Monday, July 21, 2014

" ಕೋಲೆ ಬಸವ " ( ಯಾಕ್ ಹಿಂಗ ಅಳಾಕ ಅತ್ತೀರಿ )

ನನ್ನನ್ನೇನು ನೀ ಹೇಳಿದ್ದಕ್ಕೆಲ್ಲ ತಲೆ ಆಡಿಸೋ
ಆ ಕೋಲೆ ಬಸವ ಅಂದ್ಕೊಂಡೆಯೋ.... ಹೇಗೆ ? ಮಾಡಕ್ಕಾಗಲ್ವೇ..... ಅದೇನ್ ನೀ ಮಾಡ್ಕೋತೀಯೋ... ಮಾಡ್ಕೊ.... ಹೋಗೆ ಹೋ.... ಗೆಲೇ.....!!
ಎಂದೂ... ಧ್ವನಿ ಎತ್ತದವನು ಇಂದು ಜೋರು ಮಾತಾಡಿದ್ದೆ ಮುಖ ಕೆಂಪಾಗಿಸಿ ರ್ರೀ.... ಹೀಗೋ...... ನಿಮ್ಸಾಚಾರ ಎಲ್ಲೋ.... ಪಿತ್ತ ನೆತ್ತಿಗೇರಿರಬೇಕು ಇಳಿಸೋದ್ ನನ್ಗೊತ್ತು ಸುಮ್ಮನೆ ಒಳಗೆ ಬಂದು, ಹೇಳಿದ್ದು ಮೊದಲು ಮಾಡಿ
ನಮ್ಮಿಬ್ಬರ ಈ ಜಗಳಕ್ಕೆ ಅಕ್ಕಪಕ್ಕದವರೆಲ್ಲಾ....
ಒಮ್ಮೆ ಇಣುಕಿ ಇದೇನು ಹೊಸದೇ ಇವರ ಜಗಳ !! ಒಬ್ಬರಿಗೊಬ್ಬರು ಕಚ್ಚಾಡಿ ಮುದ್ದಾಡೊ ಗೊರವಂಕಗಳು ಮುಸಿಮುಸಿ ನಕ್ಕು ಹೊರಟು ಹೋದವರ ಕಂಡು;
ಮತ್ತಷ್ಟು ಕೋಪಗೊಂಡು ನನ್ನನ್ನೇನು ನಿನ್ನ ಹಿಂಬಾಲಿಸೋ... ಕುರಿ ಅಂದ್ಕೊಂಡೆಯೋ..... ಹೇಗೆ ?
ಬರಲ್ವೇ.... ನಾ ಬರಲ್ಲ, ನನ್ನವಳು ದುರುಗುಟ್ಟಿದ್ದು ನೋಡಿ
ಹ್ಞೂಂ ನಡಿಯೇ.... ಮಾರಾಯ್ತಿ ಬರದಿದ್ದರೆ  
ನೀ ಎಲ್ಲಿ ನನ್ನ ಬಿಡುವೆ 
ಇಡೀ ದಿನ ತಿಂಡಿ, ಊಟವಿಲ್ಲದೆ ಉಪವಾಸ ಕೆಡವಿ ಬಿಡುವೆ
ಈ ಹೆದರಿಕೆ ಮೊದಲೇ ನಿಮಗಿದ್ದಿದ್ದರೆ,
ಇಷ್ಟೆಲ್ಲಾ.... ಜಗಳ, ಮಾತು ಬರುತ್ತಿತ್ತೇ....!!!
ನನ್ನ ಕಾಯಲು ನಿನ್ನ ಮುದ್ದಿನ ಮಗ ಬೇರೆ....

ಅರೇ.....!!! ಹರಿಣಿ ಅಕ್ಕಾ.... ನೀವಿಲ್ಲಿ !!!
ಬಡವರ ಮನೆಗೆ ಲಕ್ಷ್ಮೀ ಬಂದಂತೆ ಬಂದಿರುವಿರಿ ಬನ್ನಿ ಬನ್ನಿ
ಓಹ್ ಹೋ... fbಯ ಆತ್ಮೀಯ ಮಿತ್ರ ಬಳಗ...!!!
ಹೀಗೆ ಎಲ್ಲರೂ... ಒಟ್ಟೊಟ್ಟಿಗೆ!! ನಮ್ಮ ಮನೆಗೆ
ಬರಬೇಕು ಬರಬೇಕು
ಯಾರೋ.... ಬಂದಂತಿದೆಯೆಲ್ಲಾ.... ಎಂದು ಹೊರ ಬಂದದ್ದೇ ನಾ ಮಾಡಿದ ಯಡವಟ್ಟಾಗಿತ್ತು ನೋಡಿ
ನನ್ನವಳ ಮುಖ ಆಗ ನೋಡಬೇಕಿತ್ತು
ಇಂಗು ತಿಂದ ಮಂಗನಂತ್ತಾಗಿತ್ತು
ಬಂದವರಿಗೂ... ಗಾಬರಿ ಯಾಕಾದರೂ ಬಂದೆವೋ...
ಹೇ.... ಏನ್ ಚೆಂಬಸಣ್ಣಾ..... ಸಂಸಾರ ಅಂದ್ಮೇಲೆ
ಒಂದು ಮಾತ್ ಬರುತ್ತೆ ಹೋಗುತ್ತಪ್ಪ ಇಷ್ಟಕ್ಕೇ...
ಹೀಗೆಲ್ಲಾ ... ಹೆಂಗಸರಂತೆ ಅಳೋದೆ
ಮೊದಲು ಸಮಾಧಾನ ಮಾಡ್ಕೊಳ್ಳಿ.....
ಇದೆಲ್ಲಾ .... ಏನ್ ಅಕ್ಕೋ... ಕಲ್ಪನೆಯ ಕತೆ, ಕವನ ಅಂತ ಬರೆಯೋರು ಅದನ್ನ ನೀವು ಹಿಂಗ ನಿಜ ಮಾಡೋದೆ
ಛೆ ಛೇ.... ಇಲ್ರೀ.... ಅಣ್ಣಾವರ್ರೇ...
ನೀವು ನನ್ನ ತಪ್ ತಿಳಿಯಾಕ ಹತ್ತೀರಿ ನೋಡ್ರಲಾ....
ಇವರೇ... ನನ್ನ ಆಗಾಗ ಕೆಣಕಿ, ಗದರಿಸಿ ಬೆದರಿಸಿ
ನಾ ಮುನಿದರ ಮುದ್ದು ಮಾಡೋದು... ನಾಚಿದ್ದಳು!

4 comments:

 1. ತೇಪೆ ಭೋ ಪಸಂದಾಗಿ ಹಚ್ತೀರೀ ಸಾಹೇಬರೇ.
  ಅತ್ತಿಗೆಯನ್ನು ತಣ್ಣಗೆ ಮಾಡಲು ಈ ಪೋಸ್ಟ್ ಹಾಕಿದ್ದೀರಂತ ಗೊತ್ತಾಯ್ತು ಬುಡಿ.
  ಅಂದಹಾಗೆ ಮೂಲೆ ಮನೆ ಪಂಕಜಾಕ್ಷೀನ ನೀವು ಮೊನ್ನೆ ಗಾಡೀಲಿ ಕೂರಿಸಿಕೊಂಡು ಅದೆಲ್ಲಿಗೋ ಹತ್ತು ಕಿಲೋಮೀಟರ್ ಡ್ರಾಫ್ಟ್ ಕೊಟ್ಟ ವಿಚಾರ ಅತ್ತಿಗೆಯವರಿಗೆ ಗೊತ್ತಾದ್ರೆ ಏನ್ರೀ ಗತಿ? :-D

  ReplyDelete
 2. ಅಕಟಕಟಾ .... ನೀವು ನನ್ನ ಹೀಗೆ ಹೆದರಿಸುವಂತಾಯ್ತೇ....!! ಮೊದಲು ನನಗೂ ಗೊತ್ತಿರಲಿಲ್ಲ ಆತ್ಮೀಯ fb ಮಿತ್ರ ಬಳಗ ಮನೆಗೆ ಬರುವರೆಂದು. ನನ್ನವಳು ಇದ ಮುಚ್ಚಿಟ್ಟು ನನಗೆ ಸರಪ್ರೈಸ್ ಕೊಡಲು ಹೋಗಿ ಅವಳೇ ಪೇಚಿಗೆ ಬಿದ್ದಿದ್ದಳು. ಇಷ್ಟೆಲ್ಲಾ ಕಣ್ಣೀರು ಏಕೆ ಎನ್ನುವಿರೋ.... ಬರುವ ಅತಿಥಿಗಳಿಗಾಗಿ ಈರುಳ್ಳಿ ಹಚ್ಚಿ ( ಪಕೋಡಕ್ಕೆ ) ಬಂದ ಕಣ್ಣೀರಧಾರೆ. ಈಗಲಾದರು ಗೊತ್ತಾಯ್ತೆ ಸ್ವಾಮಿ ನಾ ಅಂತವನಲ್ಲ ಪ್ಲೀಸ್ ನಂಬಿ ಧನ್ಯವಾದಗಳು ಬದರಿನಾಥ ಪಲವಳ್ಳಿ ಸರ್

  ReplyDelete
 3. ಬದರಿನಾಥ ಸಾರ್ ನೀವು ಡ್ರಾಪ್ ಕೊಟ್ಟಿದ್ದು ಮಾತ್ರ ನೋಡಿದಿರಾ ? ನಂತರ ಅಲ್ಲಿಯೆ ಆನಂದಭವನದಲ್ಲಿ ಕುಳಿತು ತಿಂಡಿ ತಿನ್ನುತ್ತಾ ಲಲ್ಲೆ ಹೊಡೆದು ನಂತರ ಕಾಫಿಕುಡಿದು ಹೊರಟಿದ್ದನ್ನು ನೀವು ಕಾಣಲಿಲ್ಲವೆ ?

  ReplyDelete
  Replies
  1. ಆ ಮೂಲೆ ಮನೆ ಪಂಕಜಾಕ್ಷಿಯ ನನಗೆ ಪರಿಚಯ ಮಾಡಿಸಿದ್ದೇ... ಈ ಪಲವಳ್ಳಿ ಸಾರೂ...., ನೋಡಿ ಈಗ ಗಂಟು ಬಿದ್ದಳೆಂದು ನನ್ನ ಮೇಲೆಯೇ ... Partha sarathy n ಸರ್ ಹ ಹ ಹ ಹಾ....

   Delete