ಕಲ್ಲಾಗಿಹ
ಕಾಣದ ದೇವರ
ಗುಡಿಯೊಳಗಿಟ್ಟು
ಬಗೆ ಬಗೆ ಹೂಗಳ ಅರ್ಪಿಸಿ,
ಧೂಪದಿ, ದೀಪದಿ ಬೆಳಗುತ
ಸ್ತುತಿಸುತ ಜನರು ಪೂಜಿಪರು
ಕಣ್ಣಿಗೆ ಕಾಣುವ
ಹೊತ್ಹೆತ್ತು, ತುತ್ತಿತ್ತ
ತಾಯಿಯೇ ದೇವರೆಂದು
ಅರಿಯದೆ ಅವಳ ನೆನೆಯದೆ
ಮಡದಿ, ಮಕ್ಕಳ ಮೋಹದಲಿ
ಮುಪ್ಪಿನ ಕಾಲಕೆ
ಹಿಡಿ ಅನ್ನವ ನೀಡದೆ
ಮೂಲೆಗೆ ಅವಳನೆ ನೂಕುತ
ಮೂಢರ ಹಾಗೆ ವರ್ತಿಸುವರು
ಮಾತೃ ಹೃದಯವ ಹಿಂಸಿಸುವವರು ಮನುಜರಲ್ಲ!
ReplyDelete