Friday, July 25, 2014

" ಪೂಜೆ " ಭಾಗ - 1

ಲೇ.... ಪಮ್ಮೀ.... ಗಂಟೆ ಆಗಲೆ ಹತ್ತಾಯ್ತೇ....
ಇನ್ನೂ ತಿಂಡಿ ರೆಡಿಯಾಗಲಿಲ್ಲವೆ....?
ಏನು ಅಡುಗೆ ಮಾಡುವೆಯೋ.... ಕಾಣೆ
ಇಂದು ನಾ ಆಫೀಸಿಗೆ ಹೋದಂತೆಯೇ ....
ಸದ್ಯ ಅಂತೂ... ಇಂದೇ ಬಂದೆಯಲ್ಲ; 
ಇದೇನೆ ಬೆಳ್ಳಿ ತಟ್ಟೆ, ಬೆಳ್ಳಿಯ ಚೊಂಬು
ಇಂದೇನಾದರು ವಿಶೇಷವೆ...? ಹೋಗಲಿ ಬಿಡು
ಇಂದು ಆಫೀಸಿಗೆ ಹೋಗದಿದ್ದರು ಚಿಂತೆಯಿಲ್ಲ 
ಪಟ್ಟಾಗಿ ತಿಂದುಂಡು ಮನೆಯಲ್ಲಿಯೇ..... 
ಆರಾಮಾಗಿ ಇದ್ದು ಬಿಡುವೆ
ಹೀಗೆಲ್ಲಾ ನನ್ನ ನೋಡಿ ನಗಬೇಡವೆ ಮಾರಾಯ್ತಿ
ಉಪ್ಪು ಹುಳಿ, ಖಾರ ತಿನ್ನುವ ಈ ದೇಹ 
ನನಗೆ ಮೂಡು ಬಂದರೆ ಕಷ್ಟ ಕಷ್ಟ;
ನನಗಿಂದು ಪು ಪು ಪು ಪೂಜೆಯೇ.....!!!
ನನ್ನದೇನು ತಪ್ಪಿಲ್ಲವೆ, ಹೂ ಕೀಳುವಾಗ
ಏನೋ.... ಪರಿಚಯದ ನಗೆಯ ನಕ್ಕು
ಒಂದೆರಡು ಗುಲಾಬಿ ಹೂ ಬೇಕೆಂದಳು ಕೊಟ್ಟೆ
ಇಷ್ಟಕ್ಕೆಲ್ಲಾ.... ನೀ ಹೀಗೆ ನನ್ನ ಅನುಮಾನಿಸಿ
ಸೌಟು, ಲಟ್ಟಣಿಗೆ, ಚೊಂಬಲ್ಲಿ ದಾಳಿ ಮಾಡದಿರು
ನಿನ್ನಾಣೆಗೂ... ಅಂತವನಲ್ಲವೇ ಅಲ್ಲ ನಾನು
ನನ್ನ ನಂಬೇ.... ಮಾರಾಯ್ತಿ ಪ್ಲೀಸ್ ಪ್ಲೀಸ್ 

ರ್ರೀ...... ನನಗೆ ಬರುವ ಕೋಪಕ್ಕೆ
ನಾ ಇಂದು ಏನೂ.... ಮಾತಾಡುವಂತಿಲ್ಲ
ಇಲ್ಲದಿದ್ದರೆ ಆ ಕಥೆಯೇ.... ಬೇರೆಯಾಗುತಿತ್ತು
ಸುಮ್ಮನೆ ಬೆಳ್ಳಿತಟ್ಟೆಯ ಮೇಲೆ ನಿಲ್ಲಿ
ಇಂದು ಬೀಮನ ಅಮಾವಾಸ್ಯೆಯ ವ್ರತ "
ಪಾದಪೂಜೆ " ಯ ಮಾಡಬೇಕು ನಿಮಗೆ
ಎನ್ನುವುದೆ ನಗುತ ನನ್ನವಳು....!!!!

2 comments:

  1. ದಿನ ದಿನ ಶ್ರೀಕೃಷ್ಣ ಪರಮಾತ್ಮನಾಗುತಿರುವ ಪತಿ ದೇವರಿಗೆ ಈವತ್ತು ಭೀಮನ ಅಮಾವಾಸ್ಯೆಯ ಪೂಜೆ. ನಾಳೆ ಯಥಾ ಪ್ರಕಾರ ಸಹಸ್ರನಾಮಾರ್ಚನೆ ಮತ್ತು ಲಟ್ಟಣಿಗೆ ಸೇವೆ! :-D

    ReplyDelete
    Replies
    1. ಹಾರೈಸಿ, ಮೆಚ್ಚಿದವರ ( ಪಲವಳ್ಳಿ ) ಹಾರೈಕೆಗೆ ಹಿರಿಹಿರಿ ಹಿಗ್ಗಬೇಕೋ.... ನಗಬೇಕೋ... ಲಟ್ಟಣಿಗೆಯ ಸೇವೆಯ ನೆನೆನೆದು ಅಳಬೇಕೋ ತಿಳಿಯದಾಗಿದೆ ಸಾ....ರು. ಎರಡನೆಯ ಯೂನಿಟ್ಟಲ್ಲೇನೋ ಸಮಸ್ಯೆಯಂತೆ ಹೀಗೆ ಹೋಗಿ ಹಾಗೆ ಬರುವೆ.

      Delete