Tuesday, May 13, 2014

" ಅರ್ಥವಾಗದವಳು " - ೧

ಅವಳು ಯಾವಾಗಲೂ ಹಾಗೆಯೇ
ಎಲ್ಲರಂತಲ್ಲದಿದ್ದರೂ.....
ಒಮ್ಮೊಮ್ಮೆ ಅರ್ಥವಾಗುವುದೇ... ಇಲ್ಲ,
ಗಂಟೆಗಟ್ಟಲೆ ಫೋನಿನಲ್ಲಿ
ಅದೆಷ್ಟು ಮಾತಾಡುವ ವಾಚಾಳಿಯಂದರೆ
ಇವಳೇನ ಎಂದು ಮೂಗ ಮೇಲೆ ಬೆರಳಿಟ್ಟು ಕೊಳ್ಳಬೇಕು ಕೆಲವೊಮ್ಮೆ ಎದಿರು ಬದಿರು ಸಿಕ್ಕರೂ ಮಾತಾಡದೆ
ಹಾಗೆಯೇ ಸಾಗುವ ನಕ್ಕರೂ ಕಣ್ಣರಳಿಸದ,
ಅಪರಿಚಿತಳಂತೆ ಉಳಿವ ಇವಳು
ಬಾನು ಕೆಂಪೇರಿ, ಹಕ್ಕಿಗಳ ಕಲವರಕ್ಕೆ
ಸೂರ್ಯ ಉದಯಿಸಿದರೂ ಮಾತಾಡದೆ ಬಿಡುವುದೇ... ಇಲ್ಲ
ಛೆ ಹಾಳಾದ್ದು ಆಗಲೇ ಬೆಳಕಾಯ್ತೇ.... 
ಇನ್ನು ನೀ ಮಲಗೋ ಹಾಯಾಗಿ ....
ಕೆಲವೊಮ್ಮೆ  ತುಸು ಇರಿಸು ಮುರಿಸಾದರೂ...
ದಿನ, ವಾರಗಟ್ಟಲೇ ಮಾತಾಡದೆ
ಮೌನಕೆ ಶರಣಾಗಿ ಒಗಟಾಗಿ ಬಿಡುವಳು
ಯಕ್ಷ ಪ್ರಶ್ನೆಯಾಗಿ ಉಳಿದವಳ ಪ್ರೀತಿಗೆ
ಅವಳ ಮನ ಮೋಹಕ ನಗೆಗೆ ಸೋತರೂ
ಇನ್ನೂ ... ನನ್ನಿಂದ ಕಾರಣ ಹುಡುಕಲಾಗಲಿಲ್ಲ...

ನನ್ನ ಮರೆತು ಬಿಡೋ... ಬುದ್ದು.....,
ನಾಳೆ ನನ್ನ ನೋಡಲು ಹುಡುಗನ ಕಡೆಯವರು ಬರುವರು
ನೀನೇ ನಿಂತು ಅವರ ಆದರಿಸಿ, ಉಪಚರಿಸಬೇಕು
ನನಗಾಗಿ ನನ್ನ ಸ್ನೇಹದ ಉಡುಗೊರೆಯಾಗಿ ಬರುವೆಯಲ್ಲಾ....!!
ನಾನವಳ ಮಾತ ಕೇಳಿ ಇಡೀ ರಾತ್ರಿಯೆಲ್ಲಾ ... ಒದ್ದಾಡಿದ್ದೆ
ಅವಳ ಆಲೋಚನೆಯಲ್ಲೇ... ಅವಳ ಮನೆಗೆ ಹೋಗಿ 
ಬೈಯ ಬೇಕೆಂದು ಬೈಕ್ ಅತ್ತಿ ಹೋದವನು
ಸೀದ ಸೇರಿದ್ದು ಆಸ್ಪತ್ರೆ.....,
ಗುಡುಗು ಮಿಂಚಂತೆ ಬಂದವಳು
ಅಯ್ಯೋ .... ಬುದ್ದೂ.... ನೀನೆಂತವನೋ...
ನಾ ತಮಾಷೆಗೆ ಹೇಳಿದ್ದು , ನಿಜವೆಂದು ಕೊಂಡೆಯೋ...ಹೇಗೆ? ಈ ಹೃದಯ ಕಷ್ಟಗಳಿಗೆ ಮರುಗದೆ ಕಲ್ಲಾಗಿರಬೇಕು
ಆಗಲೇ ಪ್ರೀತಿ ಗಟ್ಟಿಯಾಗುವುದು
ಛೆ ಛೇ... ನೀ ಹೀಗೆಲ್ಲಾ ... ಅಳುವುದೆ
ಮುತ್ತಿತ್ತು ಹೋದವಳು ಬಂದದ್ದು
ಬೆಳದಿಂಗಳ ನಡುರಾತ್ರಿಗೆ, "ಫೋನಾಯಿಸಿ "
ನನ್ನೆಲ್ಲಾ .... ನೋವ ಮರೆಸಿದ್ದಳು 

2 comments:

  1. ಹೀಗೆ ಬುದ್ದುವು ಆಗುವುದೂ ಬದುಕಿನ ಸವಿ ನೆನಪೇ ಅಲ್ಲವೇ ಮತ್ತೆ?
    ಹುಡುಗೀರು ಅರ್ಥವಾಗೋವರು ಸುಲಭಕ್ಕೆ ಅಲ್ಲರೀ ಚೆನ್ನಣ್ಣೋಯ್! :)

    ReplyDelete
    Replies
    1. ಮೀನ ಹೆಜ್ಜೆಯ ಗುರುತಿಸ ಬಹುದು, ಆಗಸದ ಕೋಟಿ ನಕ್ಷತ್ರ ಪುಂಜಗಳ ಎಣಿಸಿ ಭಾಗಿಸಿ , ಗುಣಿಸಿ ಲೆಕ್ಕವಿಡಬಹುದಂತೆ.... ಈ ಹೆಣ್ಮಕ್ಕಳ ವಿಷಯ ಹಾಗಲ್ಲ; ಅರ್ಥವಾಗುವುದೇ... ಇಲ್ಲಾ, ಒಂದೋ... ನಾವೇ ಸೋತು ಶರಣಾಗಬೇಕು. ಮುನಿದರಂತೂ... ಮುಕ್ಕೋಟಿ ದೇವರುಗಳಿಗೂ ಮುಕ್ತಿಯಿಲ್ಲವಂತೆ ಬದರಿ ಅಣ್ಣೋ... :-)

      Delete