Wednesday, May 29, 2013

ಸವಿ ಸವಿ ನೆನಪು

ಸತ್ಯಭಾಮಾ ಎಲ್ಲಿ....
ಆ... ಮಾಡು ಹಾಗೆ ...
ಏನ್ರೀ... ಇದೆಲ್ಲಾ ಈ ...
ವಯಸ್ಸಲ್ಲಿ, ಈ ಸಿಹಿ
ಮಲ್ಲಿಗೆಯ ಹೂ ಮಾಲೆ;
ಜರತಾರಿ ರೇಷ್ಮೇ ಸೀರೆ !
ಅಯ್ಯೋ ಪೆದ್ದೀ ನನಗೆ
ಪ್ರಮೋಶನ್ ಇಲ್ಲ
ಮಣ್ಣಂಗಟ್ಟೀಯೂ ಇಲ್ಲ
ಹಾ ಆಹಾ ನಾಚಿಕೆ ನೋಡು,
ನೆನಪು ಮಾಡಿಕೊಳ್ಳೇ
ಮರೆತೆಯೋ ಹೇಗೆ ಬೇಡದ
ಧಾರಾವಾಹಿಗಳ ಕತೆಗಳೆಲ್ಲವ
ಚಾಚೂ ತಪ್ಪದೆ
ಕಣ್ಣಿಗೆ ಕಟ್ಟುವ ಹಾಗೆ ಹೇಳುವೆ;
ಬಂದಳು ನೋಡು, ಮಗಳು
ನಿನ್ನ ಮೊಮ್ಮಗಳು ಈಗಲಾದರೂ
ಉಂ ಬಂತು ಬಿಡು, ಮೊಮ್ಮಗಳ
ಹುಟ್ಟಿದ ದಿನದ ಹಬ್ಬ,
ಅಯ್ಯೋ ಪೆದ್ದೀ ನನ್ನಾ ನಿನ್ನ
ಮದುವೆಯ ಇಪ್ಪತ್ತಾರರ
ವಾರ್ಷಿಕೋತ್ಸವ
ಈಗ ನೆನಪಿಗೆ ಬಂತೋ ಹೇಗೆ !

Monday, May 27, 2013

ಎಂಥಾ ವಿಪರ್ಯಾಸ

ಗಂಡ ಸತ್ತರೆ
ಹೆಂಡತಿ ವಿಧವೆ
ಮತ್ತಾಗುವಂತಿಲ್ಲ
ಮರು ಮದುವೆ;
ಅವಳ ಕನಸುಗಳೆಲ್ಲಾ
ಛಿದ್ರ ಛಿದ್ರ !

ಹೆಂಡತಿ ಸತ್ತರೆ
ಗಂಡ ವಿಧುರ
ಸತ್ತವಳ ಮರೆತು
ಮತ್ತೊಮ್ಮೆ ಸಪ್ತಪದಿ;
ಅವನ ಸಂಸಾರ
ಮತ್ತಷ್ಟು ಸುಭದ್ರ !

Friday, May 24, 2013

" ಒಲಿದು ಬಾ ನನ್ನೊಲವೆ "

ಒಲಿದು ಬಾ ನನ್ನೊಲವೆ
ಇಳಿದು ಬಾ ನನ್ನೊಲುಮೆ
ವರಿಸು ನನ್ನತ್ತೆಯ ಮಗಳೇ
ಈ ಮುನಿಸು ಇನ್ನೇಕೆ ಮರುಳೇ !

ನಿನಗಾಗಿ ಬಂದಿಹೆ, ನಿದಿರೆ ತೊರೆದೆದ್ದು ಬಾ
ನಿನಗಾಗಿ ಕಾದಿಹೆ, ಕನಸ ಕಡಿದೆದ್ದು ನೀ ಬಾ
ನೀ ನನ್ನ ಕೊಲ್ಲದೆ, ನಿಂತಲ್ಲೇ ನೀ ನಿಲ್ಲದೇ
ನೀ ಓಡೋಡಿ ಬಂದೆನ್ನ ಬರಸೆಳೆದಪ್ಪು ಬಾ !

ನೀ ನನ್ನ ಬಾಳ ಉದ್ದರಿಸಲೂ ಬಾ
ನೀ ನನ್ನ ಕೈಹಿಡಿದು ನಡೆಸು ಬಾ
ನೀ ನನ್ನೆದೆಯ ದೇವಿಯಾಗು ಬಾ
ಬಾರೆ ಬಾ ಮನ ಮಂದಾರ ನೀನಾಗು ಬಾ !

ಧಣಿದ ಮನಕ್ಕಿಂದು
ಧಗೆಗೆ ಮನ ನೊಂದು
ಬಳಲಿ ಬಾಯಾರಿರುವೆ
ನಿನ್ನೊಲವ ಮಳೆ ಸುರಿಸು ಬಾ !

ನೀನಿರದ ಈ ಜಗವು ನನಗೇಕೆ
ನೀನಿರದ ಈ ಕನಸು ನನಗೇಕೆ
ನೀ ಬರದೆ ಈ ಬಾಳು ಬೆಳಕಾಗದೇ
ಬಾರೆ ಬಾ ನೀ ಉಸಿರ ಉಸಿರಾಗಿ ಬಾ !

ನಿನ್ನ ಸಂಗದಲಿ ನನ್ನ ಅಂಗಾಂಗದಲಿ
ಪುಟಿದೆದ್ದ ಕಾಮನೆಯ ನೀ ತಣಿಸು ಬಾ
ಮೆರೆಸು ಬಾ, ಮೈ ಮರೆಸಿ ನಿನ್ನದರಗಳ
ಸವಿ ಜೇನ ಸಿಹಿ ಹನಿಯ ಉಣ ಬಡಿಸು ಬಾ !

Thursday, May 23, 2013

ಹೀಗೊಂದು ಕನಸು

ಬೆಳ್ಳಂ ಬೆಳಿಗ್ಗೆಯೇ.....
ಬುಡು ಬುಡುಕೆಯವನು
ಮನೆ ಮುಂದೆ ಬಂದು
ಬಾಯ್ ಬಡಕ್ಕೋತ್ತಿದ್ದ
ಬಿಟ್ ಬಿಡಿ, ಬಿಟ್ ಬಿಡಿ
ಬರೆಯೋದೆಲ್ಲಾ ನೀವ್
ಈಗ್ಲಿಂದಲೇ ಬಿಟ್ ಬಿಡಿ
ಇಲ್ಲಾಂದ್ರೆ ತಲೆಯಲ್ಲಾ
ಕೆರಕ್ಕೊಳ್ಳಕ್ಕೂ ಕೂದ್ಲು
ಇನ್ಮುಂದೆ ಇರೊಂಗಿಲ್ಲ !

ನನ್ಗೆ ಮೈಯೆಲ್ಲಾ ಕೋಪ
ನೆತ್ತಿಗೇರಿ, ಕುತ್ಗೆ ಹಿಡಿದು
ಏಯ್ ಬುಡ್ ಬುಡ್ಕೇನೇ
ಸಾಕ್ ನಿಲ್ಸಯ್ಯ, ನಿನ್ನ ವರಸೆ
ಏನೋ ಅಲ್ಲೊಂದಿಲ್ಲೊಂದು
ನನ್ನ ಇಷ್ಟಕ್ಕೆ ಬರ್ಕೋತೀನಿ
ನನ್ನ ಮನೆ ಮುಂದೆ ಬಂದು
ಬುಟ್ ಬುಡಿ ಅಂತೇಳಕ್ಕೆ
ನಿನಗೆಷ್ಟು ಧೈರ್ಯನಯ್ಯ
ನೀನ್ ಯಾವೂರ್ ದಾಸಯ್ಯ
ಹೋಗಯ್ಯ ಇಲ್ಲಿಂದ ಎಂದು
ನನ್ನವಳ ಹಾಸಿಗೆಯಿಂದ ಕೆಳಕ್ಕೆ
ತಳ್ಳುತ್ತಿದ್ದೆ, ನನ್ನವಳು ಕೋಪದಿಂದ
ರ್ರೀ.. ಹೇಳ್ರೀ ಬೆಳಗಾಯ್ತು, ಏನ್
ಕನಸ್ಸ್ ಕಾಣ್ತೀರೋ.... ಏನೋ..
ಎದ್ದೋಗಿ ರಾಶಿ ಬಿದ್ದಿರೊ ಪಾತ್ರೆ ತೊಳ್ದು,
ಕಾಫೀ ತಗೊಂಡ್ ಬೇಗ್ ಬನ್ರೀ.. !!

Wednesday, May 22, 2013

ಗೆಳತಿ ನಿನಗಿದು ಅರ್ಪಣೆ

ಎದೆ ತುಂಬಿ ಬಂತು
ಆ ನಿನ್ನ ನೆನಪು,
ಮತ್ತೆ ಮತ್ತೆ
ಬಂದೆನ್ನ ಕಾಡುವುದು;
ನಿನ್ನ ಹುಚ್ಚು ಪ್ರೀತಿಯ
ಮಳೆಗೆ ಕೊಚ್ಚಿ
ಹೋಗಿಹೆನಿಂದು,
ನಾ ಕಣ್ಮುಚ್ಚಿ ಕುಳಿತರೂ
ಆ ನಿನ್ನ ನಗೆಯ
ಪ್ರತಿರೂಪದ ಬಿಂಬ;
ಬಂದೆನ್ನ ಕಾಡುತಿಹದು
ಹೇಗೆ ಹೇಳಲಿ ಹೇಳು
ಈ ಹೃದಯ ಬಗೆದಗೆದು
ತೋರಲೆ ನಿನಗಿಂದು,
ನಿನ್ನ ನಾ ಮೆಚ್ಚಿಸಲು
ಬೆಟ್ಟ ಹತ್ತಿ ನಾ ಇಳಿಯಲೇ
ನಿನ್ನ ಹೊತ್ತೆತ್ತು ತಿರುಗಲೇ
ಮುತ್ತಿತ್ತು ಹೋದವಳು;
ಹೊತ್ತು ಮೀರಿ
ಬರಬಹುದೆಂದು
ಗೊತ್ತು ಗುರಿಯಿಲ್ಲದೆ
ನಾ ನಿದ್ದೆ ಮಾಡದೆ ಕಾದೆನು !

ಮೊದಲ ರಾತ್ರಿ ( First night )

ಅಳಿಯಂದ್ರೇ.... ಸಂಕೋಚ ಬೇಡಿ
ತಿನ್ನೀಯಪ್ಪಾ.. ಅತ್ತೆಯ ಉಪಚಾರ
ಬಗೆ ಬಗೆಯ ತಿಂಡಿ, ಹಣ್ಣು ಹಂಪಲು
ಸಿಹಿ, ತರಹೆವಾರಿ ಭಕ್ಷ ಖಾಧ್ಯಗಳು !

ಒಂದೇ ಎರಡೇ, ನಳಪಾಕದ ಮೃಷ್ಟಾನ್ನ
ತುಪ್ಪದ, ಘಮ ಘಮಿಸುವ ಸುಪರಿಮಳ
ಹೊಸ ಮದುವೆಯ ಹೆಣ್ಣು ಗಂಡಿಗೆ ಅಘ್ರ
ಬಾಳೆ ಎಲೆಯ ಮೇಲೆ ಭೂರೀ ಭೋಜನ !

ಅತ್ತೆಮಾವರ ಆದರಾಭಿಮಾನಕ್ಕೆ
ತಿನ್ನಲಾಗದೆ ನನ್ನವಳ ಕಡೆಯೇ
ದುರಗುಟ್ಟಿದ್ದೆ, ಮೆಲ್ಲಗೆ ಇಲ್ಲಿ ತಿನ್ನಿರಿ
ಅಲ್ಲಿ ನನ್ನ ತಿನ್ನುವರಂತೆ ನಕ್ಕಿದ್ದಳು !

ನಾದಿನಿ ಬಂದು, ಭಾವ ನನಗಾಗಿ ಈ
ಕಾಯಿ ಹೋಳಿಗೆ, ಬಾದಾಮಿ ಹಾಲು
ಕಲಸಿ ತಿನ್ನಿ, ಈ ರುಚಿಯ ಮುಂದೆಲ್ಲ
ಬೇರೆಲ್ಲವೂ ಸಪ್ಪೆ ಸಪ್ಪೆ, ಅಕ್ಕನ ಬಿಟ್ಟು
ನನ್ನ ಹಿಂದೆ ಬರುವಿರೆಂದು ನಗಾಡಿದ್ದಳು !

ನನ್ನೊಬ್ಬನಿಗೆ ಬಡಿಸಿದರೇಗೆ " ಪ್ರಿಯಾ "
ನಿನ್ನಕ್ಕನಿಗೂ ಚೆನ್ನಾಗಿ ತಿನ್ನಿಸಿದರಲ್ಲವೇ
ಹೋರಾಡಲು ಹೆಚ್ಚು ಶಕ್ತಿ ಬರುವುದು
ನಾನು ನನ್ನವಳಿಗೆ ಬೇಡವೆಂದರೂ
ಬಿಡದೆ ಹಟಕ್ಕೆ ಬಿದ್ದು ತಿನ್ನಿಸಿದ್ದೆ ಎನ್ನಿ !

ಅಯ್ಯೋ ವಕ್ರತುಂಡಾ ಚೌತಿಗೆ ಬಂದು
ಹೊಟ್ಟೆ ಬಿರಿಯ ಮೋದಕವ ತಿಂದಂತೆ
ಈ ಹೊಟ್ಟೆ ಉಬ್ಬಸಕ್ಕೆ ಪರಿಹಾರವಿಲ್ಲವೇ
ನಮ್ಮಿಬ್ಬರಿಗೂ ಕಷ್ಟ ಕೊಟ್ಟೆಯಲ್ಲೋ ಗಣಪ !

ಲೋ..ಮೋಹನ ಅಜೀರ್ಣಕ್ಕೆ ಯಾವುದಾರೂ
ಗುಳಿಗೆ ತಗೋಂಡು ಬಾರೋ ನಿಮ್ಮ ಭಾವನಿಗೆ ಅಯ್ಯೋ.... ಅಕ್ಕಾ ಗಂಟೆ ಹತ್ತಾಯಿತಲ್ಲೇ ಎಲ್ಲಾ ಮೆಡಿಕಲ್ ಶಾಪು ಮುಚ್ಚಿರುತ್ತೆ, ಶೆಟ್ಟರಂಗಡಿಯಲ್ಲಿ ತರುವೆನೆಂದು ನನ್ನವಳ ತಮ್ಮ ಹೊರಟಿದ್ದ !!

ಭಾವಾ ತಗೊಳ್ಳಿ ಅಜೀರ್ಣಕ್ಕೆ ಈ ಗುಳಿಗೆಯ
ಇಬ್ಬರೂ ತಿಂದಿದ್ದೆವು, ನನ್ನವಳು ಅಲಾಂಕರಕ್ಕೆ
ನಾ ಪ್ರಸ್ತದ ಕೋಣೆಗೆ, ಮಲ್ಲಿಗೆಯ ಸುವಾಸನೆ
ನನ್ನಲ್ಲಿ ಮತ್ತಷ್ಟು, ನವ ಚೈತನ್ಯ ತಂದಿತ್ತು !

ಮಲ್ಲಿಗೆ ಜಾಜಿ, ಕನಕಾಂಭರ ಕನೈದಿಲೆ, ಸಂಪಿಗೆ ಗುಲಾಬಿ, ಇಡೀ ಮಂಚವೇ ಹೂಗಳಿಂದ ತುಂಬಿತ್ತು ಪನ್ನೀರಿನ ಪರಿಮಳ, ಚಿತ್ತಾಕರ್ಷಕ ಚಿತ್ರಪಟಗಳು
ಹಿತ ಮಿತವಾದ ಸಂಗೀತ, ಧೂಪದ ಸುಗಂದ !

ಸುಮಂಗಲೆಯರ ಕಿಲಕಿಲ ನಗು, ಗೆಜ್ಜೆ ನೂಪುರ ಸರ್ವಲಾಂಕರ ಭೂಷಿತೆ, ದೇವಲೋಕದ ಅಪ್ಸರೆ
ಯರ ನಾಚಿಸುವಂತಿತ್ತು, ನನ್ನವಳ ನಾಚಿಕೆಯ
ಸಿರಿ ಸೊಬಗು,, ಸ್ವರ್ಗಕ್ಕೆ ಇನ್ನು ಮೂರೇ ಗೇಣು !

ರ್ರೀ...ಈಗ ಹೇಗಿದೆ ನಿಮಗೆ, ಈ ಹಾಲು ಕುಡೀರಿ
ಉ ಉಂ ಉಂ ಈ ಹಾಲೆಲ್ಲ ಬೇಡ ನನ್ನ ಚಿನ್ನಾ
ಒಂದು ನಿಮಿಷ ಬಂದೆ ತಾಳು, ಬಾತ್ ರೂಮಿಗೆ
ಹೊರಟೆ, ಇನ್ನೇನು ಕೂರ ಬೇಕು ನನ್ನವಳ ಕರೆ !

ರ್ರೀ... ಬೇಗ್ ಬನ್ರೀ... ಎಷ್ಟೊತ್ತ್ರೀ ಕಾಯೋದು
ನಂಗೆ ತಡಕೊಳ್ಳಕ್ಕಾತ್ತಿಲ್ಲ ಬೇಗ್ ಬನ್ನೀಯಪ್ಪ
ನಾ ಬಂದ ಒಡನೆಯೇ ಅವಳು, ತದನಂತರ
ನಾನು,ಇಡೀ ರಾತ್ರಿ ಇಬ್ಬರಿಗೂ ಭೇದಿಯಿಂದ
ಜಾಗರಣೆ !

Tuesday, May 21, 2013

ಗರ್ಭಾಂಕುರ

ನನ್ನ ಮಳೆಗೆ
ನನ್ನವಳು ನೆನೆದು
ನೆಲೆ ತಪ್ಪಿದವಳಿಗೀಗ
ಮೂರು ತಿಂಗಳುಗಳು;
ಮುಟ್ಟಲೂ ಭಯವೀಗ
ಕಟ್ಟಿರುವ ಗರ್ಭದ
ಕಟ್ಟೆಯೊಡದೀತೆಂದು,
ನವ ಮಾಸಗಳವರೆಗೆ
ನಾ ಕಾಯಬೇಕಲ್ಲಾ ಎಂದು !