Saturday, February 1, 2020

ಕಾವ್ಯಧಾರೆ

ನನ್ನೀ ಬರಡು ಎದೆಯೊಳಗೆ 
ಅದೇಕೋ ಪ್ರತಿ ಪದಗಳಿಗೂ ಮುಷ್ಕರ
ಹಾಳಾದ್ದು ಹೊರ ಬರದೆ ಎಲ್ಲೋ.. ಅಡಗಿ
ಮಿಡುಕಾಡಿ, ತಿಣುಕಾಡಿ ಇಣುಕಿದವೇ ವಿನಃ
ಒಂದೂ ಹೊರಬರಲೇ.... ಇಲ್ಲ;
ನೀನೊಮ್ಮೆ ಬಂದು ಹೋದರೆ
ನಿನ್ನ ನೂಪುರದ 
ಪ್ರತಿ ಹೆಜ್ಜೆಯ ಗೆಜ್ಜೆಯ ಸದ್ದಿಗೆ
ಭೋರ್ಗರೆಯುವ ಜಲಪಾತದ ಹಾಗೆ
ಉಕ್ಕಿ, ಧುಮ್ಮಿಕ್ಕುತ
ಅಂಕು ಡೊಂಕುಗಳ 
ಒಳಸುಳಿಗಳ ಛೇದಿಸಿ, ಭೇದಿಸಿ 
ನುಸುಳಿ ಬಂದಾವು  
ಭಾವದೊಲುಮೆಯ ಜೊತೆಗೂಡಿ
ಕಾವ್ಯಧಾರೆ.

No comments:

Post a Comment