ಸಂಸಾರ ಮಾಡೋಕೆ ಇನ್ನೊಬ್ಬಳು ಬೇಕು
ಒಳ ಹೋಗಿ ಅವಳನ್ನ ಎಳ್ಕೊಂಡ್ ಬನ್ರೋ..
ಬೇವರ್ಸಿ ನನ್ಮಕ್ಕಳಿಗೆ ತಲೆ ಬೋಳಿಸಿ, ಕತ್ತೆ ಮೇಲೆ ಕೂರಿಸಿ ಊರೆಲ್ಲಾ.... ಮೆರವಣಿಗೆ ಮಾಡ್ಬೇಕು
ಜನರ ಮಧ್ಯೆ ಅದೆಲ್ಲಿದ್ದಳೋ.... ಬಂದವಳೆ
ಚಪ್ಪಲಿಯಿಂದ ರಪ ರಪ ಬಾರಿಸಿದ್ದೇ... ಬಾರಿಸಿದ್ದು
ನಾಲ್ಕು ವರ್ಷಗಳಿಂದ ನಾ ಇವಳನ್ನೇನ...
ಇಷ್ಟಪಟ್ಟು, ಕಷ್ಟಪಟ್ಟು ಮನಸಾರೆ ಮೆಚ್ಚಿ,
ಪ್ರೀತಿಸಿ ಅಂತರಂಗದಲ್ಲಿರಿಸಿ ಆರಾಧಿಸಿದ್ದು
ಗುರೂ... ಇವಳೆಂಥಾ ಫಿಗರ್ರೂ... ನೋಡ್ ಗುರೂ...
ಕಳ್ಳಬಡ್ಡಿ ಮಗ ಇವಳಿಗೂ...ಬಸಿರು ಮಾಡಿರುವ ಯೋಚಿಸಲಾಗದಷ್ಟು ನಿತ್ರಾಣಗೊಂಡ ಮನ
ಅಯ್ಯೋ.... ಅಮ್ಮಾ..., ಅಣ್ಣಾ...
ತಂಗಿಯ ಕೂಗಿಗೆ
ಧರ ಧರನೆ ಎಳೆದು ಒದ್ದು ತರುವವರ ಕಂಡು
ಅದೆಲ್ಲಿತ್ತೋ.... ಕೋಪ ಸಿಕ್ಕ ಸಿಕ್ಕವರಿಗೆ ಬಡಿದಿದ್ದೆ
ನಾಲ್ಕಾರು ಜನರ ಸಾವಿಗೂ...ನಾ ಕಾರಣನಾಗಿದ್ದೆ.

Tuesday, June 24, 2014

" ವಿರಹ ನೂರು ನೂರು ತರಹ "

ಮೊದ ಮೊದಲು
ಆ ನಿನ್ನ  ಕುಡಿ ನೋಟ ಕಂಡು
ನಾ ಅಂದು ಸೋತು ಹೋದೆ
ಬರಿ ತೊದಲು ಏಕೊ
ನನ್ನೊಳಗಿನ ಮಾತ
ನಾ ನಿನಗೆ ಹೇಳದೆ ಹೋದೆ
ಮನಸ್ಸಿಗೂ ತುಸು ಭಾರ
ನಿದಿರೆಯೂ ಬರದು ತೀರ
ನೀ ಬರದೆ ಈ ಬೆಳದಿಂಗಳೂ
ನನ್ನೆ ಸುಡುತಿಹದು ಇಂದು
ಏಕೊ ಏನೋ ಕಾಣೆ ಜಾಣೆ


Saturday, June 21, 2014

" ನಾವೇ.... ಸ್ಟ್ರಾಂಗು " - ೨

ನನ್ನರ್ಧಾಂಗಿ ದಿಢೀರ್ ಫೋನಾಯಿಸಿ
ಮೊದಲು fb ಯಲ್ಲಿ ಬರೆದುದ ಡಿಲೀಟ್ ಮಾಡಿ
ಏನು ಹೆಣ್ಮಕ್ಕಳೆಂದರೆ ನಿಮಗೆ ಅಪಹಾಸ್ಯವೆ
ಒಂಚೂರು ಹೆಣ್ಣೆಂದರೆ ಭಯ , ಭಕ್ತಿಯಿಲ್ಲ
ಹೀಗೆಲ್ಲಾ ಚಿತ್ರ ಸಹಿತ ಬರೆದು ಪ್ರಕಟಿಸಿದರೆ
ಎಲ್ಲರೂ... ಮೆಚ್ಚುವರೆಂದು ಕೊಂಡಿರೋ ಹೇಗೆ ?
ಓದಿದ ಸ್ತ್ರೀಯರೆಲ್ಲ ಹಿಡಿ ಶಾಪ ಹಾಕಿಯಾರು
ನಮ್ಮದು ಸ್ತ್ರೀ ಸಂಘವಿದೆ ಗೊತ್ತೇ.... ನಿಮಗೆ ?
ಸೌಟು, ಲಟ್ಟಣಿಗೆ, ಪೊರಕೆಯಿಡಿದು ಪ್ರತಿಭಟಿಸಬೇಕಾದೀತು ತಪ್ಪಿದರೆ, ಸಂಜೆ ಮನೆಗೆ ಬಂದಾಗ ವರಪೂಜೆ ಗೊತ್ತಲ್ಲ !

ಇವಳದೊಳ್ಳೆ ಕತೆ ವ್ಯಥೆಯಾಯ್ತಲ್ಲ
ನಾನೇನು ಹೆಣ್ಮಕ್ಕಳ ಅಗೌರಿಸಿದೆನೆ ?
ನಾ ನಿನಗೆ ಹೀಗೆ ಹೆದರುವುದ ಕಂಡು ಮಿತ್ರರೆಲ್ಲಾ...
ಹೆಂಡತಿಗೆ ಯಾಕೆ ಹೆದರುತೀ ಒಂಚೂರು ಗುಂಡು ಹಾಕು ಆಮೇಲೆ ನೀನೆ ನೋಡು ಗುರೂ...
ಸ್ಟ್ರಾಂಗು ಅವರೋ... ನೀನೋ... ಗೊತ್ತಾಗುವುದು
ಮಾತಿಗೆ ಮಾತು ಬಂದು ಆಗ ಬರದದ್ದೇ....
ಹೀಗೇನು ಹೆಣ್ಮಕ್ಕಳೇ ಸ್ಟ್ರಾಂಗು ಬಿಡು
ಬೆವರೊರಸಿ ಕೊಂಡು ಫೋನ್ ಕುಕ್ಕಿದ್ದೆ
ಅವಳ ಮೇಲೆ ಕೋಪ ತೋರಿಸಲಾದೀತೆ !