Monday, April 14, 2014

" ಅಪೂರ್ಣ ಕವನ "

ಮಟಮಟ ಮಧ್ಯಾಹ್ನದ ಉರಿ ಬಿಸಿಲಿನ ಧಗೆಗೆ
ಮುಂಬಾಗಿಲನು ಸ್ವಲ್ಪವೇ ತುಸು ತೆರೆದು,
ಹಾಗೆಯೇ ಚಾಪೆಯ ಮೇಲೆ ಮಲಗಿದವನಿಗೆ
ಸಣ್ಣನೆಯ ಮಂಪರಿನ ಜೊಂಪು ;
ಮನದಾಗಸದಿ ದಟ್ಟೈಸಿ, ಮೇಳೈಸಿದ
ಅವಳ ನೆನಪುಗಳ ಕಾರ್ಮೋಡಗಳು ಸುರಿಸಿದ
ತುಂತುರು ಮಳೆ ಹನಿಗೆ ನೆನೆದ ಆ ಭೂರಮೆಯಂತೆ ಒಡಲೆಲ್ಲಾ.... ತಂಪು ತಂಪು !

1 comment: