Sunday, April 28, 2013

" ಹೀಗೂ ಉಂಟೇ "

ನನ್ನವಳ ಮೊದಲ ಬಸಿರಿನ
ಬಯಕೆಗಳ ಪಟ್ಟಿ ದಿನದಿನಕ್ಕೆ
ಹನುಮಂತನ ಬಾಲದಂತೆ
ಬೆಳೆಯುತಲಿತ್ತು, ಸಾಕಾಗಿತ್ತು

ಆ ಡಾಕ್ಟರ್ ಬೇರೆ ಹೆದರಿಸಿದ್ದು
ನಿಮ್ಮವಳ ಚೆನ್ನಾಗಿ ನೋಡಿಕೊಳ್ಳಿ
ಶಕ್ತಿಯಲಿ, ರಕ್ತದಲಿ ಸ್ವಲ್ಪ ವೀಕು
ಹಸಿ ತರಕಾರಿ, ಸೊಪ್ಪು ಈ ಟಾನೀಕು
ಸಮಯಕ್ಕೆ ಸರಿಯಾಗಿ ಈ ಮಾತ್ರೆ
ಕೊಟ್ಟು ಆಗಾಗ ಬಂದು ಪರೀಕ್ಷಿಸಿಕೊಳ್ಳಿ

ಮೊದ ಮೊದಲು ಏನೂ ತಿನ್ನದಿದ್ದವಳು
ಐದಾರು ತಿಂಗಳುಗಳು ಉರುಳಲು
ಉಳಿತಾಯದ ಹಣ ಕರಗತೊಡಗಿತು
ದಿನಕ್ಕೊಂದು ಆಸೆ, ನನಗೋ ಹಿಂಸೆ
ಮಕ್ಕಳ ಹಾಗೆ ಚಂಡಿಹಿಡಿಯುತ್ತಿದ್ದಳು

ಹಣ ಖರ್ಚಾದರೂ ಒಳಗೊಳಗೆ ಖುಷಿ
ಅವಳು ದುಂಡು ದುಂಡಾದುದ ಕಂಡು
ಮುವತ್ತೈದಿದ್ದವಳು ಎಂಬತ್ತಕ್ಕೇರಿದ್ದಳು
ಆಗಾಗ ರೇಗೆಸುತ್ತಿದ್ದೆ, ಗಜಗಮನೆಯೆಂದು
ಹುಸಿ ಮುನಿಸ ಬೀರಿ, ಸುಮ್ಮನಾಗುತ್ತಿದ್ದಳು

ಇನ್ನೇನು ತವರು ಮನೆಗೆ ಕಳಿಸಬೇಕು
ಅವಳ ಹೊಸ ಬಯಕೆಯ ಕೇಳಿ ನನಗೆ
ನಗುವೋ ನಗು! ಈ ಪ್ರಪಂಚದೊಳಗೆ
ಹೀಗೂ ಉಂಟೇ?! ಗಂಡನಾದವನು
ಹೆಣ್ಣಿನ ವೇಷಧರಿಸಿ ಸುತ್ತಾಡುವುದೇ ?

ದಮ್ಮಯ್ಯ, ಈ ಒಂದು ಆಸೆಯ ಬಿಟ್ಟು
ಬೇರೆ ಏನನ್ನಾದರು ನೀ ಕೇಳಬಾರದೆ
ಖಂಡಿತ ಸಾಲ ಮಾಡಿ ಕೊಡಿಸುವೆ
ಪರಿಪರಿಯಾಗಿ ಬೇಡಿದರೂ ಒಪ್ಪಲಿಲ್ಲ

ಕಾಲೇಜಿನ ನಾಟಕದಲ್ಲಿ ಸತ್ಯಭಾಮೆಯಾಗಿ
ಸಾವಿರಾರು ಜನರೆದಿರು ಅಭಿನಯಿಸಿದ್ದು
ನಾ ಬಲ್ಲೆ, ಈ ಚಿಕ್ಕ ಆಸೆಯ ನೆರವೇರಿಸಿ
ಇಲ್ಲವಾದರೆ ನಮ್ಮಿಬ್ಬರನ್ನೂ ಮರೆಯಿರಿ

ಕಾಲೇಜಿನ ನಾಟಕದ ಸತ್ಯಭಾಮೆಯ
ವಿಡಿಯೋ ತೋರಿಸಿದ್ದು ನನ್ನ ತಪ್ಪು
ಎಲ್ಲಿ ಅಭಿನಯಿಸಿ ತೋರಿಸಿ, ಆಕೆಯ
ಒನಪು ವಯ್ಯಾರ, ಹಾವಾ ಭಾವವ
ನಾ ಸೀರೆಯುಟ್ಟು ತೋರಿಸಿದ್ದಾಯ್ತು

ಅವಳದೊಂದೇ ಹಟ ಸಾರ್ವಜನಿಕವಾಗಿ
ಜೊತೆ ಜೊತೆಗೆ ಹೆಜ್ಜೆಯಾಕ ಬೇಕಂತೆ
ಬಿಡಳಿವಳು, ಬೆನ್ನೆತ್ತಿದ ಬೇತಾಳದಂತೆ
ಕೊನೆಗೆ ನಾನೇ ಸೋತೆ, ಶರತ್ತು ತಿಳಿಸಿ

ನಿನ್ನ ಜೊತೆ ಬರುವುದಷ್ಟೇ ನನ್ನ ಕೆಲಸ
ಸೀರೆಯುಟ್ಟು ಹೇಗೆ ಬರುವೆ ಎಂಬುದ
ನೀ ಕೇಳ ಬಾರದು, ತರಿಸು ಬುರ್ಕಾವ
ಕರೆ ನಿನ್ನ ಸ್ನೇಹಿತೆ ಸಭೀನಭಾನುವನ್ನ

ಇರಲಿ ಅವಳು ಸಹ ನಮ್ಮ ಜೊತೆಗೆ
ಸೀರೆಯುಟ್ಟು ಅದರ ಮೇಲೆ ಬುರ್ಖಾ
ತೊಟ್ಟು, ನಡೆಯೆಂದೆ ಮಾತಾಡದೇ
ನನ್ನ ಹಿಂಬಾಲಿಸಿದಳೆನ್ನಿ ಮನದನ್ನೆ !

7 comments:

 1. ಕೈಕೇಯಿ ವರ ಕೇಳಿದಾಗ
  ದಶರಥನ ಅವಸ್ಥೆಯೂ "ಹೀಗೂ ಉಂಟೇ"
  ಹೆಣ್ಣು ಮಕ್ಕಳಿಗೆ ಕೊಡುವ ವರ
  "ವರ" ನ ಕಾಡುವ ಬರ
  ನೀರಿಲ್ಲದಿದ್ದರೆ ಬರ
  ನೀರೆ ಇಲ್ಲದಿದ್ದರೂ ಬರ!

  ಸೂಪರ್ ಸರ್ ಬಸರಿ ಬಯಕೆ!

  ReplyDelete
 2. ha ha ha... bhale bhale nimma chanakshatana bombat!

  nijavagi "heegu unte" annisitu!

  ReplyDelete
 3. ಧನ್ಯವಾದಗಳು ಶ್ರೀ, ಮೆಚ್ಚಿ ಅಭಿಪ್ರಾಯಗಳನ್ನು ತಿಳಿಸಿದ್ದಕ್ಕೆ.ಮತ್ತಷ್ಟು ಬರೆಯಲು ಪ್ರೇರಣೆ ನೀಡಿದ್ದಕ್ಕೆ.

  ReplyDelete
 4. This comment has been removed by the author.

  ReplyDelete
 5. Nimma mecchugea ee mudre nanna barahagalige sada jeevanothsava, sada nimma abhipraya haaraike, prothsahaa egeye irali.Danyavaadagalu Pradeep Rao ravre.

  ReplyDelete
 6. ನಕ್ಕು ನಕ್ಕು ಸಾಕಾಯ್ತು ಗೆಳೆಯ. ಬುರ್ಕಾ ಮತ್ತು ಸೀರೆ ಅಹಹ....

  (ಅಂದಹಾಗೇ, ಬ್ಲಾಗ್ ಪೋಸ್ಟ್ ಮಾಡಿದವರ ಹೆಸರಿನ ಜಾಗದಲ್ಲಿ ನಿಮ್ಮ ಬ್ಲಾಗ್ ಹೆಸರಿದೆ. ತೆಗೆದು ನಿಮ್ಮ ಹೆಸರು ಹಾಕಿರಿ, setting ನಲ್ಲಿ)

  http://www.badari-poems.blogspot.in/

  ReplyDelete
 7. ಅಂತೂ ನಿಮ್ಮ ಮುಖದಲ್ಲೂ ನಗೆ ಬಂತಲ್ಲ, ನನ್ನ ಜನ್ಮ ಸಾರ್ಥಕವಾಯಿತು. ಸದಾ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ.ಧನ್ಯವಾದಗಳು ಬದರಿನಾಥ್ ಪಲವಳ್ಳಿ ಸರ್.

  ReplyDelete