Saturday, June 21, 2014

" ನಾವೇ.... ಸ್ಟ್ರಾಂಗು " - ೨

ನನ್ನರ್ಧಾಂಗಿ ದಿಢೀರ್ ಫೋನಾಯಿಸಿ
ಮೊದಲು fb ಯಲ್ಲಿ ಬರೆದುದ ಡಿಲೀಟ್ ಮಾಡಿ
ಏನು ಹೆಣ್ಮಕ್ಕಳೆಂದರೆ ನಿಮಗೆ ಅಪಹಾಸ್ಯವೆ
ಒಂಚೂರು ಹೆಣ್ಣೆಂದರೆ ಭಯ , ಭಕ್ತಿಯಿಲ್ಲ
ಹೀಗೆಲ್ಲಾ ಚಿತ್ರ ಸಹಿತ ಬರೆದು ಪ್ರಕಟಿಸಿದರೆ
ಎಲ್ಲರೂ... ಮೆಚ್ಚುವರೆಂದು ಕೊಂಡಿರೋ ಹೇಗೆ ?
ಓದಿದ ಸ್ತ್ರೀಯರೆಲ್ಲ ಹಿಡಿ ಶಾಪ ಹಾಕಿಯಾರು
ನಮ್ಮದು ಸ್ತ್ರೀ ಸಂಘವಿದೆ ಗೊತ್ತೇ.... ನಿಮಗೆ ?
ಸೌಟು, ಲಟ್ಟಣಿಗೆ, ಪೊರಕೆಯಿಡಿದು ಪ್ರತಿಭಟಿಸಬೇಕಾದೀತು ತಪ್ಪಿದರೆ, ಸಂಜೆ ಮನೆಗೆ ಬಂದಾಗ ವರಪೂಜೆ ಗೊತ್ತಲ್ಲ !

ಇವಳದೊಳ್ಳೆ ಕತೆ ವ್ಯಥೆಯಾಯ್ತಲ್ಲ
ನಾನೇನು ಹೆಣ್ಮಕ್ಕಳ ಅಗೌರಿಸಿದೆನೆ ?
ನಾ ನಿನಗೆ ಹೀಗೆ ಹೆದರುವುದ ಕಂಡು ಮಿತ್ರರೆಲ್ಲಾ...
ಹೆಂಡತಿಗೆ ಯಾಕೆ ಹೆದರುತೀ ಒಂಚೂರು ಗುಂಡು ಹಾಕು ಆಮೇಲೆ ನೀನೆ ನೋಡು ಗುರೂ...
ಸ್ಟ್ರಾಂಗು ಅವರೋ... ನೀನೋ... ಗೊತ್ತಾಗುವುದು
ಮಾತಿಗೆ ಮಾತು ಬಂದು ಆಗ ಬರದದ್ದೇ....
ಹೀಗೇನು ಹೆಣ್ಮಕ್ಕಳೇ ಸ್ಟ್ರಾಂಗು ಬಿಡು
ಬೆವರೊರಸಿ ಕೊಂಡು ಫೋನ್ ಕುಕ್ಕಿದ್ದೆ
ಅವಳ ಮೇಲೆ ಕೋಪ ತೋರಿಸಲಾದೀತೆ !

2 comments:

  1. ಅತ್ತಿಗೆಯವರ ಮಾತಿಗೆ ನಮ್ಮ full support ಇದೆ ಸಾ...
    ಹೆಣ್ಮಕ್ಳೇ ಇಸ್ಟ್ರಾಂಗೂ...

    ReplyDelete
  2. ಹ ಹ ಹ ಹಾ ಈ ರೀತಿ full support ಕೊಟ್ಟು ಕೊಟ್ಟೂ.... ನನ್ನವಳಿಗೆ ಕೋಡು ಬಂದಿದೆ ಬದರಿ ಸಾರೂ..... :-) :-)

    ReplyDelete