Sunday, December 21, 2014

ನಮ್ಮ ಗೋಳು ಯಾರು ಕೇಳುವರು ...?

ತೆಂಗಿನ ನಾರು, ಬೇರು ಕೊಕ್ಕಲಿ ಹೆಕ್ಕಿ ತಂದು
ನಾ ಚಂದದ ಗೂಡು ಕಟ್ಟಿದರಲ್ಲವೆ
ನನ್ನದೂ... ಒಂದು ಸಂಸಾರ,
ಮರಿ ಗುಬ್ಬಿಗಳ ಪರಿವಾರ
ನಿಮ್ಮಂತೆ ನಾವಿಲ್ಲ ಬಿಡಿ
ನಾಗರೀಕತೆಯ ಅಮಲಿನಲಿ
ಹುಚ್ಚೆದ್ದು ಕುಣಿವ ನಿಮ್ಮೀ ಕನಸುಗಳಿಗೆ
ನಾವು ತಾನೆ ಬಲಿ !
ಹುಳ, ಹುಪ್ಪಟೆ ಕಾಳು, ಕಡ್ಡಿಗಳ
ಒಂದೊಂದೇ ಹೆಕ್ಕಿ ತಿಂದು ಬದುಕುವ
ರೈತ ಸ್ನೇಹಿಗಳು ನಾವು....
ಮರ ಗಿಡ, ಹಳ್ಳ ಕೊಳ್ಳ,
ಕೆರೆ ಕಟ್ಟೆಗಳ ಹೊಡೆದುರುಳಿಸಿ
ಮಣ್ಣನಂಬಿ ಬದುಕುವವರ ಒಕ್ಕಲೆಬ್ಬಿಸಿ,
ಭೂಗಳ್ಳರಾದಿರಿ
ಗಗನಚುಂಬಿ ಕಟ್ಟಡಗಳ ಕಟ್ಟಿ
ಕಾಂಕ್ರೇಟ್ ಕಾಡಾಗಿಸಿದಿರಿ
ಕಾರ್ಖಾನೆಗಳು ಉಗುಳುವ ಎಂಜಲಿಗೆ
ಭೂತಾಯಿಯೂ ಮೈಲಿಗೆಯಾಗಿ
ಅಂತರ್ಜಲ ಬಸಿದು ವಿಷವಾಗಿ
ನೀರಿಗೂ... ಆಹಾಹಾಕಾರ, ಗಾಳಿಗೂ ತಾತ್ಸಾರ
ನೀವೇ ಮುಂದೊಂದು ದಿನ ಬೇಸತ್ತು
ಮುಂದಿನ ಪೀಳಿಗೆಯ ಮಕ್ಕಳಿಗೆ
ಇದೇ ಗುಬ್ಬಚ್ಚಿ ಎಂದು ನನ್ನೀ... ಭಾವಚಿತ್ರವ ತೋರಿಸುವಿರಿ ಚಿತ್ರಕೃಪೆ : Balasubrahmanya Nimmolagobba Balu

1 comment:

  1. ಗುಬ್ಬಚ್ಚಿ ನೆಪವಿಟ್ಟುಕೊಂಡು ತಾವು (ಅ)ನಾಗರೀಕ ಸಮಾಜವನ್ನು ಸರಿಯಾಗೇ ಝಾಡಿಸಿದ್ದೀರಾ...
    "ಮಣ್ಣನಂಬಿ ಬದುಕುವವರ ಒಕ್ಕಲೆಬ್ಬಿಸಿ" ಈ ಸಾಲು ಮನುಜ ಮನುಜನನ್ನೇ ಭಕ್ಷಿಸುತ್ತಿರುವ ಅಪಾಯವನ್ನೂ ಹೇಳುತ್ತಿದೆ!

    ReplyDelete