Friday, September 13, 2013

ಪಂಚ ಕನ್ಯೆಯರು

ಮದುವೆಯಾದ ಹೊಸತರಲ್ಲಿ
ಹೆದರಿ ನಾಚುತ್ತಿದ್ದ ನನ್ನವಳು
ಇತ್ತೀಚೆಗೆ ಏಕೋ ಏನೋ
ನನ್ನ ಕಂಡರೆ ಸಾಕು;
ಭೂಮಿ ಆಕಾಶವ ಒಂದು ಮಾಡುವಳು
ಸುಖಾ ಸುಮ್ಮನೆ ಕೋಪಗೊಳ್ಳುವಳು
ನನಗೋ ಹೆದರಿಕೆ, ನನ್ನವಳಿಗೆ ಹೀಗೇಕೆ;
ಈ ವಯಸ್ಸಿಗೆ ಹುಚ್ಚೇ
ಅಥವಾ ಭೂತ ಮೆಟ್ಟಿದೆಯೋ ಹೇಗೆ
ಯೋಚಿಸಿ ಯೋಚಿಸಿ ಸಾಕಾಗಿ,
ಧೈರ್ಯ ಮಾಡಿ ನನ್ನವಳ ಕೇಳಿಯೇ ಬಿಟ್ಟೆ
ನಿನಗೇನಾದರೂ ತಲೆಗಿಲೆ ಕೆಟ್ಟಿದೆಯೇ
ನಡೆ ವೈದ್ಯರಲ್ಲಿ ತೋರಿಸುವ
ಬೇಡವಾದರೆ ತಾಯಿತ ಕಟ್ಟಿಸುವ !

ರ್ರೀ.. ಮತ್ತೇ ನನ್ನ ಕೆರಳಿಸ ಬೇಡಿ
ಸುಮ್ಮನೆ ಇಲ್ಲಿಂದ ಎದ್ದೋಗಿ,
ಗಂಡು ಗಂಡೆಂದು
ವಂಶೋದ್ಧಾರಕ ಮಗ ಬೇಕೆಂದು 
ಐದು ಹೆಣ್ಮಕ್ಕಳ ಹುಟ್ಟಿಸಿದಿರಿ;
ಈ ಹೆಣ್ಮಕ್ಕಳ ಮದುವೆಯ ಮಾಡಿಸಿ
ಸಾಗ ಹಾಕುವುದು ಹೇಗಪ್ಪಾ
ಎಂದೆಲ್ಲಾ ನಾ ಯೋಚಿಸುತ್ತಿದ್ದರೆ
ನಿಮ್ಮದೇ ನಿಮಗೆ !

ನಿಜಾ ಸ್ವಾಮೀ, ನನ್ನವಳಿಗೆ
ದೆವ್ವವೂ ಇಲ್ಲ ಹುಚ್ಚೂ ಇಲ್ಲ
ಎಲ್ಲಾ ನನ್ನ ಭ್ರಮೆಯಷ್ಟೆ;
ಅವಳದೇನೂ ತಪ್ಪಿಲ್ಲ ಬಿಡಿ
ತಪ್ಪೆಲ್ಲಾ ಆದದ್ದು ನನ್ನಿಂದಲೆ
ಮೊದಲೆರಡು ಹೆಣ್ಮಕ್ಕಳ ಹೆತ್ತಾಗ,
ನಾ ಯೋಚಿಸ ಬೇಕಿತ್ತು
ಯೋಜನೆಯ ರೂಪಿಸ ಬೇಕಿತ್ತು;
ನಾ ಗಂಡಾಗಲೆಂದು ಬಯಸಿ
ಆದದ್ದು ನಮ್ಮಗಳ ಪುಣ್ಯಕ್ಕೆ
ಮತ್ತೇ ತ್ರಿವಳಿ ಹೆಣ್ಮಕ್ಕಳು
ಎರಡು ಹೆರಿಗೆಗೆ ನನ್ನವಳು ಹೆತ್ತದ್ದು
ಮುದ್ದಾದ ಪಂಚ ಕನ್ಯೆಯರ !!

2 comments:

  1. ಹೆಣ್ಣು ಪಾಪು ಹುಟ್ಟಿದ ಕೂಡಲೇ ಗಂಡನ ಮನೆಯವರ ನಡವಳಿಕೆ ಹೇಗಿರಿತ್ತು ಎನ್ನುವುದನ್ನು ಕಣ್ಣಾರೆ ಕಂಡು ಅನುಭವಿಸಿದ್ದೀನಿ. ಯಾಕೋ ಅವೆಲ್ಲಾ ನೆನಪಾಗಿ ಕಣ್ಣೂ ಒದ್ದೆ. :(

    ReplyDelete
  2. ಹೆಣ್ಣೆಂದರೆ ಕೆಲವರಿಗೆ ಅಸಡ್ಡೆ, ತಾನೂ ಒಂದು ಹೆಣ್ಣಾಗಿ ಮನೆ ಬೆಳಗುವವಳು ಎಂದು ಗೊತ್ತಿದ್ದರೂ; ಅಯ್ಯೋ ಹೆಣ್ಣ ಹೆತ್ತಳೆ ದರಿದ್ರವಳು ಎಂದು ಮೂಗು ಮುರಿಯವವರೇ। ಹೆಚ್ಚು. ಧನ್ಯವಾದಗಳು ಬದರಿನಾಥ ಪಲವಳ್ಳಿ ಸರ್.

    ReplyDelete