Saturday, February 1, 2020
ಅಕ್ಷಯ
ನೆನಪುಗಳ ತೂಗುಯ್ಯಾಲೆಯಲ್ಲಿ
ಕಾರುಬಾರು
Thursday, March 7, 2019
ಲಟ್ಟಣಿಗೆ
ನನ್ನವಳು
ಲಟ್ಟಣಿಗೆಯಿಂದ
ಎಂದೂ ಹೊಡೆದವಳೇ ಅಲ್ಲ
ತಿರುಗಿಸುವ ಪರಿಗೆ
ನಾನೇ ಹೆದರಬೇಕಷ್ಟೆ;
ಹಲವರಿಗೆ ಅನುಮಾನ ಬಂದು
ನನ್ನ ತಲೆಯೊಳಗೆ ಕೈಯಾಡಿಸಿ
ಎಲ್ಲಿಯೂ ಗಾಯವಿಲ್ಲವಲ್ಲ ಗುರೂ
ಊದಿದ್ದರೆ ಗೊತ್ತಾಗುತ್ತಿತ್ತು
ಎಲ್ಲೋ ಮೂಗೇಟು ಬಿದ್ದಿರಬೇಕು
ಅತ್ತಿಗೆ ಮೆತ್ತಗೆ ಮೊಟಕಿರಬೇಕು.
Thursday, February 21, 2019
ಹೆಬ್ಬುಲಿ
ಲಟ್ಟಣಿಗೆಯಲ್ಲ
ಮೊಗಚೊ ಕೈ ತೋರಿಸಿದರೂ
ನಮ್ ಯಜಮಾನ್ರು ಹೆದರೋರಲ್ಲ
ಅವರ ಒಂದು ಕುಡಿ ನೋಟಕೆ
ಬಿಸಿಯುಸಿರಿನ ಶಾಖಕೆ,
ಅವರ ಬೆರಳ ಸ್ಪರ್ಶಕೆ
ನಾನೇ ಕರಗಿ ನೀರಾಗುವೆ
ಅಂತಹುದರಲ್ಲಿ ನೀನ್ಯಾವ ಲೆಕ್ಕ ?
ಹೇಗೂ ಈಗ ಯಜಮಾನರಿಲ್ಲ
ಇದ್ದಾಗ ತೋರಿಸು ನಿನ್ನಾರ್ಭಟ
ಹುಲ್ಲೆಯಾಗುವೆಯೊ
ಇಲ್ಲಾ... ಹೆಣ್ಣು ಹುಲಿಯಾಗುವೆಯೋ
ಕಾಲವೇ ನಿರ್ಧರಿಸಲಿ.
ಹೀಗೂ ಉಂಟೆ !?
ಎಕ್ಸಟ್ರೀಮ್ಲೀ....
ವೆರಿ ವೆರಿ ಸಾರಿ ಡಿಯರ್
ಈಗಷ್ಟೇ ನನಗೂ ವಿಷಯ ಗೊತ್ತಾಗಿದ್ದು,
ನಿಮ್ಮೀ ಸ್ಥಿತಿಗೆ ಅಳಬೇಕೋ, ನಗಬೇಕೋ
ನೋಡಲು ಬರೋಣ ಎಂದರೆ
ನಿಮ್ಮ ಅಡ್ರೆಸ್ಸೇ... ಗೊತ್ತಿಲ್ಲ
ನಾ ಇದ್ದದ್ದರೆ ಆ ಕತೆಯೇ
ಬೇರೆಯೇ ಇರುತ್ತಿತ್ತು.
ಆ ಇಬ್ಬರು ಹೆಂಡತಿಯರು ಅಷ್ಟೊಂದು
ಮುಖ ಮೂತಿ ನೋಡದೆ
ಚಚ್ಚುವಾಗ ನನ್ನ ನೆನಪಾಗಲಿಲ್ಲವೆ?
ನಾ ಹೆಚ್ಚೋ... ನೀ ಹೆಚ್ಚೋ... ಎಂದು
ಪೈಪೋಟಿಗೆ ಬಿದ್ದು ಹೊಡೆದಿರಬೇಕು.
ಕಾಲು ಮುರಿದದ್ದೋ..., ಅಥವಾ
ನಿಮ್ಮ ಹಲ್ಲನ್ನೊ...
ದುಃಖ ತಡೆದುಕೊಳ್ಳುವ ಶಕ್ತಿ
ಆ ಭಗವಂತ ಕೊಡಲಿ,
ಮುರಿದ ನಿಮ್ಮ ಮೂರು ಹಲ್ಲುಗಳಿಗೆ
ಇನ್ಶ್ಯೂರೆನ್ಸ್ ಆದರು ಇದ್ದಿದ್ದರೆ
ಕ್ಲೈಮ್ ಮಾಡಬಹುದಿತ್ತು.
ಯಾರಿವಳು?!
ಪರಿಚಯದವಳೂ ಅಲ್ಲ,
ಸಂಬಂಧಿಕಳೂ ಮೊದಲೇ ಅಲ್ಲ
ಬಂದ ಕೋಪಕ್ಕೆ ಯಾರ್ರೀ ನೀವು?
ನೀವೇನು Btvಯವರ,
ಅಥವಾ ಬೆನ್ನಿಗೆ ಬಿದ್ದಿರುವ ಬೇತಾಳನ
ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು
ಹಾಳದವಳು ಕೂಲಾಗಿ
ನಾ ನಿಮ್ಮ ಕನಸು ಎನ್ನಬೇಕೆ ?
#ಶಿವಚೆನ್ನ
Wednesday, February 20, 2019
#ಆಕರ್ಷಣೆ
ನನ್ನಾ... ನಿನ್ನ,
ಕಣ್ಣುಗಳು ಕಲೆತಾಗಲೆಲ್ಲ
ಆ ನಿನ್ನ ಕೆಣಕುವ
ಕುಡಿನೋಟಕೆ
ತುಟಿಗಳು ಕಂಪಿಸಿ,
ಮೈ ಮನ ಅರಳಿದರೂ
ಅದೇಕೋ ಮಾತು ಬಾರದು
ಹೆದರಿಕೆಯಿಂದಲ್ಲ,
ಎದೆಗಾರಿಕೆಯೂ ಅಲ್ಲ
ಮತ್ತೆ ಮತ್ತೆ ನೋಡ ಬೇಕೆಂಬ
ಮಂತ್ರಮಗ್ನತೆಯ ಭಾವ
#ಶಿವಚೆನ್ನ