Thursday, February 21, 2019

ಹೆಬ್ಬುಲಿ

ಲಟ್ಟಣಿಗೆಯಲ್ಲ
ಮೊಗಚೊ ಕೈ ತೋರಿಸಿದರೂ
ನಮ್ ಯಜಮಾನ್ರು ಹೆದರೋರಲ್ಲ
ಅವರ ಒಂದು ಕುಡಿ ನೋಟಕೆ
ಬಿಸಿಯುಸಿರಿನ ಶಾಖಕೆ,
ಅವರ ಬೆರಳ ಸ್ಪರ್ಶಕೆ
ನಾನೇ ಕರಗಿ ನೀರಾಗುವೆ
ಅಂತಹುದರಲ್ಲಿ ನೀನ್ಯಾವ ಲೆಕ್ಕ ?
ಹೇಗೂ ಈಗ ಯಜಮಾನರಿಲ್ಲ
ಇದ್ದಾಗ ತೋರಿಸು ನಿನ್ನಾರ್ಭಟ
ಹುಲ್ಲೆಯಾಗುವೆಯೊ
ಇಲ್ಲಾ... ಹೆಣ್ಣು ಹುಲಿಯಾಗುವೆಯೋ
ಕಾಲವೇ ನಿರ್ಧರಿಸಲಿ.

ಹೀಗೂ ಉಂಟೆ !?

ಎಕ್ಸಟ್ರೀಮ್ಲೀ....
ವೆರಿ ವೆರಿ ಸಾರಿ ಡಿಯರ್
ಈಗಷ್ಟೇ ನನಗೂ ವಿಷಯ ಗೊತ್ತಾಗಿದ್ದು,
ನಿಮ್ಮೀ ಸ್ಥಿತಿಗೆ ಅಳಬೇಕೋ, ನಗಬೇಕೋ
ನೋಡಲು ಬರೋಣ ಎಂದರೆ
ನಿಮ್ಮ ಅಡ್ರೆಸ್ಸೇ... ಗೊತ್ತಿಲ್ಲ
ನಾ ಇದ್ದದ್ದರೆ ಆ ಕತೆಯೇ
ಬೇರೆಯೇ ಇರುತ್ತಿತ್ತು.
ಆ ಇಬ್ಬರು ಹೆಂಡತಿಯರು ಅಷ್ಟೊಂದು
ಮುಖ ಮೂತಿ ನೋಡದೆ
ಚಚ್ಚುವಾಗ ನನ್ನ ನೆನಪಾಗಲಿಲ್ಲವೆ? 
ನಾ ಹೆಚ್ಚೋ... ನೀ ಹೆಚ್ಚೋ... ಎಂದು
ಪೈಪೋಟಿಗೆ ಬಿದ್ದು ಹೊಡೆದಿರಬೇಕು.
ಕಾಲು ಮುರಿದದ್ದೋ..., ಅಥವಾ
ನಿಮ್ಮ ಹಲ್ಲನ್ನೊ...
ದುಃಖ ತಡೆದುಕೊಳ್ಳುವ ಶಕ್ತಿ
ಆ ಭಗವಂತ ಕೊಡಲಿ,
ಮುರಿದ ನಿಮ್ಮ ಮೂರು ಹಲ್ಲುಗಳಿಗೆ
ಇನ್ಶ್ಯೂರೆನ್ಸ್ ಆದರು ಇದ್ದಿದ್ದರೆ
ಕ್ಲೈಮ್ ಮಾಡಬಹುದಿತ್ತು.

ಯಾರಿವಳು?!
ಪರಿಚಯದವಳೂ ಅಲ್ಲ,
ಸಂಬಂಧಿಕಳೂ ಮೊದಲೇ ಅಲ್ಲ
ಬಂದ ಕೋಪಕ್ಕೆ ಯಾರ್ರೀ ನೀವು?
ನೀವೇನು Btvಯವರ,
ಅಥವಾ ಬೆನ್ನಿಗೆ ಬಿದ್ದಿರುವ ಬೇತಾಳನ
ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು
ಹಾಳದವಳು ಕೂಲಾಗಿ
ನಾ ನಿಮ್ಮ ಕನಸು ಎನ್ನಬೇಕೆ ?
#ಶಿವಚೆನ್ನ 

Wednesday, February 20, 2019

#ಆಕರ್ಷಣೆ

ನನ್ನಾ...  ನಿನ್ನ,
ಕಣ್ಣುಗಳು ಕಲೆತಾಗಲೆಲ್ಲ
ಆ ನಿನ್ನ ಕೆಣಕುವ
ಕುಡಿನೋಟಕೆ
ತುಟಿಗಳು ಕಂಪಿಸಿ,
ಮೈ ಮನ ಅರಳಿದರೂ
ಅದೇಕೋ ಮಾತು ಬಾರದು
ಹೆದರಿಕೆಯಿಂದಲ್ಲ,
ಎದೆಗಾರಿಕೆಯೂ ಅಲ್ಲ
ಮತ್ತೆ ಮತ್ತೆ ನೋಡ ಬೇಕೆಂಬ
ಮಂತ್ರಮಗ್ನತೆಯ ಭಾವ
#ಶಿವಚೆನ್ನ

Sunday, February 10, 2019

#ಅತ್ತೆ_ತೋಡಿದ_ಹಳ್ಳಕ್ಕೆ_ಬಿದ್ದಿದ್ದು_ನಾನೋ_ಅಥವಾ_ನನ್ನವಳೊ


ನಿಮ್ಮಮ್ಮನ ಲೆಕ್ಕಾಚಾರದ ಮುಂದೆ
ನನ್ನ ನಿನ್ನ ಆಟ,
ಈ ಊರ ದೊರೆಯ ಲೆಕ್ಕವೂ ಲೆಕ್ಕಕ್ಕಿಲ್ಲ ಬಿಡು
ಸೆಕೆಂಡ್ ಯುನಿಟ್ ನ ಪರಿಕಲ್ಪನೆ,
ಅಡಿಪಾಯ, ಬಂಡವಾಳ
ಎಲ್ಲವೂ ನಿನ್ನ ಅಮ್ಮನದ್ದೆ;
ಮೊದಮೊದಲು ನನಗೂ ಇಷ್ಟವಿರಲಿಲ್ಲ
ಎಷ್ಟೇ ಆದರೂ ನನ್ನ ಅತ್ತೆಯಲ್ಲವೆ
ಹೆಣ್ಣು,ಹಣ್ಣು ಬಿಟ್ಟಿಯಾಗಿ ಸಿಗುವಾಗ ಬಿಟ್ಟವರುಂಟೆ ?
ಗಂಟು ಉಳಿಯಲಿ, ನಂಟೂ ಬೆಳೆಯಲಿ ಎನ್ನುವ ಜಾಯಮಾನ
ಇದರಿಂದ ನಿನಗೆ ನನಗೆ ಏನೂ ನಷ್ಟವಿಲ್ಲ
ಬರುವ ಶುಕ್ರವಾರದ ದಿನದಂದೆ
ಸೆಕೆಂಡ್ ಯುನಿಟ್ ನ ಉದ್ಘಾಟನೆ
ನೀ ಸಮ್ಮತಿಸಿದರೆ ನಿನಗೂ ಆತ್ಮೀಯ ಆಹ್ವಾನ
ಇಲ್ಲದಿದ್ದರೆ ಇದ್ದೇ ಇದೆ
ನಿಮ್ಮಮ್ಮನ ಸಮ್ಮುಖದಲ್ಲಿಯೇ ಮುಹೂರ್ತ
ಅಂದಿನ ರಾತ್ರಿಯೇ ಭೂರಿಭೋಜನ
ಇದೆಲ್ಲ ನಿನಗೆಲ್ಲಿ ಗೊತ್ತಾಗಬೇಕು
ಮಹಾರಾಣಿಯಂತೆ ಅಂತಃಪುರದಲ್ಲಿಯೇ ಇದ್ದುಬಿಡು
ಒಂದನ್ನೇ‌....‌  ನಿಭಾಸಿದ ಈ ಭೂಪನಿಗೆ
ಎರಡನೆಯದು ನಿಭಾಯಿಸಲು ಕಷ್ಟವೆ ?
-ಶಿವಚೆನ್ನ

Wednesday, February 6, 2019

ನಿನ್ನ ಕ್ಷಮೆ ಕೇಳಲೂ ನಾ ಅರ್ಹನಲ್ಲ


ನಿನ್ನದಲ್ಲದ ನನ್ನ ತಪ್ಪಿಗೆ
ಶಿಕ್ಷೆಯಾಗಿದ್ದು ನಿನಗೆ ಮಾತ್ರ
ಇಂದಿಗೂ ನನ್ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ
ಅಂದು ಆ ನಿನ್ನ ನಿಟ್ಟುಸಿರಿನ ನೋಟದಲ್ಲಿ
ಅದೆಷ್ಟು ನೋವು ತುಂಬಿತ್ತೋ...
ನೀ ನನ್ನ ಮರೆಯುವಷ್ಟು ದಿನ,
ಹಗಲು,ರಾತ್ರಿ ಅದೆಷ್ಟು ನೀ ಅತ್ತಿರಬೇಕು
ಓಡಿಹೋದ ರಣಹೇಡಿ
ನಾಚಿಕೆಯಾಗಬೇಕು ನನ್ನೀ ಜನ್ಮಕ್ಕೆ
ಮನಸಾರೆ ಹಿಡಿ ಶಾಪ ಹಾಕಿಬಿಡು
ಅಷ್ಟೂ ಶಾಪ ತಟ್ಟನೆ ತಟ್ಟಿಬಿಡಲಿ
ಎಲ್ಲರೆದಿರೂ ನಗೆಯ ಮುಖವಾಡ ಧರಿಸಿ
ಓಡಾಡುತ್ತಿರುವ ನಯವಂಚಕ ನಾನು

Monday, February 4, 2019

ಅವಳ ನೆನಪುಗಳ ಜೋಕಾಲಿಯಲ್ಲಿ

ಇಲ್ಲೆ ಎಲ್ಲೋ‌‌...
ಯಾರ ಕಣ್ಣಿಗೂ ಕಾಣದೆ
ಅಡಗಿ ಕುಳಿತಿರುವಳೋ
ಗುಟುರು ಹಾಕಿದಿರೆಂದು
ನಿಮ್ಮ ಮೇಲಿನ ಮುನಿಸಿಗೆ
ಮುಸಿಮುಸಿ ನಕ್ಕ ನನಗೂ
ಏನು ಕಾದಿದೆಯೋ
ಕಾದ ಬಾಣಲೆಯಂತಾಗಿದೆ
ನನ್ನೀ ಮನಸ್ಸು
ಹಾಳು ವಯಸ್ಸು ಕೇಳಬೇಕಲ್ಲ
ಬೇಡ ಬೇಡವೆಂದರೂ
ಅವಳ ಕಣ್ತುಂಬಿಕೊಳ್ಳಬೇಕೆಂಬ ತವಕ
ಕಂಡರಂತೂ ಹೇಳಿ ಕೊಳ್ಳಲಾಗದು
ಮೈಮನಸ್ಸುಗಳ ಪುಳಕ

ಪೂರ್ಣಿಮಾ

ಹುಣ್ಣಿಮೆಯ ಕಂಡು
ಉಬ್ಬೇರೊ ಆ ಅಲೆಗಳಿಗೂ
ನನಗೂ ಸಾಮ್ಯತೆ ಇದೆ ನಲ್ಲೆ
ಅಲ್ಲಿ ಚಂದಿರನ ಶರಶೀತಲ;
ಮನದಾಗಸದ ತುಂಬೆಲ್ಲ
ನಿನ್ನ ಪೂರ್ಣಚಂದಿರನಂತಿಹ
ಮುಖಕಮಲ
-ಶಿವಚೆನ್ನ