Friday, June 20, 2014

" ನಾನೇ...... ಸ್ಟ್ರಾಂಗು " - ೧

ಮನೆಯೊಳಗೆ ಅಡಿಯಿಟ್ಟೊಡನೆ 
ಎಂದೂ ಇಲ್ಲದ ನೀರವ ಸ್ಮಶಾನ ಮೌನ
ಹೆದರಿಕೆಯಿಂದ ಮಗ,ಮಗಳು ಒಂದೊಂದು ಕಡೆ
ಮುಖ ಊದಿಸಿ ಕೊಂಡು ಕೂತ ನನ್ನವಳು
ಮತ್ತೊಂದು ಕಡೆ;
ಅಪ್ಪಿತಪ್ಪಿ ಬಾಯ್ಬಿಟ್ಟರೆ ನನ್ನದೇ ಬಣ್ಣಗೇಡು
ಈ ಸ್ಥಿತಿಯಲ್ಲಿ ಏನೂ.. ಮಾತಾಡುವಂತಿಲ್ಲ
ನನ್ನವಳ ಕೈಗೆ ಸಿಕ್ಕರೆ ಮುಗಿಯಿತು
ಜುಟ್ಟು, ಜನಿವಾರವೆಲ್ಲಾ.... ಕಿತ್ತೆಸೆದು
ಒಮ್ಮೆಲೆ ದುರ್ಗಿ, ಚಂಡಿ, ಚಾಮುಂಡಿಯರೆಲ್ಲಾ 
ಮೈಮೇಲೆ ಬಂದು ದಾಳಿಯಿಟ್ಟರೆ ನನ್ನ ಗತಿ
ಗೋವಿಂದಾ.... ಗೋ... ವಿಂದ
ಮಿತ್ರನ ಒತ್ತಾಯಕ್ಕೆ ಮಣಿದು, ಬೇಡವೆಂದರೂ ... ಅಯ್ಯೋ...ಗುರೂ, ಹುಡಗಿಯರೇ ಬಿಯರ್ ಕುಡಿವಾಗ ನೀನೋ... ಅವರೋ... ಸ್ಟ್ರಾಂಗು
ಅಕ್ಕನಿಗೆ ಹೆದರಿಕೊಳ್ಳದಿರಲು ಧೈರ್ಯದ ಟಾನೀಕಷ್ಟೆ
ಕುಡೀ... ಗುರೂ.... ಬಿಡಬೇಡ ಕುಡಿ
ಹೌದೇ... ಮೊದಲೇ... ಹೇಳಬಾರದಿತ್ತೇನೋ....
ಒಂದೆರೆಡು ಪೆಗ್ಗು ಹೊಟ್ಟೆಗೆ ಬಿದ್ದಾಗಲೇ ಗೊತ್ತಾಗಿದ್ದು
ನಶೆಯ ಕಿಕ್ಕು ಮೈಯೊಳಗೆ ಏರಿದಂತೆಲ್ಲಾ...
ಛೇ.... ನನ್ನವಳಿಗೆ ಹೆದರುವುದೆ, ಲಟ್ಟಣಿಗೆ ಏನು ?
ಸೌಟಿಡಿದು ಬೇಕಾದರೆ ಬರಲಿ ನನಗೇನು ಭ ಭಯವೆ ?!
ತೊದಲಿ ತೊದಲಿ ತೊದಲಿಕೆಯಲ್ಲೇ.. ನಿದ್ದೆಗೆ ಜಾರಿದ್ದೆ

2 comments:

  1. ದೇಹ ಶುದ್ಧೀಕರಣ ಅಭಿಯಾನ ಶ್ರೀಮತಿಯವರಿಂದ ಯಾವ ಮಟ್ಟಿಗೆ ಆಯಿತು ಮಹಾಸ್ವಾಮಿ? ಮೊದಲು ಅದ್ಹೇಳಿ...

    ReplyDelete
  2. ಇಂದು ಬೆಳಿಗ್ಗೆ ಇದ ಬರೆದು ಪ್ರಕಟಿಸಿದಾಗ, ಎಲ್ಲರಿಂದಲೂ... ಆರೋಗ್ಯಕರ ಪ್ರತಿಕ್ರಿಯೆಗಳು ಬಂದಾಗ ತುಂಬಾ ಖುಷಿಗೊಂಡಿದ್ದೆ, ಕೆಲವೊಂದು ಕಡೆ ಅಳಿಸಿ ತಿದ್ದುಪಡಿ ಮಾಡಲು ಹೋಗಿ ಮುಖಪುಟದಲ್ಲಿ ಅಳಿಸಿ ಹೋಗಿತ್ತು. ಮನಸ್ಸಿಗೆ ಬೇಜಾರಾಗಿ ಮತ್ತೊಂದು ಬರದದ್ದೇ ಭಾಗ - 2 ನಾವೇ... ಸ್ಟ್ರಾಂಗು ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕರೂ ಸಿಗಬಹುದು, ನಗಲೂ... ಬಹುದು ಬದರಿ ಸರ್

    ReplyDelete