Monday, July 28, 2014

ಏ.... ಥೂ....!!

ಏನ್ ಕರಿಯಪ್ಪಣ್ಣೋ.... ನಿನಗುವೆ ಬಂತೆ ಕಣ್ಗೆ ಕನ್ನಡಕ 
ಏನ್ ಮಾಡಿಯೇಳು ಕ್ಯಾಮಿಲ್ದೆ ಕೂತು ಕೂತು
ಓಸಿ ಪೇಪರ್, ಓಸಿ ಪುಸ್ತಕವ ಈ ಪಾಟಿ ಓದಿ ಓದಿ
ಕಣ್ ಕುರುಡಾಗ್ದೆ ಇನ್ನೇನ್ ಆದೀತ್ ಹೇಳು
ಏನ್ಲಾ..... ಬೊಗಳ್ದೆ ಬಡ್ಡೆತ್ತದೇ...... ಮೈಗೆ ಹೆಂಗೈತೆ
ತಗುದ್ ಬುಟ್ಟಾ ಅಂದ್ರೆ ನಿಮ್ ಅವ್ವ ಗೆಪ್ತಿಗ್ ಬರ್ಬೇಕು
ಏ..... ಅಂಗಲ್ಲಣ್ಣೋ.... ನಾ ಹೇಳಿದ್ದು
ಕೆರಿ ಕಡೆ ಹೋಗ್ಲಿಲ್ವೇ..... ಅಂತ
ನಿಮ್ ಅವ್ವ ಬತ್ತಾಳೇನು ಕೆರೀ ಕಡೆ ಮೀನ್ ಇಡ್ಕೊಡ್ತೀನಿ
ಏ.... ಥೂ....!!!!
ಕೆರ ಕಿತ್ತೋಗ್ತದೆ....!!
ಹ್ಞಾಂ...... ಏನ್ಲಾ ಹೇಳ್ದೇ ಬಾಡ್ಕೋ... ಬದ್ಮಾಷ್
ಏ... ಕೆರ ಹರಿಯೋ... ಅಂಗೆ ನಾನೇನು ಹೊಡೀತಿನಿ ಅಂದ್ನೇ
ಕೆರ ಕಿತ್ತೋಗೈತೆ ಅಂದ್ನಪ್ಪಾ....
ಇಷ್ಟಕ್ಕೇ... ನೀ ಸಿಟ್ಟಾಗ್ಬೇಡಣ್ಣೋ....

Sunday, July 27, 2014

" ನೀವು ಪೊಲೀಸ್ಸೇ ".....!!

ಏನಾಯಿತೇ.... ಮಾರಾಯ್ತಿ, ತರಕಾರಿ ತರದೆ
ಇಷ್ಟೊಂದು ಗಾಭರಿಯಿಂದ ಬರುತ್ತಿರುವೆ...?!
ನಾಯಿ ಏನಾದರು ಅಟ್ಟಿಸಿಕೊಂಡು ಬಂತೆ
ಅಥವಾ ಇನ್ನೇನಾದರು ಕಂಡು ಭಯಪಟ್ಟೆಯೋ....!!
ರ್ರೀ ... ಅದು ಅದು ಪೊ ಪೊ ಪೊ ಪೊಲೀಸ್
ನಿಮ್ಮ ಹೆಸರ ಕೇಳಿ, ಮನೆ ಯಾವುದೆಂದರು
ತೋರಿಸಿ ಜೋರು ನಡೆಗೆಯಲ್ಲಿ ಬಂದೆ;
ನೀವೇನಾದರು ತಪ್ಪು ಮಾಡಿ ಬಂದಿರೋ... ಹೇಗೆ ?
ಒಮ್ಮೊಮ್ಮೆ ಹೊತ್ತುಗೂತ್ತಿಲ್ಲದೆ ಸರಿರಾತ್ರಿಯಲ್ಲಿ ಬರುವಿರಿ ಕೇಳಿದರೆ ಏನೇನೋ ಹೇಳಿ ಬಾಯಿ ಮುಚ್ಚಿಸುವಿರಿ
ಈಗ ನೋಡಿ ಮನೆ ಮಾನ ಮರ್ಯಾದೆ ಎಲ್ಲಾ ಹೋಯ್ತು
ಲೇ ಲೇ.... ನನ್ನದೇನೂ... ತಪ್ಪಿಲ್ಲವೆ ಮಾರಾಯ್ತಿ
ನನ್ನನ್ನೇನು ಕಳ್ಳ, ಕೊಲೆಗಡುಕನೆಂದು ತಿಳಿದೆಯೋ... ಹೇಗೆ ? ಬರಲಿ ಬಿಡು, ಬಂದದ್ದು ನನಗಂತೂ....ಒಳ್ಳೆಯದಾಯ್ತು
ನೀ ಆಗಾಗ ಲಟ್ಟಣಿಗೆಯ ತೋರಿಸಿ, ಗದರಿಸಿ
ಸಾಲದ್ದಕ್ಕೆ ವರದಕ್ಷಿಣೆಯ ಕಿರುಕುಳ, ಲೈಂಗಿಕ ದೌರ್ಜನ್ಯ
ದೂರು ದಾಖಲಿಸುವೆ ಎಂದೆಲ್ಲಾ ... ಹೆದರಿಸುವೆ ವಿಚಾರಣೆಯಾಗಲಿ, ನಿನ್ನ ಸ್ಟೇಷನ್ ಗೆ ಕರೆದೊಯ್ಯಲಿ...
ರ್ರಿ... ನಿಮ್ಮ ಮೇಲಿನ ಪ್ರೀತಿಗೆ ಹಾಗೆ ಮಾಡಿದರೆ
ನನ್ನ ಮೇಲೆಯೇ ಕಂಪ್ಲೇಂಟ್ ಕೊಡುವಿರೋ...
ಎಂದಾದರು ಒಂದು ದಿನವಾದರು ನಾ ಹೊಡೆದಿರುವೆನೆ.... ಆಗಬೇಕಾದದ್ದೆ ನನ್ನ ಈ ಜನ್ಮಕ್ಕೆ ತಕ್ಕ ಶಾಸ್ತಿ
ಅಯ್ಯೋ... ಪೆದ್ದೀ ... ಹೀಗೆ ಹೆದರಿ ಅಳುವೆಯಲ್ಲೇ...
ನಾ ಖಾಕಿ ತೊಡದ ಪೊಲೀಸ್ಸೇ....
ಹ್ಞಾಂ .... ಹೌದೆ...... ಬಂದೆ ತಾಳಿ, ನಿಮಗಿದೆ ಇಂದು
ಲಟ್ಟಣಿಗೆ ಹಿಡಿದು ನನ್ನವಳು ಬರುವುದೆ...!!

" ಪೂಜೆ " ಭಾಗ - 2

ನಿನ್ನದು ಒಳ್ಳೆ ಫಜೀತಿಯ ಕಾಟವಾಯ್ತಲ್ಲೆ  
ಸ್ವಲ್ಪ ತಡಿಯೇ... ಮಾರಾಯ್ತಿ ಗಡಿಬಿಡಿ ಏಕೆ?
ಸೆಕೆಂಡ್ ಯೂನಿಟ್ಟಲ್ಲೇನೋ...... ಸಮಸ್ಯೆಯಂತೆ
ಹೀಗೆ ಹೋಗಿ ಮಧ್ಯಾಹ್ನಕ್ಕೆಲ್ಲ ನಾ ಬಂದು ಬಿಡುವೆ
ಈ ಪೂಜೆ, ಪುನಸ್ಕಾರ ಭೀಮನ ಅಮಾವಾಸ್ಯೆಯ ವ್ರತ
ನಾ ಬಂದ ಮೇಲೆ ರಾತ್ರಿಯೆಲ್ಲಾ ಮಾಡುವೆಯಂತೆ;
ಮಧ್ಯೆ ಮಧ್ಯೆ ನನಗೆ ಫೋನ್ ಮಾಡದಿರು ಅರ್ಥವಾಯ್ತೇ ಅಲ್ಲೇನಾಗಿದೆಯೋ...... ಮೊದಲು ನೋಡಿ ಬನ್ನಿ
ಎಲ್ಲಾ.... ನನ್ನ ಕರ್ಮ ಕರ್ಮ, ದೇವರೇ ದೇವರೆ
ಸಂಜೆಗೆ ಪೂಜೆ ಮಾಡಿದರಾಯ್ತು
ಇಲ್ಲಿಂದ ಬೇಗ ಮೊದಲು ಹೊರಡಿ.....
ಇವಳಿಗಾದರು ಹೇಗೆ ತಾನೆ ತಿಳಿದೀತು
ನನ್ನ secod setup ಇರುವ ವಿಚಾರ
ಗೊತ್ತಾದರೆ ನನ್ನ ಸುಮ್ಮನೆ ಬಿಟ್ಟಾಳೆಯೇ ...!!
ಲಟ್ಟಣಿಗೆಯ ಹಿಡಿದು ಊರ ತುಂಬ ಅಟ್ಟಾಡಿಸದಿರಳು

ರ್ರೀ.... ಬೇಗ ಬರುವಿರೋ... ಇಲ್ಲವೋ....
ನನಗೂ... ಕಾದು ಕಾದು ಸಾಕಾಯ್ತು
ಬರದಿದ್ದರೆ ಗೊತ್ತಲ್ಲ ಅಲ್ಲಿಗೆ ನಾನೇ ಬಂದು
ಮಂಗಳಾರತಿ ಎತ್ತಿ ಪೂಜೆ ಮಾಡಬೇಕಾದೀತು
ಈ ನನ್ನ ಮುಸುಡಿಗೆ ಇಬ್ಬರೆಂಡಿರು ಬೇಕಿತ್ತೆ ಸ್ವಾಮಿ
ಕಷ್ಟ ಸುಖಗಳ ಉಗುಳುವಂತಿಲ್ಲ, ನುಂಗುವಂತಿಲ್ಲ

ನನ್ನ ಪುಣ್ಯಕ್ಕೆ ಅಂತೂ... ಬೇಗ ಬಂದಿರಲ್ಲ
ಸ್ನಾನ ಮುಗಿಸಿ ಈ ಲಂಗೋಟಿ ಕಟ್ಟಿ;
ಬೇವಿನ ಸೊಪ್ಪ ಸೊಂಟದ ಸುತ್ತ ಕಟ್ಟಿ
ಏನೂ ಮಾತಾಡದೆ ಕಣ್ಮುಚ್ಚಿ ನೇರ ನಿಲ್ಲಿ
ಸಾಧ್ಯವಿಲ್ಲವೇ.... ನನ್ನ ನೀ ಏನೆಂದು ತಿಳಿದಿರುವೆ
ನೀ ಕುಣಿಸಿದಂತೆ ಕುಣಿಯುವ ಆ ದೊಂಬರಾಟದ
ಮಂಗನೆಂದು ಕೊಂಡೆಯೋ.... ಹೇಗೆ !!
ಮೊದಲು ನಾ ಹೇಳಿದಂತೆ ಕೇಳಿ ಇಲ್ಲವಾದರೆ ಗೊತ್ತಲ್ಲ ನನ್ನನ್ನೇನು ಹೆದರು ಪುಕ್ಕಲ ಎಂದು ಕೊಂಡೆಯೋ...
ನಿನ್ನ ಹೆದರಿಕೆಗೆ, ಬೆದರಿಕೆಗೆ ನಾ ಬಗ್ಗಲ್ವೇ....
ಆಗಾದರೆ ಸರಿ ಬಿಡಿ ಆ ಮನೆಗೆ ಬಂದು
ಅಲ್ಲಿಯೇ... ಇಬ್ಬರೂ " ಪೂಜೆ " ಮಾಡುವಿರಿ ಮಾಡಿಸಿಕೊಳ್ಳುವರಂತೆ " ಮಹಾಪೂಜೆ " ಎನ್ನಬೇಕೆ...!!

Friday, July 25, 2014

" ಪೂಜೆ " ಭಾಗ - 1

ಲೇ.... ಪಮ್ಮೀ.... ಗಂಟೆ ಆಗಲೆ ಹತ್ತಾಯ್ತೇ....
ಇನ್ನೂ ತಿಂಡಿ ರೆಡಿಯಾಗಲಿಲ್ಲವೆ....?
ಏನು ಅಡುಗೆ ಮಾಡುವೆಯೋ.... ಕಾಣೆ
ಇಂದು ನಾ ಆಫೀಸಿಗೆ ಹೋದಂತೆಯೇ ....
ಸದ್ಯ ಅಂತೂ... ಇಂದೇ ಬಂದೆಯಲ್ಲ; 
ಇದೇನೆ ಬೆಳ್ಳಿ ತಟ್ಟೆ, ಬೆಳ್ಳಿಯ ಚೊಂಬು
ಇಂದೇನಾದರು ವಿಶೇಷವೆ...? ಹೋಗಲಿ ಬಿಡು
ಇಂದು ಆಫೀಸಿಗೆ ಹೋಗದಿದ್ದರು ಚಿಂತೆಯಿಲ್ಲ 
ಪಟ್ಟಾಗಿ ತಿಂದುಂಡು ಮನೆಯಲ್ಲಿಯೇ..... 
ಆರಾಮಾಗಿ ಇದ್ದು ಬಿಡುವೆ
ಹೀಗೆಲ್ಲಾ ನನ್ನ ನೋಡಿ ನಗಬೇಡವೆ ಮಾರಾಯ್ತಿ
ಉಪ್ಪು ಹುಳಿ, ಖಾರ ತಿನ್ನುವ ಈ ದೇಹ 
ನನಗೆ ಮೂಡು ಬಂದರೆ ಕಷ್ಟ ಕಷ್ಟ;
ನನಗಿಂದು ಪು ಪು ಪು ಪೂಜೆಯೇ.....!!!
ನನ್ನದೇನು ತಪ್ಪಿಲ್ಲವೆ, ಹೂ ಕೀಳುವಾಗ
ಏನೋ.... ಪರಿಚಯದ ನಗೆಯ ನಕ್ಕು
ಒಂದೆರಡು ಗುಲಾಬಿ ಹೂ ಬೇಕೆಂದಳು ಕೊಟ್ಟೆ
ಇಷ್ಟಕ್ಕೆಲ್ಲಾ.... ನೀ ಹೀಗೆ ನನ್ನ ಅನುಮಾನಿಸಿ
ಸೌಟು, ಲಟ್ಟಣಿಗೆ, ಚೊಂಬಲ್ಲಿ ದಾಳಿ ಮಾಡದಿರು
ನಿನ್ನಾಣೆಗೂ... ಅಂತವನಲ್ಲವೇ ಅಲ್ಲ ನಾನು
ನನ್ನ ನಂಬೇ.... ಮಾರಾಯ್ತಿ ಪ್ಲೀಸ್ ಪ್ಲೀಸ್ 

ರ್ರೀ...... ನನಗೆ ಬರುವ ಕೋಪಕ್ಕೆ
ನಾ ಇಂದು ಏನೂ.... ಮಾತಾಡುವಂತಿಲ್ಲ
ಇಲ್ಲದಿದ್ದರೆ ಆ ಕಥೆಯೇ.... ಬೇರೆಯಾಗುತಿತ್ತು
ಸುಮ್ಮನೆ ಬೆಳ್ಳಿತಟ್ಟೆಯ ಮೇಲೆ ನಿಲ್ಲಿ
ಇಂದು ಬೀಮನ ಅಮಾವಾಸ್ಯೆಯ ವ್ರತ "
ಪಾದಪೂಜೆ " ಯ ಮಾಡಬೇಕು ನಿಮಗೆ
ಎನ್ನುವುದೆ ನಗುತ ನನ್ನವಳು....!!!!

Monday, July 21, 2014

" ಕೋಲೆ ಬಸವ " ( ಯಾಕ್ ಹಿಂಗ ಅಳಾಕ ಅತ್ತೀರಿ )

ನನ್ನನ್ನೇನು ನೀ ಹೇಳಿದ್ದಕ್ಕೆಲ್ಲ ತಲೆ ಆಡಿಸೋ
ಆ ಕೋಲೆ ಬಸವ ಅಂದ್ಕೊಂಡೆಯೋ.... ಹೇಗೆ ? ಮಾಡಕ್ಕಾಗಲ್ವೇ..... ಅದೇನ್ ನೀ ಮಾಡ್ಕೋತೀಯೋ... ಮಾಡ್ಕೊ.... ಹೋಗೆ ಹೋ.... ಗೆಲೇ.....!!
ಎಂದೂ... ಧ್ವನಿ ಎತ್ತದವನು ಇಂದು ಜೋರು ಮಾತಾಡಿದ್ದೆ ಮುಖ ಕೆಂಪಾಗಿಸಿ ರ್ರೀ.... ಹೀಗೋ...... ನಿಮ್ಸಾಚಾರ ಎಲ್ಲೋ.... ಪಿತ್ತ ನೆತ್ತಿಗೇರಿರಬೇಕು ಇಳಿಸೋದ್ ನನ್ಗೊತ್ತು ಸುಮ್ಮನೆ ಒಳಗೆ ಬಂದು, ಹೇಳಿದ್ದು ಮೊದಲು ಮಾಡಿ
ನಮ್ಮಿಬ್ಬರ ಈ ಜಗಳಕ್ಕೆ ಅಕ್ಕಪಕ್ಕದವರೆಲ್ಲಾ....
ಒಮ್ಮೆ ಇಣುಕಿ ಇದೇನು ಹೊಸದೇ ಇವರ ಜಗಳ !! ಒಬ್ಬರಿಗೊಬ್ಬರು ಕಚ್ಚಾಡಿ ಮುದ್ದಾಡೊ ಗೊರವಂಕಗಳು ಮುಸಿಮುಸಿ ನಕ್ಕು ಹೊರಟು ಹೋದವರ ಕಂಡು;
ಮತ್ತಷ್ಟು ಕೋಪಗೊಂಡು ನನ್ನನ್ನೇನು ನಿನ್ನ ಹಿಂಬಾಲಿಸೋ... ಕುರಿ ಅಂದ್ಕೊಂಡೆಯೋ..... ಹೇಗೆ ?
ಬರಲ್ವೇ.... ನಾ ಬರಲ್ಲ, ನನ್ನವಳು ದುರುಗುಟ್ಟಿದ್ದು ನೋಡಿ
ಹ್ಞೂಂ ನಡಿಯೇ.... ಮಾರಾಯ್ತಿ ಬರದಿದ್ದರೆ  
ನೀ ಎಲ್ಲಿ ನನ್ನ ಬಿಡುವೆ 
ಇಡೀ ದಿನ ತಿಂಡಿ, ಊಟವಿಲ್ಲದೆ ಉಪವಾಸ ಕೆಡವಿ ಬಿಡುವೆ
ಈ ಹೆದರಿಕೆ ಮೊದಲೇ ನಿಮಗಿದ್ದಿದ್ದರೆ,
ಇಷ್ಟೆಲ್ಲಾ.... ಜಗಳ, ಮಾತು ಬರುತ್ತಿತ್ತೇ....!!!
ನನ್ನ ಕಾಯಲು ನಿನ್ನ ಮುದ್ದಿನ ಮಗ ಬೇರೆ....

ಅರೇ.....!!! ಹರಿಣಿ ಅಕ್ಕಾ.... ನೀವಿಲ್ಲಿ !!!
ಬಡವರ ಮನೆಗೆ ಲಕ್ಷ್ಮೀ ಬಂದಂತೆ ಬಂದಿರುವಿರಿ ಬನ್ನಿ ಬನ್ನಿ
ಓಹ್ ಹೋ... fbಯ ಆತ್ಮೀಯ ಮಿತ್ರ ಬಳಗ...!!!
ಹೀಗೆ ಎಲ್ಲರೂ... ಒಟ್ಟೊಟ್ಟಿಗೆ!! ನಮ್ಮ ಮನೆಗೆ
ಬರಬೇಕು ಬರಬೇಕು
ಯಾರೋ.... ಬಂದಂತಿದೆಯೆಲ್ಲಾ.... ಎಂದು ಹೊರ ಬಂದದ್ದೇ ನಾ ಮಾಡಿದ ಯಡವಟ್ಟಾಗಿತ್ತು ನೋಡಿ
ನನ್ನವಳ ಮುಖ ಆಗ ನೋಡಬೇಕಿತ್ತು
ಇಂಗು ತಿಂದ ಮಂಗನಂತ್ತಾಗಿತ್ತು
ಬಂದವರಿಗೂ... ಗಾಬರಿ ಯಾಕಾದರೂ ಬಂದೆವೋ...
ಹೇ.... ಏನ್ ಚೆಂಬಸಣ್ಣಾ..... ಸಂಸಾರ ಅಂದ್ಮೇಲೆ
ಒಂದು ಮಾತ್ ಬರುತ್ತೆ ಹೋಗುತ್ತಪ್ಪ ಇಷ್ಟಕ್ಕೇ...
ಹೀಗೆಲ್ಲಾ ... ಹೆಂಗಸರಂತೆ ಅಳೋದೆ
ಮೊದಲು ಸಮಾಧಾನ ಮಾಡ್ಕೊಳ್ಳಿ.....
ಇದೆಲ್ಲಾ .... ಏನ್ ಅಕ್ಕೋ... ಕಲ್ಪನೆಯ ಕತೆ, ಕವನ ಅಂತ ಬರೆಯೋರು ಅದನ್ನ ನೀವು ಹಿಂಗ ನಿಜ ಮಾಡೋದೆ
ಛೆ ಛೇ.... ಇಲ್ರೀ.... ಅಣ್ಣಾವರ್ರೇ...
ನೀವು ನನ್ನ ತಪ್ ತಿಳಿಯಾಕ ಹತ್ತೀರಿ ನೋಡ್ರಲಾ....
ಇವರೇ... ನನ್ನ ಆಗಾಗ ಕೆಣಕಿ, ಗದರಿಸಿ ಬೆದರಿಸಿ
ನಾ ಮುನಿದರ ಮುದ್ದು ಮಾಡೋದು... ನಾಚಿದ್ದಳು!

Friday, July 18, 2014

" ನಾನೇನು ಮಾಡ್ಲಿಲ್ವೆ ನಿನ್ನಾಣೆಗು "....!!

ಎದ್ದದ್ದೇ.... ಲೇಟು, ಆಗಲೆ ಗಂಟೆ ಎಂಟಾಗಿದೆ
ಇಂದು ಆಫೀಸಿಗೆ ನಾ ಹೋದಂತೆಯೇ ....!
ಗಡಿಬಿಡಿಗೆ ಕೈಕಾಲು ಏನೂ.... ಆಡದು
ಇವಳಿದ್ದಿದ್ದರೆ ಇಷ್ಟೆಲ್ಲಾ ಯೋಚಿಸಬೇಕಿತ್ತೆ...?
ಎಷ್ಟು ಅಚ್ಚುಕಟ್ಟಾಗಿ ಹೊತ್ತೊತ್ತಿಗೂ ಬಿಸಿ ಬಿಸಿ
ತಿಂಡಿ, ಕಾಫಿ , ಊಟ ರೆಡಿ ಮಾಡಿಡುತ್ತಿದ್ದಳು;
ಕೆಲಸದಳ ನಂಬಿ, ವರ್ಷಗಟ್ಟಲೆ
ಬಸಿರು ಬಾಣಂತಾನ ನಾಮಕರಣ ಎಂದು
ತವರಲ್ಲಿ ಕೂತರೆ ನನ್ನ ಸ್ಥಿತಿ ಅಧೋಗತಿಯಾಗದೆ ಇನ್ನೇನು ವಾರದಿಂದ ಮನೆಗೆಲಸಕ್ಕೆ ಬರದೆ
ಎಲ್ಲಿ ಹಾಳಾಗಿ ಹೋದಳೋ ಈ ಕೆಲಸದವಳು
ಕಸ ಮುಸುರೆ ಬಳಿದು, ನಾನೇ ಬೇಯಿಸಿ ತಿನ್ನುವಂತಾಗಿದೆ ಏನೋ... ಗೊತ್ತಿರುವ ವಯಸ್ಸಾದ ಹೆಂಗಸು
ನನ್ನವಳ ಸಹಾಯಕ್ಕಿರಲಿ ಎಂದಿಟ್ಟುಕೊಂಡರೆ
ಹೀಗೆ ಹೇಳದೆ ಕೇಳದೆ ಕೈಕೊಡುವುದೇ....?

ಇತ್ತೀಚೆಗಂತು ಈ ಬೆಂಗಳೂರಿನ ಜೋರು ಮಳೆ
ಸುರಿಯಲು ಶುರುವಿಟ್ಟರೆ ನಿಲ್ಲುವುದೇ.... ಇಲ್ಲ
ಒಂದೇ ಸಮನೆ ಕಾಲಿಂಗ್ ಬೆಲ್ನ ಸದ್ದಿಗೆ
ಬಂದವಳು ಕೆಲಸದವಳಿರಬೇಕು ಬೈದು ಹಾಗೆಯೇ
ವಾಪಸ್ ಕಳುಹಿಸಿಬಿಡಬೇಕು
ಬಾಗಿಲು ತೆರೆದರೆ ಕೆಲಸದವಳ ಮಗ ಕೃಿಷ್ಣ ನಕ್ಕಿದ್ದ
" ಎಲ್ಲೋ... ನಿಮ್ಮಮ್ಮ ಕೆಲಸಕ್ಕೆ ಬರದೆ ಏನಾಗಿದೆ
ಸಂಬಳಕ್ಕೆ ಬಂದು ಬಿಟ್ಟ ದೊಡ್ಡ ಮನುಷ್ಯ" ಗದರಿದ್ದೆ
ಸಾರ್ ಅದು ಅದು ಅಮ್ಮನಿಗೆ ಮೈ ಸರಿಯಿಲ್ಲ
ಅದಕ್ಕೆ ಈ ಅಕ್ಕನ ಕೆಲಸಕ್ಕೆ ಕರೆತಂದೆ.....
ಮಳೆಗೆ ನೆನೆದು , ಚಳಿಗೆ ನಡುಗುವವಳ ಕಂಡು
ಇವಳೇನು ಭುವಿಗಿಳಿದ ದೇವಲೋಕದ ಅಪ್ಸರೆಯೋ...
ಜೀವ ತಳೆದ ಬೇಲೂರ ಶಿಲಾಬಾಲಿಕೆಯೋ....
ಎಂಥಾ ಅಪ್ರತಿಮ ರೂಪ ಸೌಂದರ್ಯ !!!!
ಜಗದ ಸುಂದರಿಯರೆಲ್ಲರ ರೂಪರಾಶಿಯ
ಎರಕ ಹೊಯ್ದು ಸೃಷ್ಟಿಸಿದನೇ... ಇವಳ ಆ ಬ್ರಹ್ಮ !
ರ್ರೀ.... ಸ್ವಲ್ಪ ಅಡುಗೆ ಮನೆ ತೋರಿಸ್ತೀರೋ....
ಅರಳಿದ ಮಲ್ಲಿಗೆಯಂತೆ ನಕ್ಕಿದ್ದಳು
ಕನಸಿನ ಲೋಕದಿಂದ ಎಚ್ಚೆತ್ತು
ಮೊದಲು ಒಳ ಹೋಗಿ ಬೇರೆ ಬಟ್ಟೆ ಬದಲಾಯಿಸಿ ಬಾ... ಶೀತಗೀತವಾದೀತು ನನ್ನವಳ ಬಟ್ಟೆಗಳ
ಕೊಟ್ಟು ಹೊರ ಬಂದಿದ್ದೆ....
" ಸರ್ ಮೇಡಮ್ ಲೈನಲ್ಲಿದ್ದಾರೆ ಫೋನ್ ಕನೆಕ್ಟ್ ಮಾಡಲೇ... ಆಪ್ತ ಸಹಾಯಕಿಯ ಕೋಕಿಲವಾಣಿಯ ಕರೆಗೆ ಮೀಟಿಂಗ್ನಲ್ಲಿರುವಾಗಲೇ .... ಇವಳ ಫೋನೇ....
ಸರಿ ಸರಿ ಕನೆಕ್ಟ್ ಮಾಡಿ
ರ್ರೀ .... ಮೊದಲು ಎಲ್ಲಾ ಬಿಟ್ಟು ಈಗಲೇ ಮನೆಗೆ ಬನ್ನಿ
ಆ ಹಾ ಹಾ.... ಎಂಥಾ.... ರಸಿಕ ಕುಲೋತ್ತುಂಗರು
ನಿಮ್ಮ ಜನ್ಮಕ್ಕೆ ಬೆಂಕಿ ಬಿತ್ತು , ಕಟ್ಟಿಕೊಂಡವಳ ಬಿಟ್ಟು ಇಟ್ಕೊಳ್ಳೋಕ್ಕೆ ಇನ್ನೊಬ್ಬಳು ಬೇರೆ ಬೇಕಿತ್ತೇ....
ಛೇ...!!! ನೀವಿಂತವರೆಂದು ಕೊಂಡಿರಲಿಲ್ಲ
ತವರಿಗೆ ಹೆರಿಗೆಗೆ ನಾ ಹೋಗಿ
ಇಷ್ಟು ದಿನ ಅಲ್ಲಿಯೇ.... ಇದ್ದದ್ದು ನನ್ನ ತಪ್ಪು ;
ನಿಮ್ಮ ಮೇಲಿಟ್ಟ ನನ್ನ ನಂಬಿಕೆಗಳ ಹುಸಿ ಮಾಡಿಬಿಟ್ಟಿರಿ
ಹೋಗಿ ಹೋಗಿ ಆ ಕೆಲಸದವಳ ಜೊತೆ ಚಕ್ಕಂದವೆ
ಎಲ್ಲಿ ಬಿಡುವಿರಿ ಆ ನಿಮ್ಮ ಜೊಲ್ಲು ಸುರಿಸುವ ಬುದ್ಧಿ
ಉಪ್ಪು, ಹುಳಿ, ಖಾರ ತಿನ್ನೊ ಭಂಡ ಧೈರ್ಯ
ನಾಚಿಕೆಯಾಗ್ಬೇಕು ನಿಮ್ಮ ನಾಯಿ ಜನ್ಮಕ್ಕೆ ....
" ನಾ ಅಂತವನಲ್ಲವೇ.... ನಿನ್ನಾಣೆಗೂ ನಾನೇನು ಮಾಡ್ಲಿಲ್ವೇ... ಹೀಗೆಲ್ಲಾ .... ಏನೂ ಗೊತ್ತಿಲ್ಲದೆ ನನ್ನ ಅನುಮಾನಿಸಬೇಡವೇ.... ನನಗೂ.... ಮಾನ ಮರ್ಯಾದೆ, ರೋಷವಿದೆ
ಆ ಹಾ... ನಿಮ್ಮ ಅವಳ ಮಾನ ಮರ್ಯಾದೆಯ
ರಾಸಲೀಲೆ ಬೆಡ್ ರೂಮ್ ಲ್ಲಿ ಭದ್ರವಾಗಿ ಮಲಗಿದೆ
ನಿಮ್ಮ ಮಾನ ಹರಾಜು ಹಾಕದಿದ್ದರೆ
ನಮ್ಮಪ್ಪನ ಮಗಳೇ... ಅಲ್ಲ
ನಿಮಗಿದೆ ಬನ್ನಿ ಮಾರಿ ಔತಣ.....

Sunday, July 13, 2014

" ಕಾವ್ಯಶ್ರೀ "

ನಾ ಕವನ ವಾಚಿಸುವಾಗ,
ಅವಳ ಕಣ್ ಸನ್ನೆಯ ಮಿಂಚಿಗೆ
ಒಂಚೂರು ಓದಲಾಗದೆ ಒದ್ದಾಡಿದ್ದೆ ;
ಅವಳ ಕದಪುಗಳು ಕೆಂಪೇರುವುದ ಕಂಡು
ಕಕ್ಕಾಬಿಕ್ಕಿಯಾಗಿ, ಪದಗಳು ತೊದಲಿ
ಮಾತುಗಳೇ..... ಹೊರ ಬರದೆ ಮುಷ್ಕರ ಹೂಡಿ
ನೆರೆದ ಸಭೀಕರಲ್ಲಿ ಗುಸು ಗುಸು
ವ್ಯವಸ್ಥಾಪಕರ ಕಣ್ ಕೆಂಪಿಗೆ
ಹೆದರಿ ಬಾಯಿಯೆಲ್ಲಾ ಒಣಗಿ
ಒಂದಿಷ್ಟು ಕೆಮ್ಮಿ, ನೀರ್ ಕುಡಿದು
ಮಾತುಗಳೇ... ಹೊರ ಬರದಿದ್ದಾಗ
ಯಾಕಾದರು ಎದಿರು ಕುಳಿತಳೋ.....!!
ಈಗಾಗಲೇ ಬೇಕಿತ್ತೆ ಇವಳ ಒಲವು....
ಮುಖ ಸಪ್ಪಗಾಗಿದ್ದ ಕಂಡು
ಕಣ್ಣಲೇ ... ಹುರುದುಂಬಿಸಿ
ಮೋಹಕ ನಗೆಯ ಬೀರಿದ್ದಳು
ನಿರ್ಗಳವಾಗಿ ಹರಿದ ವಾಗ್ಝರಿಯ ಕಂಡು
ನೆರೆದವರೆಲ್ಲರೂ..... ಒಮ್ಮೆಲೇ ದಂಗು
ತಲೆದೂಗಿ,
ಕರತಾಡನದ ಮಳೆಯ ಜೋರು!!

Friday, July 4, 2014

" ಮಾಟವೋ, ದೆವ್ವದ ಕಾಟವೋ.... ತಿಳಿಯದಾಗಿದೆ

ಹೌದೇನೇ.... ಉಮಾ, ನಾ ಕೇಳಿದ್ದು ನಿಜವೆ ?
ಅಳಿಯಂದಿರಿಗೆ ಭೂತವೋ... ಏನೋ ... ಮೆಟ್ಟಿದೆಯಂತೆ
ಛೇ... ಹೀಗಾಗಬಾರದಿತ್ತು, ಮೊದಲೇ ಸುರ ಸುಂದರಾಂಗ ಯಾವ ಮೋಹಿನಿಯ ಕಣ್ಣು ಬಿತ್ತೋ... ಏನೊ ತಾಯಿ;
ಇದ ಕೇಳಿಯೇ ಮನಸ್ಸು ತಡೆಯದೆ ಬಂದೆ ಕಾಣೆ
ರಾತ್ರಿಯೆಲ್ಲಾ ಏನೇನೋ ತಮ್ಮಷ್ಟಕ್ಕೆ ತಾವೆ ಮಾತಾಡುವರಂತೆ ಗಾಳಿ ಆಂಜನೇಯನ ತಾಯಿತ ಕಟ್ಟಿಸ ಬಾರದಿತ್ತೇ.... ಚಿಕ್ಕಮ್ಮಾ.... ಇದೆಲ್ಲ ನಿಮಗೆ ಹೇಳಿದ್ದಾದರು ಯಾರು ?
ಕೆಲಸದ ಕೆಂಪಿ ಹೇಳಿರಬೇಕು ಬರಲಿ ಅವಳು
ಅಯ್ಯೋ.... ಚಿಕ್ಕಮ್ಮಾ ಮೊದಲೇ ನೀವು fm ರೇಡಿಯೋ ಇದ್ದಂತೆ
ಇನ್ನು ನನ್ನ ಮಾನ, ಮರ್ಯಾದೆ
ಊರು ಊರಲ್ಲಿ ಹರಾಜು ಹಾಕುವಿರಿ
ಏನೂ.... ಹಾಗಿಲ್ಲ ನನ್ನವರಿಗೆ, ಸುಮ್ಮನೆ ಇಲ್ಲದ್ದು ಹೇಳಬೇಡಿ ಅಲ್ಲವೆ ಉಮ, ನನಗೇನು ಬುದ್ಧಿಯಿಲ್ಲವೆ ಮಗಳ ಮನೆ ವಿಷಯ ಬೀದಿಗೆ ತರುವೆನೆ
ಎಲ್ಲೋ.... ಮಾಟ, ಮಂತ್ರ ತಂತ್ರ ಮಾಡಿಸಿರಬೇಕು ನೋಡು ಕೈ ಮೀರಿದರೆ ಅಳಿಯಂದಿರ ಕತೆ ಗೋವಿಂದ ಗೋ.... ವಿಂದ !!
ಅಯ್ಯೋ .... ಚಿಕ್ಕಮ್ಮ ಹೀಗೆಲ್ಲ ಹೆದರಿಸಿದರೆ ಹೇಗೆ ?
ತಾಯಿತ, ಡಾಕ್ಟರ್, ಮಾಂತ್ರಿಕ
ಕೊನೆಗೆ ನಿಮಾನ್ಸಿಗೆ ಹೋಗಿ ಬಂದಾಯ್ತು
ದೆವ್ವವೂ ಇಲ್ಲ, ಮಾಟವೂ ಇಲ್ಲ
ಎಲ್ಲಾ ... ನನ್ನ ಹಣೆಯ ಬರಹ
ನೀವೇ ನೋಡಿ ಇತ್ತೀಚೆಗಂತು ರೂಮಲ್ಲಿ ಒಬ್ಬರೇ ಕೂತು ಏನೋ.... ತಮ್ಮಷ್ಟಕ್ಕೆ ತಾವೆ ಮಣ ಮಣ ಗುಟ್ಟುವರು ಅಳಬೇಡವೇ..... ನೋಡು ನಿನ್ನ ತಮ್ಮ ಬಂದ
ಅವ ಎಲ್ಲಾ....., ಸರಿ ಮಾಡುವ, ನಿಶ್ಚಿಂತೆಯಿಂದಿರೆ ತಾಯಿ ಬಾರೊ... ಚೆನ್ನು, ನೋಡೋ... ನಿಮ್ಮ ಬಾವನ ಸ್ಥಿತಿಯ.... ಅಯ್ಯೋ.... ಅಕ್ಕಾ.... ಇದು ಮಾಟ, ದೆವ್ವದ ಕಾಟವಲ್ಲ ಇದೇನಿದ್ದರು ಫೇಸ್ ಬುಕ್ ಮೇನಿಯಾ....
ಈಗ ಲ್ಯಾಪ್ ಟಾಪ್ ಕೊಡುವೆ ನೀನೆ ನೋಡು...
ಬಾವ ಹೇಗೆ ಬದಲಾಗುವರು....

" ಮಟನ್ ಗುನ್ಯ "

ಎರಡು ಮೂರು ದಿನದಿಂದ ಮೈಸರಿಯಿರದೆ
ಮೈ, ಕೈಕಾಲು ನೋವು ನೋವು
ಚಳಿ ಜ್ವರಕ್ಕೆ ನಾನೀಗ ಮನೆಯಲ್ಲಿಯೇ ...
ಆಸ್ಪತ್ರೆಗೆ ಹೋಗಿ, ದುಡ್ಡು ಸುರಿದು ಬಂದಾಯ್ತು
ಆತ್ಮೀಯ ಮಿತ್ರರೆಲ್ಲರ ಶುಭ ಹಾರೈಕೆ
ಬೇಗ ಗುಣ ಮುಖರಾಗಿ, fbಗೆ ಹಾಜರಾತಿ ಹಾಕಿ ಒಬ್ಬೊಬ್ಬರದ್ದೂ.... ಒಂದೊಂದು ಸಲಹೆ, ಓಲೈಕೆ
ಏನು ಚಳಿ ಜ್ವರವೆ, ಈ ಕ್ಲೈಮೇಟೇ ಹಾಗೆ ಸ್ವಾಮಿ
ಮೊನ್ನೆ ಬಿದ್ದ ಮಳೆಗೆ ಎಲ್ಲೋ.... ನೆನೆದಿರಬೇಕು
ಆಗಲೇ .... ಒಂದು ನೈಂಟಿ ಹೊಡೆದಿದ್ದರೆ
ಈ ಕೆಮ್ಮು ದಮ್ಮು ,ಶೀತ ಗೀತ ಬರುತ್ತಿರಲಿಲ್ಲ ನೋಡಿ
ಹೋಗಲಿ ಡಾಕ್ಟರ್ ಬಳಿ ಹೋಗಿದ್ದಿರೋ... ಇಲ್ಲವೋ?
ಏನಂದರು ಚಿಕನ್ ಗುನ್ಯ, ಹೆಚ್1 ಎನ್1, ಮಲೇರಿಯ ಅದ್ಯಾವುದೋ .... ಹೊಸ ರೋಗವಂತೆ
ಬೆಂಗಳೂರಿನ ತುಂಬೆಲ್ಲಾ.... ಅದೇ ಸುದ್ದಿಯಂತೆ
ನನ್ನ ತಲೆಯೊಳಗೆ ಅನುಮಾನದ ಹುಳ ಬಿಟ್ಟು
ಯೋಚಿಸುವಂತೆ ಮಾಡಿ,
ಡಾಕ್ಟರ್ ಹೇಳಲಿಲ್ಲವೆ ನಿಮಗೆ? ಸರಿ ಹೋಯ್ತು ಬಿಡಿ
ನಾನೇ... ಗಾಭರಿಯಿಂದ ಯಾವ ರೋಗವಂತೆ
ಬೇಗ ಹೇಳಬಾರದೇ... " ಮಟನ್ ಗುನ್ಯ " ಎನ್ನಬೇಕೆ
ಆ ಸುಸ್ತಲ್ಲೂ.... ನಕ್ಕಿದ್ದೇ... ನಕ್ಕಿದ್ದು

Wednesday, July 2, 2014

" ಇದೆಲ್ಲಾ .... ನನಗೆ ಬೇಕಿತ್ತೆ ".... ?

ಇನ್ಮುಂದೆ ನಾ ಬರೆಯುವುದ ಬಿಟ್ಟು ಬಿಡಬೇಕೆಂದಿದ್ದೇನೆ
ನನ್ನವಳ ಕಿವಿಯ, ಯಾರು ಕಚ್ಚಿದರೋ.... ಏನೋ ?
ನನ್ನ ಇಡೀ ಜಾತಕವನ್ನೆಲ್ಲಾ... ಜಾಲಾಡಿ
ಇದೆಲ್ಲಾ .... ನಿಮಗೆ ಬೇಕಿತ್ತೇನ್ರೀ.... ?!
ಕಂಡ ಕಂಡವರೆಲ್ಲ ನನ್ನ ಏನೆಂದು ತಿಳಿದಾರು ?
ನೀವು ಬರದದ್ದೆಲ್ಲಾ ಮೆಚ್ಚಿ, ಒಳಗೊಳಗೆ ನಕ್ಕು ;
ಇವನೆಂಥಹ ಕಲಿಯುಗದ ಗಂಡಸು ಛೇ...
ಹೀಗೆ ಹೆಂಡತಿಗೆ ಹೆದರುವುದೇ... ಹೆದರು ಪುಕ್ಕಲ

ಅಯ್ಯೋ ... ಪಾಪ, ಹೀಗಾಗಬಾರದಿತ್ತು
ಎಲ್ಲಾ... ಲೊಚಗುಟ್ಟುವವರೇ.... ಹೆಚ್ಚು
fbಯಲ್ಲಿ ಪೊರಕೆಯಿಡಿದ ನನ್ನ ಫೋಟೋ ಬೇರೆ ?
ಇವಳೆಂಥಹ ಗರತಿ ಗಂಗಮ್ಮನಿರಬೇಕು...
ಹೀಗೆಲ್ಲ ಕೈಹಿಡಿದವನ ಹಿಂಸಿಸುವುದೆ....?
ಮನೆಯಲ್ಲಿ ದಿನನಿತ್ಯ ಎಷ್ಟು ಕಾಟ ಕೊಡುವಳೋ...!! ಶೂರ್ಪಣಿಕಿ, ಡಾಕಿಣಿ ಹೆಣ್ಣು ಕುಲಕ್ಕೇ ಅವಮಾನ
ಫೇಸ್ ಬುಕ್ಕಿನ ಲಲನೆಯರು, ಮಹಿಳಾಮಣಿಗಳು
ನಿಮ್ಮಂತಿರೊ ಆ ಗಂಡಸರು ಶಪಿಸುವರೋ....
ಹೆಸರಿಗೆ ತಕ್ಕಂತೆ ಚೆನ್ನ, ದಿನಾ ಒಂದಿಲ್ಲೊಂದು ರಗಳೆ
ಮನದ ಭಾವನೆಗಳ, ಕಲ್ಪನೆಯ ಕನಸುಗಳ
ನಿಮಗೇಳಿಕೊಳ್ಳಲು fb ಚಾವಡಿಯಷ್ಟೆ;
ಎಂದಾದರು ಕಸ ಗುಡಿಸಿ, ಪಾತ್ರೆ, ಅಡಿಗೆ ಕೊನೆಗೆ
ನನ್ನ ಕಾಲು ಒತ್ತಿ ಎಂದಿರುವೆನೆ....?!
ಏನೋ .... ನಿಮಗಾಗಿ ಕಾದು ಕಾದು ಸುಸ್ತಾಗಿ
ಮನೆಗೆ ಬೇಗ ಬರದಿದ್ದಾಗ ಕೋಪವಷ್ಟೆ...
ಏನೋ ... ಪ್ರೀತಿ ಹೆಚ್ಚಾದಾಗ ಲಟ್ಟಣಿಗೆಯಿಡಿಯುವೆ
ಅದು ಬಿಟ್ಟು ನೀವೇ... ಹೀಗೆ ಸಂಸಾರದ ಗುಟ್ಟು ವ್ಯಾಧಿರಟ್ಟು ಜಗಜ್ಜಾಹೀರು  ಮಾಡುವುದೆ ?
ನನ್ನವಳು ನಕ್ಕು ನಿಮಗೆ ಗೊತ್ತಲ್ಲಾ....
ನಾ " ಒಲಿದರೆ ನಾರಿ, ಮುನಿದರೆ ಮಾರಿ " ಎನ್ನುವುದೆ...!!