Sunday, December 22, 2013

" ಕ್ರಿಸ್‌ಮಸ್ ಶಾಪಿಂಗ್ "

ರ್ರೀ... ಸ್ವಾಮಿ ಮಹಾಪ್ರಭುಗಳೇ,
ಮೇಲೇಳಿ ನಿದ್ದೆ ಮಾಡಿದ್ದು ಸಾಕು
ಆಗಲೇ ಗಂಟೆ ಹನ್ನೊಂದಾಯ್ತು ;
ಸೂರ್ಯ ನೆತ್ತಿಯ ಮೇಲೆ ಬರುವ ಮುಂಚೆ
ಮಾರ್ಕೆಟ್ ಗೆ ಹೋಗಿ ಹಣ್ಣು ತರಕಾರಿಯ ತನ್ನಿ !

ಲೆ ಲೇ.... ನಿನ್ನದೇನೇ ಸುಪ್ರಭಾತ
ವಾರದಲ್ಲಿ ಸಿಗುವ ಒಂದು ರಜಾ ದಿನ
ನಾ ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ
ಯಾವಾಗಲೂ ನಿಂದು ಇದ್ದದ್ದೇ ರಾಮಾಯಣ
ನನ್ನ ರೇಗಿಸಬೇಡ ಸುಮ್ಮನೆ ಒಳ ಹೋಗು
ಇಲ್ಲದಿದ್ದರೆ ನೀನೂ ಬಂದು ತೆಪ್ಪಗೆ ಮಲಗು !

ರ್ರೀ... ನಿಮಗೇಳುವುದ ನಾ ಮರೆತಿದ್ದೆ
ಯಾರೋ ಮಾರ್ಗರೇಟಂತೆ
ಎರಡೆರಡು ಬಾರಿ ಫೋನ್ ಮಾಡಿದ್ದರು
ನಿಮಗೇಕೆ ತೊಂದರೆ ಎಂದು ಸುಮ್ಮನಾದೆ
ಎಲ್ಲಿ ನನ್ನ ಬೈಯ್ಯುವಿರೆಂದು ಎಬ್ಬಿಸಲಿಲ್ಲ !

ಅಯ್ಯೋ ...... ನಿನ್ನ ಮಕ್ಕೇ....
ಎಬ್ಬಿಸಬಾರದಿತ್ತೇನೇ... ಹಾಳಾದವಳೆ
ಎಲ್ಲಾ ನಿನ್ನಿಂದ ಹಾಳಾಯ್ತು ನೋಡು,
ಕ್ರಿಸ್ಮಸ್ ಶಾಪಿಂಗ್ ಗೆ ಕರೆದೊಯ್ಯಬೇಕಿತ್ತು
ನನ್ನ ಬಾಸ್ನ ಬಾಸು ಇನ್ನೇನು ಮಾಡುವಳೋ !

2 comments:

  1. ಹ್ಹಹ್ಹಹ್ಹ ಐತೆ ಮಾರೀ ಹಬ್ಬ ಬಾಸಿನ ಬಾಸಿಣಿ ಇಂದ.

    ReplyDelete
  2. ಮಾರಿಯ ಹಬ್ಬ ಅಲ್ಲಿ, ಮದನಾರಿಯ ಹಬ್ಬ ಇಲ್ಲಿ; ಹೇಗಿದೆ ನೋಡಿ ನನ್ನ ಪರಿಸ್ಥಿತಿ. ಬೇಗ ಎದ್ದು ಹಣ್ಣು ತರಕಾರಿ ತಂದು ಕೊಡಲಿಲ್ಲ ಎಂದು ನನ್ವವಳ ಮುನಿಸು.... ಬದರಿ ಬಾಯ್.

    ReplyDelete