Friday, November 14, 2014

ಹೇಗೆ ಹೇಳಲಿ ಹೇಳು ನಾ ನಿನಗೆ....?

ನಿನ್ನ ಕಂಡೊಡನೆ ನನ್ನಾ ಈ ಮನವಿಂದು
ಗರಿಯ ಬಿಚ್ಚಿ ಕುಣಿಯುವ ಗಿರಿಯ ನವಿಲು
ನಿನ್ನ ಕಣ್ಣ ನೋಟಕೆ ಏಕೊ ಏನೊ ನನ್ನೊಳು
ಮಾತು ಬರದು, ಬರೀ ತೊದಲು ತೊದಲು
ನಾ ಹೇಗೆ ಹೇಳಲಿ ಹೇಳು, ಕೂಗಿ ನಾ ನಿನಗೇ....
ನಿನ್ನಾ ತುಟಿಯಂಚಲಿ ಮೂಡೋ ಮುಗುಳು ನಗೆಗೆ
ಮುಂಗುರುಳ ಸರಿಸಿ ಆಡೋ ಆ ನಿನ್ನಾ ಕಳ್ಳಾಟಕೇ..
ನನ್ನೀ... ಮೈ ಮನದಲ್ಲೇಕೋ ನವಿರೇಳುವುದು
ನಾ ಏನು ಮಾಡಲಿ ಹೇಳು ನೀ ಬೇಗ, ನನಗೆ ಈಗ  

3 comments:

  1. ಇಂತಹ ರಸಿಕ ಕಾವ್ಯವು ನಿಮ್ಮಿಂದ ದಿನ ನಿತ್ಯ ಬರಲಿ.

    ReplyDelete
  2. ಹೀಗೆ ಕೇಳಿದರೆ ಹೇಗೆ ? ಹೇಳುವವರಿಗೂ ತೊದಲು ತೊದಲು

    ReplyDelete
  3. ತುಂಬಾ ರಸಿಕರು ಸರ್ ನೀವು ! :)

    ReplyDelete