Thursday, October 10, 2013

ಪ್ರಾಮಾಣಿಕ

ಅರ್ರೇ.. ಇದೇನ್ರೀ... ಇಷ್ಟೆಲ್ಲಾ
ಹಾರ ತುರಾಯಿ, ಹಣ್ಣು-ಹಂಪಲು
ರಿಟೈರ್ಡ್ ಆಗೋ ವಯಸ್ಸು ನಿಮ್ಮದಲ್ಲ;
ರೈಟರ್ ಅಂತೂ ನೀವು ಅಲ್ಲವೇ ಅಲ್ಲ
ನನಗೇನೋ ಅನುಮಾನ ಬೇಗ ಹೇಳ್ರೀ !

ಲಂಚ ಗಿಂಚ ಪಡೆದು, ಭ್ರಷ್ಟರ ಕೆಲಸ ಮಾಡಿ
ಖುಷಿಗೆ ನಿಮ್ಮನ್ನ ಸನ್ಮಾನಿಸಿದರೋ ಹೇಗೆ
ನೀವು ಅಂತಹವರಲ್ಲ ನನಗೂ ಗೊತ್ತು ಬಿಡಿ,
ಆದರೂ ಏನೋ ತಡೆಯಲಾರದ ಕುತೂಹಲ !

ಅಯ್ಯೋ ಮಾರಾಯ್ತಿ ಸ್ವಲ್ಪ ತಾಳೇ,
ನಿಂದೊಳ್ಳೆ ಪಂಚಾಯ್ತಿ ಪತ್ತೇದಾರಿಕೆ
ನೀ ಸುಮ್ಮನಿರು ಕೊಂಚ ಸುಧಾರಿಸಿ ಕೊಳ್ಳುವೆ
ನೀ ಹೀಗೆ ಒಂದೇ ಸಮ, ನನ್ನ ಕೇಳಿದರೆ ಹೇಗೆ ?

ಕುಡಿಯಲು ತಣ್ಣನೆಯ ನೀರು ತಂದು ಕೊಡು
ಹಾಗೆಯೇ ಒಂಚೂರು ಕಾಫಿಯ  ಮಾಡು
ನಾ ಸರ್ಕಾರಿ ಸೇವೆಗೆ ಸಲಾಮ್ ಹೊಡೆದು
ಸ್ವಯಂ ನಿವೃತ್ತಿಯ ಪಡೆದು ಬಂದಿರುವೆ

ಇನ್ಮೇಲೆ ಊರೂರು ಅಲೆಯುವಂತಿಲ್ಲ
ವರ್ಷಾವರ್ಷ ವರ್ಗಾವಣೆಯ ಜಂಜಾಟವಿಲ್ಲ
ಹಾಯಾಗಿ ನೆಮ್ಮದಿಯಿಂದ ಜೀವನ ಮಾಡುವ !

2 comments:

  1. ಸರ್ಕಾರೀ ಕೆಲಸವೆಂದರೆ ಅದು ಬಂಗಾರದ ಕೋಳಿ ಮೊಟ್ಟೆ ಇಡುವ ಕೋಳಿ ಎಂದೇ ಆಕೆ ನಂಬಿರಬಹುದು. ಆಘಾತವಾಗಿರಬಹುದು ಆಕೆಗೆ! :(

    ReplyDelete
  2. ಲಂಚವೆಂದರೆ ಅವಳಿಗೂ ಆಗದು, ಇದ್ದುದರಲ್ಲಿ ಸಂಸಾರವ ನಿಭಾಯಿಸಿ ಸೈ ಎನ್ನಿಸಿ ಕೊಂಡವಳು ಬದರಿಜಿ.

    ReplyDelete