Wednesday, January 7, 2015

" ಬೇಡ ರೀ ನನ್ನ ಫಜೀತಿ "

ನನ್ನ ಮುದ್ದಿನ ಅರ್ಧಾಂಗಿ ದಿಢೀರ್ ಫೋನಾಯಿಸಿ
ರ್ರೀ!! ಏನು?, ತಿಂದದ್ದು ನಿಮಗೆ ಹೆಚ್ಚಾಯಿತೋ.... ಹೇಗೆ ? ಮೊದಲು ನೀವು fb ಯಲ್ಲಿ ಬರೆಯುವುದ ಕೂಡಲೆ ನಿಲ್ಲಿಸಿ; ದಿನಕ್ಕೊಂದೊಂದು " ಬೇಡ ಸ್ವಾಮಿ ನನ್ನ ಫಜೀತಿ "
ನಿಮ್ಮ ಕಲ್ಪನೆಯ ಫಜೀತಿ ಸರಮಾಲೆಗಳ ಪ್ರಕಟಣೆ ಬೇರೆ ! ಇದನ್ನೋದಲು ಕಾಯುವ ಒಂದಷ್ಟು ನಿಮ್ಮಂತಹ ಜನರ ಗುಂಪು ನನ್ನನ್ನೇ ದಿನನಿತ್ಯ ಕಾಟ ಕೊಡುವ ರಾಕ್ಷಸಿ ಎಂಬಂತೆ ಚಿತ್ರಿಸಿ ಅಂತರ್ಜಾಲದಲ್ಲಿ ಬಿಂಬಿಸುವುದು ಬೇರೆ
ಹೆಣ್ಮಕ್ಕಳೆಂದರೆ ಹಾಸ್ಯವೋ ಅಥವಾ ಅಪಹಾಸ್ಯವೊ
ಎಲ್ಲರೂ ನಿಮ್ಮನ್ನ ಮೆಚ್ಚಿ, ಹೊಗಳುವರೆಂದುಕೊಂಡಿರೋ ಹೇಗೆ ? ಇವನೆಂಥಹ ಗಂಡಸ್ಸೆಂದು ಹಿಂಬದಿಯಲ್ಲಿ ಹಾಡಿಕೊಂಡು ನಗದಿರರು
ಇದ ಓದಿದ ಸ್ತ್ರೀಯರೆಲ್ಲ ಹಿಡಿ ಶಾಪ ಹಾಕಿಯಾರು ಎಚ್ಚರ !! ಗೊತ್ತೇನ್ರಿ ನಿಮಗೆ ? ನಮಗೂ ಸ್ತ್ರೀ ಸಂಘಟನೆಗಳಿವೆಯಂತ ಸೌಟು, ಲಟ್ಟಣಿಗೆ, ಪೊರಕೆ, ಭಿತ್ತಿ ಚಿತ್ರಗಳ ಹಿಡಿದು
ಬೀದಿ ಬೀದಿಯಲ್ಲಿ ನಿಂತು ಪ್ರತಿಭಟಿಸಬೇಕಾದೀತು
ತಪ್ಪಿದರೆ, ಗೊತ್ತಲ್ಲ ಸಂಜೆ ಮನೆಗೆ ಬಂದಾಗ ನಿಮಗೆ ಪೂಜೆ ! ನಿಂದೊಳ್ಳೆ ಕತೆಯಾಯಿತಲ್ಲೇ ... ನಾನೇನು ಬೇಕೂಂತ ಹೆಣ್ಮಕ್ಕಳ, ನಿನ್ನ ಬಗ್ಗೆ ಬರೆದೆನೆಂದು ಕೊಂಡೆಯೋ ಹೇಗೆ ?
ಈ ಜಗತ್ತಿನಲ್ಲಿ ಅಲ್ಲಲ್ಲಿ (ನಮ್ಮ ಮನೆಯಲ್ಲಿ) ನಡೆಯುವಂತದ್ದು ತಾನೆ
ನಾ ನಿನಗೆ ಹೀಗೆ ಹೆದರುವುದ ಕಂಡೇ... ನನ್ನ ಮಿತ್ರರೆಲ್ಲ ಛೆಛೆಛೇ....!!! ಏನ್ ಗುರೂ ಅತ್ತಿಗೆಗೆ ನೀನೇ ಹೀಗೆ ಹೆದರುವುದೆ? ಒಂಚೂರು ಗುಂಡು ಹಾಕಿ, ಗುಟುರು ಹಾಕಿ ನೋಡು ಗುರೂ... ಕಮಕ್ ಕಿಮಕ್ ಎನ್ನದೆ ಹೆದರಿ ಮೂಲೆಯಲ್ಲಿ ಸೇರಿಕೊಳ್ಳುವರು ಆಗ ಸ್ಟ್ರಾಂಗು ಅವರೋ... ನೀನೋ... ಅಂತ ಗೊತ್ತಾಗುವುದು ಮಾತಿಗೆ ಮಾತು ಬಂದು ಆಗ ಬರದದ್ದೇ.... ಮಾರಾಯ್ತೀ " ನಾನೇ.... ಸ್ಟ್ರಾಂಗು " ಅಂತ
ಹೀಗೇನು ಹೆಣ್ಮಕ್ಕಳೇ ಸ್ಟ್ರಾಂಗು ಬಿಡು
ಬೆವರೊರಸಿ ಕೊಂಡು ಫೋನ್ ಕುಕ್ಕಿದ್ದೆ
ಅವಳ ಮೇಲೆ ನನ್ನ ಕೋಪ, ಪ್ರತಾಪಗಳ ತೋರಿಸಲಾದೀತೆ !

3 comments:

  1. chennagide....adare yaru yarige helidru anta swalpa confusion aste.....onde line nall comma full stop hakade bareyodu beda.....

    ReplyDelete
    Replies
    1. ಧನ್ಯವಾದಗಳು ತಮ್ಮ ಅಮೂಲ್ಯವಾದ ಸಲಹೆಗೆ. ನಾ ಇಲ್ಲಿ ಪಧ್ಯದ ರೂಪದಲ್ಲಿಯೇ ಬರೆದು ಪ್ರಕಟಿಸುವುದು ಆದರೆ ಏಕೋ ಗಧ್ಯದ ರೀತಿಯಲ್ಲಿ ಒಟ್ಟೊಟ್ಟಿಗೆ ಕಾಣುವುದು... santosh kulkani ರವರೆ.

      Delete
  2. ನಿಮ್ಮ ಮಾತು ನಿಜ. ಹಲವು ಮನೆಗಳಾಂತರಂಗವೂ ಇದೇ!
    ನಾವೂ ಅವರೇ ಸ್ಟ್ರಾಂಗೂ ಅಂತ ಒಪ್ಕೊಂಡು ಸೇಫ್ಬಾಗ್ಬುಟ್ಟೀವಿ ಅಟ್ಟೇಯಾ...

    ReplyDelete