Friday, June 27, 2014

" ದೇವರ ಆಟ ಬಲ್ಲವರಾರು "....??

ಆಗಷ್ಟೇ ... ಸ್ನಾನ ಮುಗಿಸಿ, ತಿಂಡಿ ತಿಂದು
ಒಂದರ್ಧ ಗಂಟೆ ನಿದ್ರಿಸಿದರೆ ಹೇಗೆ...?
ಆಯಾಸದ ಮೈಮನಸ್ಸಿಗೂ... ಕೊಂಚ ಆರಾಮ
ಆಸ್ಪತ್ರೆಗೆ ಆನಂತರ ಹೋದರಾಯ್ತೆಂದು
ಹಾಸಿಗೆಯ ಮೇಲೆ ಹಾಗೆಯೇ.... ಮೈ ಚೆಲ್ಲಿ
ಇನ್ನೇನು ಮಲಗಿ ವಿಶ್ರಮಿಸಬೇಕು
ಒಮ್ಮೆಲೇ... ಬಾಗಿಲ ದಬ ದಬ ಬಡಿವ ಸದ್ದು
ಜೊತೆಗೆ ಕಾಲಿಂಗ್ ಬೆಲ್ ನ ಜೋರು ಶಬ್ಧ
ಹಾಳಾದ್ದು ನೆಮ್ಮದಿಯಾಗಿ ನಿದ್ರಿಸುವಂತಿಲ್ಲ
ಅಭೀ... ಅಭೀ... ಹೋಗಿ ನೋಡ ಬಾರದೆ
ಕರೆದರೂ... ಇವಳ ಸುಳಿವಿಲ್ಲ, ಉತ್ತರವಿಲ್ಲ
ಐದು ತಿಂಗಳ ಗರ್ಭಿಣಿ ಬೇರೆ, ಎಲ್ಲಿ ಹೋದಳೋ...? ಕಂಗಾಲಾಗಿ ದಡಬಡಿಸಿ ಎದ್ದು
ಜೋರು ದನಿಯಲ್ಲಿಯೇ... ಯಾರು ಯಾರೆಂದು ಪ್ರಶ್ನಿಸಿ
ಬಾಗಿಲ ತೆಗೆದಿದ್ದೆ ತಡ
ಹಸಿದ ಹೆಬ್ಬುಲಿ ಕಾದಂತೆ ಹತ್ತಾರು ಕೈಗಳು
ಒಮ್ಮಿಂದಲೊಮ್ಮೆ ಮುಖ ಮೂತಿ ನೋಡದೆ
ಹಿಗ್ಗಾ-ಮುಗ್ಗ ಎಲ್ಲಂದರಲ್ಲಿ ಹೊಡೆದ ಹೊಡೆತಕ್ಕೆ
ತುಟಿ ಒಡೆದು, ಮೂಗು ಬಾಯಲೆಲ್ಲಾ.... ರಕ್ತಸಿಕ್ತ
ಸೂ... ಮಗನಿಗೆ ಇನ್ನೆರಡು ತದಕ್ರಿ ಅಯ್ಯೋಗ್ಯನ ತಂದು
ಪ್ರೀತಿ ಮಾಡೋಕೆ, ಸುತ್ತಾಡೋಕೆ ಒಬ್ಬಳು
ಕಟ್ಕೊಂಡು ಸಂಸಾರ ಮಾಡೋಕೆ ಇನ್ನೊಬ್ಬಳು ಬೇಕು
ಒಳ ಹೋಗಿ ಅವಳನ್ನ ಎಳ್ಕೊಂಡ್ ಬನ್ರೋ..
ಬೇವರ್ಸಿ ನನ್ಮಕ್ಕಳಿಗೆ ತಲೆ ಬೋಳಿಸಿ, ಕತ್ತೆ ಮೇಲೆ ಕೂರಿಸಿ ಊರೆಲ್ಲಾ.... ಮೆರವಣಿಗೆ ಮಾಡ್ಬೇಕು
ಜನರ ಮಧ್ಯೆ ಅದೆಲ್ಲಿದ್ದಳೋ.... ಬಂದವಳೆ
ಚಪ್ಪಲಿಯಿಂದ ರಪ ರಪ ಬಾರಿಸಿದ್ದೇ... ಬಾರಿಸಿದ್ದು
ನಾಲ್ಕು ವರ್ಷಗಳಿಂದ ನಾ ಇವಳನ್ನೇನ...
ಇಷ್ಟಪಟ್ಟು, ಕಷ್ಟಪಟ್ಟು ಮನಸಾರೆ ಮೆಚ್ಚಿ,
ಪ್ರೀತಿಸಿ ಅಂತರಂಗದಲ್ಲಿರಿಸಿ ಆರಾಧಿಸಿದ್ದು
ಗುರೂ... ಇವಳೆಂಥಾ ಫಿಗರ್ರೂ... ನೋಡ್ ಗುರೂ...
ಕಳ್ಳಬಡ್ಡಿ ಮಗ ಇವಳಿಗೂ...ಬಸಿರು ಮಾಡಿರುವ ಯೋಚಿಸಲಾಗದಷ್ಟು ನಿತ್ರಾಣಗೊಂಡ ಮನ
ಅಯ್ಯೋ.... ಅಮ್ಮಾ..., ಅಣ್ಣಾ...
ತಂಗಿಯ ಕೂಗಿಗೆ
ಧರ ಧರನೆ ಎಳೆದು ಒದ್ದು ತರುವವರ ಕಂಡು
ಅದೆಲ್ಲಿತ್ತೋ.... ಕೋಪ ಸಿಕ್ಕ ಸಿಕ್ಕವರಿಗೆ ಬಡಿದಿದ್ದೆ
ನಾಲ್ಕಾರು ಜನರ ಸಾವಿಗೂ...ನಾ ಕಾರಣನಾಗಿದ್ದೆ.

2 comments:

  1. ಅಯ್ಯೋ ವಿಧಿಯೇ! ಎಂತಹ ಧಾರುಣ ಸನ್ನಿವೇಶವಿದು?

    ReplyDelete
  2. ಆ ವಿಧಿಯಾಟದ ಮುಂದೆ ಬಡವ, ಶ್ರೀಮಂತ ಎಲ್ಲರೂ... ಒಂದೆ; ನಾವುಗಳು ಎಣಿಸುವುದು ಒಂದು ಆ ಧೈವ ಬಗೆಯುವುದು ಮತ್ತೊಂದು.... ಯಾವ ಹೂವು ಯಾರ ಮುಡಿಗೋ ಯಾರು ಬಲ್ಲರು....?!

    ReplyDelete