Friday, April 18, 2014

" ಅಮ್ಮನೆಂದರೆ ನನ್ನ ಜೀವ ನನ್ನ ದೈವ "

ಹೊತ್ತೊತ್ತಿಗೂ ತುತ್ತಿತ್ತು ಮುತ್ತಿತ್ತು
ಹೊತ್ತು ಹೆತ್ತವಳು ನೀ ನನ್ನ ಅಮ್ಮ

ಕರಿಗತ್ತಲಲ್ಲಿ ಗುಮ್ಮ ಬಂದನೆಂದ್ಹೆದರಿ
ಅಂಡು ಒದ್ದೆಗೊಂಡು ಒದ್ದಾಡುವಾಗ

ಅದನು ಒರಸಿ, ಅಪ್ಪಿ ಸಂತೈಸುತ
ಮಮ್ಮು ಉಣ್ಣಿಸಿದವಳು ನೀ ತಾನೆ

ಅತ್ತತ್ತು ಬಿಕ್ಕುವಾಗ ಗಲ್ಲವ ಹಿಡಿದೆತ್ತಿ
ಮುದ್ದಿಸಿ ಬೆಲ್ಲವ ಇತ್ತವಳು ನೀನಮ್ಮ

ದಿನಾ ನಾ ಬೆಳದಂತೆ ಬೆಳದಿಂಗಳಲ್ಲಿ
ಕೈಯ ತುತ್ತಿತ್ತು ಹಾಡ ಹಾಡಿದ ಅಮ್ಮ

ನಡೆವಾಗ ಎಲ್ಲಿ ಎಡವಿ ಬೀಳುವೆನೆಂದು
ಜೊತೆ ಜೊತೆಯಲ್ಲಿ ಹೆಜ್ಜೆ ಇಟ್ಟವಳು ನೀ

ಕನಲಿ ಕರೆವಾಗ, ತೊದಲು ನುಡಿವಾಗ
ನೀ ಓಡೋಡಿ ಬಂದೆನ್ನ ಹರಸಿದ ತಾಯಿ

2 comments:

  1. ಇಂತಹ ಶತ ಕೋಟಿ ಕವಿತೆಗಳು ಬರೆದರೂ ಮುಗಿಯದು ಅಮ್ಮನ ಋಣ ತೀರುವಿಕೆ.

    ReplyDelete
  2. ನಿಜ ಸರ್, ಏಳೇಳು ಜನ್ಮಗಳು ಹುಟ್ಟಿ ಬಂದರೂ ತೀರಿಸಲಾಗದು ಹೆತ್ತಮ್ಮನ ಋಣ Badarinath Palavalli

    ReplyDelete