ರ್ರೀ..........ಸಾಕು, ಬನ್ರಿ ಒಳಗೆ
ನಿಮಗೆ ಹೇಳ್ತಿರೋದು ಕೇಳ್ಸಿಲಿಲ್ವೇ
ಏನವಳು ಸೀಮೆಗಿಲ್ಲದ ಸುಂದರಿ,
ಹಾಯ್ ಹೇಳ್ದಲೂಂತ ಬಾಯ್ಬಿಡ್ಬೇಡಿ;
ಈ ಗಂಡಸರ ಬುದ್ಧಿನೇ ಹೀಗೆ ಏನೋ
ಜಡೆ ಕಂಡರೆ ಸಾಕು, ಮೈಮರಿತೀರಿ !
ಲೇ..ಲೇ........ಇಷ್ಟೊಂದು ಕೋಪ ಏಕೆ ?
ಏನೋ ಎದಿರು ಮನೆಯವರಂತ ನನ್ನ ನೋಡಿ,
ಅವಳು ಪರಿಚಯದ ನಗೆ ನಕ್ಕಳಷ್ಟೆ
ಇಷ್ಟಕ್ಕೆಲ್ಲಾ ನೀ ನನ್ನ ಅನುಮಾನಿಸೋದೆ;
ಇಲ್ಲಾ ಈಗ ನಿಮ್ಮನ್ನ ಮುದ್ದು ಮಾಡ್ತೀನಿ ಬನ್ನಿ
ಹಾಕ್ರಿ ಬಾಗಿಲು ಎಷ್ಟು ದಿನದಿಂದ ನಡಿತಿದೆ
ನಿಮ್ಮ ಕದ್ದು ಮುಚ್ಚಿ ಮಾಡುವ ವ್ಯವಹಾರ ಹಾಂ !!
ಲೆ ಲೇ...ಇದೇನೆ ಇದು, ನಿನ್ನ ಕೈಲಿ ಪೊ ಪೊರಕೆ
ಪೊರಕೆ ಯಾಕ್ ಹಿಡ್ಕೊಂಡ್ ಬಂದಿಯೇ ನನ್ನ ಹತ್ತಿರ, ಹುಂ ಹೂಂ.. ಬನ್ನಿ ಪೂಜೆಯಿದೆ, ಬೇಗ ಕಸ ಗುಡಿಸಿ; ಎಂದೆನ್ನಬೇಕೆ ನಗು ನಗುತ ನನ್ನ ಮುದ್ದಿನಮಡದಿ!
ಪೊರಕೆ ಸೇವೆ ನೆಲಕಾಯಿತು ಸದ್ಯ!!! ಹ್ಹಹ್ಹಹ್ಹ...
ReplyDeleteನಾ ಹೆದರಿಕೆಯಿಂದ ಬೆದರಿ ಬೆವತಿದ್ದೆ, ಅವಳ ಕೈಯಲ್ಲಿನ ಪೊರಕೆಯ ಕಂಡು ಒಂದು ಕ್ಷಣ ಬೆಚ್ಚಿ ನೆನೆಯದ ದೇವರಿರಲಿಲ್ಲ ಏನೂ ತಪ್ಪು ಮಾಡದಿದ್ದರೂ ಅವಳ ರೌದ್ರಾವತಾರ ನೋಡಿ ಗಂಟಲ ಪಸೆಹಾರಿತ್ತು ಬದರಿಜೀ.
ReplyDelete