Saturday, July 2, 2016

ಕೆಂಪಿರುವೆ

ತೆಪ್ಪಗೆ ಕೂತು,
ಸಿನೆಮಾ ನೋಡುವುದ ಬಿಟ್ಟು
ಅದೇನು ಇಲ್ಲೂ " ಕೈ " ಬಿಡುವುದೆ
ನಾಚಿಕೆಯಾಗ್ಬೇಕು ನಿಮ್ಮ ಜನ್ಮಕ್ಕೆ
ಥೂ...... ತೆಗಿಯಿರಿ ಸಾಕು
ಏನು ಗಂಡಸರೋ...  ಏನು ಕಥೆಯೊ
ನೋಡಿದವರು ಏನೆಂದು ತಿಳಿಯುವರೆಂಬ ಪರಿ-
-ಜ್ಞಾನ"ವಿದ್ದರೆ ತಾನೆ ನಿಮಗೆ ?
ಹಿಂದುಮುಂದು ಯೋಚಿಸಿದೆ ನನ್ನವಳು,
ಮುಖಕ್ಕೆ ಹೊಡೆದಂತೆ ಹೇಳಿದ ಮಾತಿಗೆ
ಸಿಟ್ಟು ನೆತ್ತಿಗೇರಿದರು
ಏನೂ ಮಾತಾಡುವಂತಿಲ್ಲ, ಮಾಡುವಂತಿಲ್ಲ
ಹತ್ತಾರು ಕಣ್ಗಳು
ನನ್ನತ್ತ ನೋಡಿ ಮುಸಿಮುಸಿ ನಕ್ಕರೆ ;
ಒಂದಿಬ್ಬರು ತೋಳೇರಿಸಿದುದ ಕಂಡು
ಮೇಲೆದ್ದವನ ಕೈಹಿಡಿದೆಳೆದು ದುರುಗುಟ್ಟಿ
ಏನೂ ಮಾತಾಡದೆ ಸುಮ್ಮನೆ ಕೂರ್ರಿ,
ಈ ಪ್ರತಾಪ, ಕೋಪ ತಾಪ ಇವರ ಮುಂದಲ್ಲ
ಕೈ ಬಿಡುವಾಗ ಇರಬೇಕಿತ್ತು
ಮತ್ತದೇ......ನನ್ನವಳಿಂದ ಅವಹೇಳನ !
ಮಾತನಾಡಲೂ ಅವಕಾಶವಿಲ್ಲದೆ
ಕುಳಿತಲ್ಲಿಯೇ... ಒದ್ದಾಡಿದ್ದೆ
ಛೆ....!! ಹೋಗಿ ಹೋಗಿ ಇವಳ ಜೊತೆ ಬರಬೇಕಿತ್ತೆ ?
ಹೀಗೆ ಹೋಗಿ ಬೇಗ ಬರುವೆ ಕಾಯುವಿರೆಲ್ಲ ☺



2 comments:

  1. ನಿಮ್ಮ ಈ ಲೇಖನ ಓದಿದ ಮೇಲೆ , ಆಗಾಗ ಒಬ್ಬನೇ ಮುಗುಳ್ನಕ್ಕಿದ್ದುಒಂಟು ......

    ReplyDelete
  2. ಇರುವೆಯಿಂದ ಹೋದ ಮಾನ, ಕೆರೆದು ಕೆರೆದು ಕೆಂಪಾದ ಚರ್ಮ ಇವೆರಡು ಬದುಕಿರುವವರೆಗೂ ನಗೆಯ ತರಿಸುತ್ತೆ ☺ ನಿಮ್ಮೀ ಪ್ರತಿಕ್ರಿಯೆಗಳಿಗೆ ನನ್ನ ಧನ್ಯವಾದಗಳು.

    ReplyDelete