Monday, March 31, 2014

" ಚೈತ್ರದ ಸಂಭ್ರಮ "

ಚಿಗುರಿದೆ ಮನ ಮಾಮರದಿ
ಚೈತ್ರದ ಭಾವ ಚಿಗುರೆಲೆಯು 
ನಿನ್ನಾ ನೆನಪುಗಳ ಕೋಗಿಲೆಯ  ಕುಹೂ ಕುಹೂ... ತಾಳ ಮೇಳಕೆ
ಧಮನಿ ಧಮನಿಗಳಲ್ಲಿ ಹರಿಯುವ
ನಿನ್ನ ಪ್ರೀತಿ ಹೂನಗೆಯ ರಾಗಕೆ
ಹೊತ್ತು ತಂದ ಸುಮ ಸೌರಭದ
ಘಮ ಘಮದ ಗಂಧ ಗಾಳಿಗೆ
ಹೊಂಗೆ ಹೂವ ಗೊಂಚಲುಗಳಲ್ಲಿ
ಭೃಂಗದ ಸಂಗೀತ ಕಾಮಕೇಳಿ
ಹರಿವ ನೀರ ತೊರೆಗಳಲ್ಲಿ
ಜುಳು ಜುಳು ನಾದ ತೇಲಿ
ಮತ್ತೆ ಮತ್ತೆ ಯುಗಾದಿ ಬಂದಿದೆ
ಹರೆಯ ಮತ್ತೆ ಎನಗೆ ತಂದಿದೆ

2 comments:

  1. ಉಗಾದಿ ಶುಭಾಶಯಗಳು.

    ReplyDelete
    Replies
    1. ಧನ್ಯವಾದಗಳು, ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಜಯ ನಾಮ ಸಂವತ್ಸರದ ಈ ಯುಗಾದಿ ನಿಮ್ಮೆಲ್ಲಾ ಕನಸುಗಳ ನನಸು ಮಾಡುವ ಭದ್ರ ಬುನಾದಿಯಾಗಲಿ Bararinath Palavalli ಸರ್.

      Delete