Friday, December 13, 2013

ಸಂಸಾರದ ಸರಿಗಮ

ನನ್ನವಳಿಗೆ ನಾ ಆಗಾಗ
ಕೊಡುವದೆಲ್ಲಾ ಕೊಟ್ಟರೆ
ನನ್ನವಳ ಪ್ರತಿ ಮಾತೂ ಸಕ್ಕರೆ
ಅಪರೂಪಕ್ಕೊಮ್ಮೆ ನಾ ರೇಗಿದರೆ
ಆಪತ್ತು ನನ್ನ ಬೆನ್ನಿಗೆ;
ಉಪವಾಸದ ಬರೆ ನನಗೆ ಖರೆ !
ಮುನಿದು ಮುಟ್ಟಾಗುವಳು
ಜಡಿದು ಬಾಗಿಲ, ಒಳ ಸೇರುವಳು
ನಾನೋ ಬಿಸಿ ಬಿಸಿ ಬೆಲ್ಲದಂತವ
ಕೋಪಕೆ ಬೀಗ ಬಡಿದು ರಮಿಸಿದರೆ
ನಗೆ ಬೀರಿ ನನ್ನೊಳು ಒಂದಾಗುವಳು !

2 comments:

  1. ಸದರಿ ಸೂತ್ರವನ್ನು ನಾನು ಅಸುಸರಿಸಿ, ನಂತರ ಏನಾಯಿತು ಅಂತ ಹೇಳ್ತೀನಿರಿ.

    ReplyDelete
  2. ಸದರಿ ಸೂತ್ರವ ಬಳಸುವ ಮುಂಚೆ ಎಚ್ಚರ, ರೇಗುವ ಮೊದಲು ಕೈಯೊಳು ಇರಲಿ ನಾಲ್ಕೈದು ಮೊಳ ಮಲ್ಲಿಗೆ ಹೂವು, ಜೊತೆಗೆ ಒಂದಷ್ಟ ಮೈಸೂರ್ ಪಾಕ್ ನ ಸಿಹಿ ತಿಂಡಿ; ಕೋಪಕೆ ತಿಂದು ಕರಗಿದರೂ ಬೆಣ್ಣೆಯಂತೆ ಕರಗುವರು ಹ ಹ ಹ ಹಾ....

    ReplyDelete