Friday, July 18, 2014

" ನಾನೇನು ಮಾಡ್ಲಿಲ್ವೆ ನಿನ್ನಾಣೆಗು "....!!

ಎದ್ದದ್ದೇ.... ಲೇಟು, ಆಗಲೆ ಗಂಟೆ ಎಂಟಾಗಿದೆ
ಇಂದು ಆಫೀಸಿಗೆ ನಾ ಹೋದಂತೆಯೇ ....!
ಗಡಿಬಿಡಿಗೆ ಕೈಕಾಲು ಏನೂ.... ಆಡದು
ಇವಳಿದ್ದಿದ್ದರೆ ಇಷ್ಟೆಲ್ಲಾ ಯೋಚಿಸಬೇಕಿತ್ತೆ...?
ಎಷ್ಟು ಅಚ್ಚುಕಟ್ಟಾಗಿ ಹೊತ್ತೊತ್ತಿಗೂ ಬಿಸಿ ಬಿಸಿ
ತಿಂಡಿ, ಕಾಫಿ , ಊಟ ರೆಡಿ ಮಾಡಿಡುತ್ತಿದ್ದಳು;
ಕೆಲಸದಳ ನಂಬಿ, ವರ್ಷಗಟ್ಟಲೆ
ಬಸಿರು ಬಾಣಂತಾನ ನಾಮಕರಣ ಎಂದು
ತವರಲ್ಲಿ ಕೂತರೆ ನನ್ನ ಸ್ಥಿತಿ ಅಧೋಗತಿಯಾಗದೆ ಇನ್ನೇನು ವಾರದಿಂದ ಮನೆಗೆಲಸಕ್ಕೆ ಬರದೆ
ಎಲ್ಲಿ ಹಾಳಾಗಿ ಹೋದಳೋ ಈ ಕೆಲಸದವಳು
ಕಸ ಮುಸುರೆ ಬಳಿದು, ನಾನೇ ಬೇಯಿಸಿ ತಿನ್ನುವಂತಾಗಿದೆ ಏನೋ... ಗೊತ್ತಿರುವ ವಯಸ್ಸಾದ ಹೆಂಗಸು
ನನ್ನವಳ ಸಹಾಯಕ್ಕಿರಲಿ ಎಂದಿಟ್ಟುಕೊಂಡರೆ
ಹೀಗೆ ಹೇಳದೆ ಕೇಳದೆ ಕೈಕೊಡುವುದೇ....?

ಇತ್ತೀಚೆಗಂತು ಈ ಬೆಂಗಳೂರಿನ ಜೋರು ಮಳೆ
ಸುರಿಯಲು ಶುರುವಿಟ್ಟರೆ ನಿಲ್ಲುವುದೇ.... ಇಲ್ಲ
ಒಂದೇ ಸಮನೆ ಕಾಲಿಂಗ್ ಬೆಲ್ನ ಸದ್ದಿಗೆ
ಬಂದವಳು ಕೆಲಸದವಳಿರಬೇಕು ಬೈದು ಹಾಗೆಯೇ
ವಾಪಸ್ ಕಳುಹಿಸಿಬಿಡಬೇಕು
ಬಾಗಿಲು ತೆರೆದರೆ ಕೆಲಸದವಳ ಮಗ ಕೃಿಷ್ಣ ನಕ್ಕಿದ್ದ
" ಎಲ್ಲೋ... ನಿಮ್ಮಮ್ಮ ಕೆಲಸಕ್ಕೆ ಬರದೆ ಏನಾಗಿದೆ
ಸಂಬಳಕ್ಕೆ ಬಂದು ಬಿಟ್ಟ ದೊಡ್ಡ ಮನುಷ್ಯ" ಗದರಿದ್ದೆ
ಸಾರ್ ಅದು ಅದು ಅಮ್ಮನಿಗೆ ಮೈ ಸರಿಯಿಲ್ಲ
ಅದಕ್ಕೆ ಈ ಅಕ್ಕನ ಕೆಲಸಕ್ಕೆ ಕರೆತಂದೆ.....
ಮಳೆಗೆ ನೆನೆದು , ಚಳಿಗೆ ನಡುಗುವವಳ ಕಂಡು
ಇವಳೇನು ಭುವಿಗಿಳಿದ ದೇವಲೋಕದ ಅಪ್ಸರೆಯೋ...
ಜೀವ ತಳೆದ ಬೇಲೂರ ಶಿಲಾಬಾಲಿಕೆಯೋ....
ಎಂಥಾ ಅಪ್ರತಿಮ ರೂಪ ಸೌಂದರ್ಯ !!!!
ಜಗದ ಸುಂದರಿಯರೆಲ್ಲರ ರೂಪರಾಶಿಯ
ಎರಕ ಹೊಯ್ದು ಸೃಷ್ಟಿಸಿದನೇ... ಇವಳ ಆ ಬ್ರಹ್ಮ !
ರ್ರೀ.... ಸ್ವಲ್ಪ ಅಡುಗೆ ಮನೆ ತೋರಿಸ್ತೀರೋ....
ಅರಳಿದ ಮಲ್ಲಿಗೆಯಂತೆ ನಕ್ಕಿದ್ದಳು
ಕನಸಿನ ಲೋಕದಿಂದ ಎಚ್ಚೆತ್ತು
ಮೊದಲು ಒಳ ಹೋಗಿ ಬೇರೆ ಬಟ್ಟೆ ಬದಲಾಯಿಸಿ ಬಾ... ಶೀತಗೀತವಾದೀತು ನನ್ನವಳ ಬಟ್ಟೆಗಳ
ಕೊಟ್ಟು ಹೊರ ಬಂದಿದ್ದೆ....
" ಸರ್ ಮೇಡಮ್ ಲೈನಲ್ಲಿದ್ದಾರೆ ಫೋನ್ ಕನೆಕ್ಟ್ ಮಾಡಲೇ... ಆಪ್ತ ಸಹಾಯಕಿಯ ಕೋಕಿಲವಾಣಿಯ ಕರೆಗೆ ಮೀಟಿಂಗ್ನಲ್ಲಿರುವಾಗಲೇ .... ಇವಳ ಫೋನೇ....
ಸರಿ ಸರಿ ಕನೆಕ್ಟ್ ಮಾಡಿ
ರ್ರೀ .... ಮೊದಲು ಎಲ್ಲಾ ಬಿಟ್ಟು ಈಗಲೇ ಮನೆಗೆ ಬನ್ನಿ
ಆ ಹಾ ಹಾ.... ಎಂಥಾ.... ರಸಿಕ ಕುಲೋತ್ತುಂಗರು
ನಿಮ್ಮ ಜನ್ಮಕ್ಕೆ ಬೆಂಕಿ ಬಿತ್ತು , ಕಟ್ಟಿಕೊಂಡವಳ ಬಿಟ್ಟು ಇಟ್ಕೊಳ್ಳೋಕ್ಕೆ ಇನ್ನೊಬ್ಬಳು ಬೇರೆ ಬೇಕಿತ್ತೇ....
ಛೇ...!!! ನೀವಿಂತವರೆಂದು ಕೊಂಡಿರಲಿಲ್ಲ
ತವರಿಗೆ ಹೆರಿಗೆಗೆ ನಾ ಹೋಗಿ
ಇಷ್ಟು ದಿನ ಅಲ್ಲಿಯೇ.... ಇದ್ದದ್ದು ನನ್ನ ತಪ್ಪು ;
ನಿಮ್ಮ ಮೇಲಿಟ್ಟ ನನ್ನ ನಂಬಿಕೆಗಳ ಹುಸಿ ಮಾಡಿಬಿಟ್ಟಿರಿ
ಹೋಗಿ ಹೋಗಿ ಆ ಕೆಲಸದವಳ ಜೊತೆ ಚಕ್ಕಂದವೆ
ಎಲ್ಲಿ ಬಿಡುವಿರಿ ಆ ನಿಮ್ಮ ಜೊಲ್ಲು ಸುರಿಸುವ ಬುದ್ಧಿ
ಉಪ್ಪು, ಹುಳಿ, ಖಾರ ತಿನ್ನೊ ಭಂಡ ಧೈರ್ಯ
ನಾಚಿಕೆಯಾಗ್ಬೇಕು ನಿಮ್ಮ ನಾಯಿ ಜನ್ಮಕ್ಕೆ ....
" ನಾ ಅಂತವನಲ್ಲವೇ.... ನಿನ್ನಾಣೆಗೂ ನಾನೇನು ಮಾಡ್ಲಿಲ್ವೇ... ಹೀಗೆಲ್ಲಾ .... ಏನೂ ಗೊತ್ತಿಲ್ಲದೆ ನನ್ನ ಅನುಮಾನಿಸಬೇಡವೇ.... ನನಗೂ.... ಮಾನ ಮರ್ಯಾದೆ, ರೋಷವಿದೆ
ಆ ಹಾ... ನಿಮ್ಮ ಅವಳ ಮಾನ ಮರ್ಯಾದೆಯ
ರಾಸಲೀಲೆ ಬೆಡ್ ರೂಮ್ ಲ್ಲಿ ಭದ್ರವಾಗಿ ಮಲಗಿದೆ
ನಿಮ್ಮ ಮಾನ ಹರಾಜು ಹಾಕದಿದ್ದರೆ
ನಮ್ಮಪ್ಪನ ಮಗಳೇ... ಅಲ್ಲ
ನಿಮಗಿದೆ ಬನ್ನಿ ಮಾರಿ ಔತಣ.....

4 comments:

 1. ಎಡವಟ್ಟಾಯ್ತು ತಲೆ ಕೆಟ್ಟೋಯ್ತು!
  ಆ ಮೇಲೆ ದೇಹ ಶುದ್ಧಿ ಆಯಿತೋ?

  ReplyDelete
  Replies
  1. ಯಾರದೋ ಯಡವಟ್ಟಿನಿಂದ ನನ್ನವಳು ನನ್ನೇ ಅನುಮಾನಿಸುವಂತಾಗಿದ್ದು ನನಗೇ... ಜೀರ್ಣಿಸಿಕೊಳ್ಳಲಾಗುತ್ತಿಲ್ಲ, ಈ ಹೆಂಗಸರು ಹುಟ್ಟಿನಿಂದಲೇ ಅನುಮಾನವೆಂಬ ಸಂಗಾತಿಯ ಜೊತೆಯಲ್ಲಿಯೇ... ಬೆನ್ನಲಿ ಹೊತ್ತ ಭೇತಾಳನಂತೆ ಹೊತ್ತು ಬಂದಿರುವರೇನೋ.... ಸಾಲದಕ್ಕೆ ಎಲ್ಲರೂ ನನ್ನ ಅನುಮಾನದಿ ಹೀಗೆ ನೋಡುವುದೇ.... ಅಕಟಕಟಾ.... ಧನ್ಯವಾದಗಳು ಬದರಿ ಸರ್.

   Delete
 2. Replies
  1. ಇನ್ನೂ .... ಆಷಾಡಮಾಸ, ಬರಬೇಕಿದೆ ಶ್ರಾವಣ ಮಾಸ ಅಲ್ಲಿಯವರೆಗೂ ಕಾಯಬೇಕಷ್ಟೇ ನನ್ನವಳ ಔತಣಕ್ಕೆ.... ಧನ್ಯವಾದಗಳು santodh kulkarni .

   Delete