ಹೌದೇನೇ.... ಉಮಾ, ನಾ ಕೇಳಿದ್ದು ನಿಜವೆ ?
ಅಳಿಯಂದಿರಿಗೆ ಭೂತವೋ... ಏನೋ ... ಮೆಟ್ಟಿದೆಯಂತೆ
ಛೇ... ಹೀಗಾಗಬಾರದಿತ್ತು, ಮೊದಲೇ ಸುರ ಸುಂದರಾಂಗ ಯಾವ ಮೋಹಿನಿಯ ಕಣ್ಣು ಬಿತ್ತೋ... ಏನೊ ತಾಯಿ;
ಇದ ಕೇಳಿಯೇ ಮನಸ್ಸು ತಡೆಯದೆ ಬಂದೆ ಕಾಣೆ
ರಾತ್ರಿಯೆಲ್ಲಾ ಏನೇನೋ ತಮ್ಮಷ್ಟಕ್ಕೆ ತಾವೆ ಮಾತಾಡುವರಂತೆ ಗಾಳಿ ಆಂಜನೇಯನ ತಾಯಿತ ಕಟ್ಟಿಸ ಬಾರದಿತ್ತೇ.... ಚಿಕ್ಕಮ್ಮಾ.... ಇದೆಲ್ಲ ನಿಮಗೆ ಹೇಳಿದ್ದಾದರು ಯಾರು ?
ಕೆಲಸದ ಕೆಂಪಿ ಹೇಳಿರಬೇಕು ಬರಲಿ ಅವಳು
ಅಯ್ಯೋ.... ಚಿಕ್ಕಮ್ಮಾ ಮೊದಲೇ ನೀವು fm ರೇಡಿಯೋ ಇದ್ದಂತೆ
ಇನ್ನು ನನ್ನ ಮಾನ, ಮರ್ಯಾದೆ
ಊರು ಊರಲ್ಲಿ ಹರಾಜು ಹಾಕುವಿರಿ
ಏನೂ.... ಹಾಗಿಲ್ಲ ನನ್ನವರಿಗೆ, ಸುಮ್ಮನೆ ಇಲ್ಲದ್ದು ಹೇಳಬೇಡಿ ಅಲ್ಲವೆ ಉಮ, ನನಗೇನು ಬುದ್ಧಿಯಿಲ್ಲವೆ ಮಗಳ ಮನೆ ವಿಷಯ ಬೀದಿಗೆ ತರುವೆನೆ
ಎಲ್ಲೋ.... ಮಾಟ, ಮಂತ್ರ ತಂತ್ರ ಮಾಡಿಸಿರಬೇಕು ನೋಡು ಕೈ ಮೀರಿದರೆ ಅಳಿಯಂದಿರ ಕತೆ ಗೋವಿಂದ ಗೋ.... ವಿಂದ !!
ಅಯ್ಯೋ .... ಚಿಕ್ಕಮ್ಮ ಹೀಗೆಲ್ಲ ಹೆದರಿಸಿದರೆ ಹೇಗೆ ?
ತಾಯಿತ, ಡಾಕ್ಟರ್, ಮಾಂತ್ರಿಕ
ಕೊನೆಗೆ ನಿಮಾನ್ಸಿಗೆ ಹೋಗಿ ಬಂದಾಯ್ತು
ದೆವ್ವವೂ ಇಲ್ಲ, ಮಾಟವೂ ಇಲ್ಲ
ಎಲ್ಲಾ ... ನನ್ನ ಹಣೆಯ ಬರಹ
ನೀವೇ ನೋಡಿ ಇತ್ತೀಚೆಗಂತು ರೂಮಲ್ಲಿ ಒಬ್ಬರೇ ಕೂತು ಏನೋ.... ತಮ್ಮಷ್ಟಕ್ಕೆ ತಾವೆ ಮಣ ಮಣ ಗುಟ್ಟುವರು ಅಳಬೇಡವೇ..... ನೋಡು ನಿನ್ನ ತಮ್ಮ ಬಂದ
ಅವ ಎಲ್ಲಾ....., ಸರಿ ಮಾಡುವ, ನಿಶ್ಚಿಂತೆಯಿಂದಿರೆ ತಾಯಿ ಬಾರೊ... ಚೆನ್ನು, ನೋಡೋ... ನಿಮ್ಮ ಬಾವನ ಸ್ಥಿತಿಯ.... ಅಯ್ಯೋ.... ಅಕ್ಕಾ.... ಇದು ಮಾಟ, ದೆವ್ವದ ಕಾಟವಲ್ಲ ಇದೇನಿದ್ದರು ಫೇಸ್ ಬುಕ್ ಮೇನಿಯಾ....
ಈಗ ಲ್ಯಾಪ್ ಟಾಪ್ ಕೊಡುವೆ ನೀನೆ ನೋಡು...
ಬಾವ ಹೇಗೆ ಬದಲಾಗುವರು....
Friday, July 4, 2014
" ಮಾಟವೋ, ದೆವ್ವದ ಕಾಟವೋ.... ತಿಳಿಯದಾಗಿದೆ
Subscribe to:
Post Comments (Atom)
No comments:
Post a Comment