Friday, December 20, 2013

" ವ♢ಡರ್ ಗಣ್ಣು "

ಅಳಿಯಂದರಿಗೇಕೇ ಸೌಗಂಧಿಕಾ ...
ನನ್ನ ಮೇಲೆ ಒಂದು ರೀತಿಯ ಕೆಟ್ಟ ಕಣ್ಣು,
ನನಗೆ ಒಂಥರಾ ಆಗುತ್ತೆ ಕಣೆ ಅವರ ನೋಡಿದರೆ !
ಈ ಪ್ರಾಣಿ, ಹೆಂಗಸರನ್ನು ಕಂಡೇ ಇಲ್ಲವೋ ಏನೋ ?
ಹೀಗೆ ನೋಡಿ ಹಪಹಪಿಸಿ ಜೊಲ್ಲು ಸುರಿಸುವುದೇ ... ? ಯಾವುದಕ್ಕೂ ನಿನ್ನ ಗಂಡನ ಮೇಲೆ ಒಂದು ಕಣ್ಣಿಟ್ಟಿರು !
ನನ್ನ ಅಕ್ಕ, ಈ ಹುಂಬನಿಗೆ ನಿನ್ನ ಕೊಟ್ಟು ಕೆಟ್ಟರು ;
ನಾ ಹೇಳುವುದ್ದೆಲ್ಲಾ ನಿನಗೆ ಹೇಳಿಯಾಗಿದೆ
ಇಷ್ಟರ ಮೇಲೆ ನಿನ್ನ ಇಷ್ಟಾ ಕಣೇ ಸೌಗಂಧಿಕಾ
ನಾನೇ ಉಗಿದು ಉಪ್ಪು ಹಾಕೋಣ ಎಂದರೆ
ನಿನ್ನ ಬಾಳೆಲ್ಲಿ ಮೂರಾ ಬಟ್ಟೆಯಾಗುವುದೋ ಎಂದು ಹೆದರಿ,
ನಾ ಇಂದು ಸುಮ್ಮನಿರಬೇಕಾಗಿದೆಯೇ
ಇಲ್ಲದಿದ್ದರೆ ಆ ಕತೆಯೇ ಬೇರೆಯಾಗುತ್ತಿತ್ತು ಬಿಡು !
ಅಯ್ಯೋ.... ಚಿಕ್ಕಮ್ಮಾ.... ,
ನಿಮಗೇನು ತಲೆಗಿಲೆ ಕೆಟ್ಟಿದೆಯೇ,
ಕಣ್ಣು ಕುರುಡೆ ಅಥವಾ ಅರಳು ಮರುಳೋ
ನನ್ನವರು ಎಂದೂ ಅಂತವರಲ್ಲ ತಿಳೀತೆ
ಯಾವುದಕ್ಕೂ ಡಾಕ್ಟರ್ ಬಳಿ ಹೋಗಿ ಕಣ್ಣು ಪರೀಕ್ಷಿಸಿ ಕೊಳ್ಳಿ ಇಲ್ಲದಿದ್ದರೆ ತೆಪ್ಪಗೆ ಈಗಲೇ ಊರಿಗೆ ಹೊರಡಿ
ಏನೋ ನನ್ನವರಿಗೆ ಹುಟ್ಟಿನಿಂದ ಮೆಳ್ಳಗಣ್ಣಷ್ಟೆ
ಅವರೆಲ್ಲೋ ನೋಡಿದರೆ ನಮ್ಮನ್ನೇ ನೋಡಿದಂತೆ ಕಾಣುತ್ತೆ, ಅದು ಅವರ ತಪ್ಪೇ.... ? ನೀವೇ ಹೇಳಿ ?
ಕ್ಷಮಿಸೇ..... ನನ್ನನ್ನ , ಸೌಗಂಧಿಕಾ .....
ಏನೋ......ಹಾಳಾದ್ದು ತಪ್ಪಾಗಿ ಹೋಯಿತು
ಅಳಿಯಂದಿರು ಈ ಮಾತ ಕೇಳಿಸಿಕೊಂಡರೆ
ನನ್ನ ಬಗ್ಗೆ ಏನೆಂದು ತಿಳಿದಾರು ಇನ್ನು ಅಕ್ಕಬಾವನಿಗೆ ಗೊತ್ತಾದರೆ ನನ್ನ ಜನ್ಮ ಜಾಲಾಡಿಸದೆ ಬಿಡರು
ಹೋಗಲಿ ಬಿಡು, ನಿನ್ನ ಗಂಡನಿಗೆ ವಂಡರ್ ಗಣ್ಣೇ ..... !?

1 comment:

  1. ಕಟ್ಟಕೊಂಡವನ ಬಿಟ್ಕೊಂಡ ಕಣ್ ಮಾಡ್ತಲ್ಲ ಎಡವಟ್ಟ!

    ReplyDelete