ರ್ರೀ.... ನಿಮಗೇನಾದರೂ,
ತಲೆಗಿಲೆ ಕೆಟ್ಟಿದೆಯೋ ಹೇಗೆ
ಪಿಎ ಆದವಳ ಪ್ರಿಯೆ ಎಂದರೆ
ಆಗುವುದೆಲ್ಲಾ ಹೀಗೆಯೇ;
ತಿಂಗಳಲ್ಲಿ ಹದಿನೈದು ದಿನ
ಅವಳ ಜೊತೆ ಸುಖ ಸಂಸಾರ
ಇನ್ನುಳಿದ ಹದಿನೈದು ದಿನ
ನನ್ನ ಜೊತೆ ಸಂಸಾರ, ವಿಹಾರ
ಕೋರ್ಟಿನ ಆದೇಶ, ಉಪದೇಶ
ಇದಕ್ಕೆ" ಲಿವಿಂಗ್ ಟುಗೆದರ್ " ನ
ಸಂಬಂಧಗಳ ಹೆಸರು ಬೇರೆ ?
ಏನೋ ಆದದ್ದಾಯ್ತು ಹಾಳಾದವಳಿಗೆ
ಒಂದಷ್ಟು ದುಡ್ಡು ಕಾಸು ಕೊಟ್ಟು ಹೆದರಿಸಿ,
ಬಾಯ್ಮುಚ್ಚಿಸಿ ಕಳಿಸದೆ
ಹೀಗೆ ಮನೆಗೆ ಕರೆತರುವುದೆ;
ನಿಮ್ಮ ಹೆಸರಿಗೆ ತಕ್ಕಂತಿದ್ದೀರಿ ಬಿಡಿ
ಎಲ್ಲಾ ನನ್ನ ಪೂರ್ವ ಜನ್ಮದ ಕರ್ಮ
ದುಂಬಿ ಮುಟ್ಟದ ಹೂವು ಇಲ್ಲ,
ಗಂಡ ನೋಡದ ಹೆಣ್ಣಿಲ್ಲಾಂತಾಯ್ತು !
ನಾನೇನೂ ಅವಳ ಜೊತೆ
ಬೇಕೂಂತ ತಪ್ಪೆಸಗಲಿಲ್ಲವೆ ನಿನ್ನಾಣೆಗೂ,
ಪಾರ್ಟಿಯಲ್ಲಿ ಒಂದಷ್ಟು ಮಧಿರೆ ಹೆಚ್ಚಾಗಿ
ನಶೆ ತಲೆಗೇರಿ, ಈಗೆಲ್ಲಾ ಆಯ್ತು ಅಷ್ಟೆ;
ಏನೋ ನಿನ್ನ ಪುಣ್ಯದ ಫಲ
ಎಲೆಕ್ಟ್ರಾನಿಕ್ ಮೀಡಿಯಾ ( ಟಿ ವಿ )
ನ್ಯೂಸ್ ಪೇಪರ್, ಪೊಲೀಸ್ ಮುಂದೆ
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಅಂತ
ಹೋಗಿ ಕಂಪ್ಲೇಂಟ್ ಕೊಟ್ಟಿದ್ದರೆ ಅವಳು
ಇಷ್ಟೊತ್ತಿಗೆ ನನ್ನ ಸ್ಥಾನ - ಮಾನ,
ಮನೆ - ಮರ್ಯಾದೆ ಹರಾಜಾಗುತ್ತಿತ್ತು
ಮೊದಲ ಹೆಂಡತಿ ಜೀವಂತ ಬದುಕಿರುವಾಗ
ಎರಡನೆಯವಳಿಗೆ ಕಾನೂನಿನಲ್ಲಿ
ಮದುವೆಗೆ ಅವಕಾಶವಿಲ್ಲ
ಏನೋ ನೀನು ಮನಸ್ಸು ಮಾಡಿದರೆ
ಈ ತಾಪತ್ರಯದಿಂದ ಪಾರಾಗ ಬಹುದು !
ಅಲಲಾ ಭಂಡ ಗಂಡ, ಒದೇ ತಿಂದರೂ ಬುದ್ಧಿ ಬರಲಿಲ್ಲವಲ್ಲಾ!
ReplyDeleteಕೆಲವರು ಹಾಗೆಯೇ ಬಾಯಿ ಚಪಲ, ಮನೆಯಲ್ಲಿ ರುಚಿ ಶುಚಿ ಇದ್ದರೂ ಹೋಟಲ್ ಊಟದ ಕಡೆ ಗಮನ ಬದರಿ ಸರ್.
ReplyDelete