Monday, May 6, 2013

" ಅನುಮಾನ "

ನನ್ನವಳಿಗೇಕೋ ಇತ್ತೀಚೆಗೆ
ನನ್ನ ಮೇಲೆ ಅನುಮಾನ !
ನಿಮಗೂ ನನ್ಮೇಲೆ ಅನುಮಾನವೇ?
ಕಳೀ ಬೇಡಿ ಸ್ವಾಮೀ ನನ್ನ ಮಾನ !
ನಾನವನಂತವನಲ್ಲ !

ಏನೋ ಬರುವುದು ಸ್ವಲ್ಪ ಲೇಟು
ಅಲ್ಲೇ ಒಂಚೂರ್ ತಿಂದು, ಕುಡಿದು
ಸುಧಾರಿಸಿ ಕೊಂಡು ಮನೆಗೆ ಬರೋದು
ನಿಮಗೆ ಗೊತ್ತಿದೆಯಲ್ಲ, ಈ ಟ್ರಾಫಿಕ್
ಸಿಗ್ನಲ್ಲು ಹಾಳಾದ ರಸ್ತೆ !

ಛೆ ಛೇ ಮಾನಿನಿ ಮದಿರೆ ಅವೆಲ್ಲ
ನನಗಂತೂ ಇಲ್ಲವೇ ಇಲ್ಲ ಬಿಡಿ,
ಮುದ್ದಾದ ಮತ್ತೇರಿಸುವ ಮಡದಿಯಿರೆ
ಮನೆಗೆ ಬರದೆ ಮತ್ತೆಲ್ಲಿಗೆ ಹೋಗಲಿ ಹೇಳಿ ?
ಸ್ನೇಹಿತರ ಅಡ್ಡದಲ್ಲಿ ಅಡ್ಡಾಡಿದವನಲ್ಲ !

ಆದರೂ ಇವಳಿಗೇಕೆ ಬಂತು ಅನುಮಾನ !
ನಾ ಅಂತವನಲ್ಲ ಎಂಬುದವಳಿಗೂ ಗೊತ್ತು
ಯಾರು ಸುರಿದರೋ ಅವಳ ಮೃದು ಮನಕೆ 
ಅನುಮಾನದ ಒಗ್ಗರಣೆಯ ಬಿಸಿಯ ತುಪ್ಪ!
ಮಾತಿಲ್ಲ ಕತೆಯಿಲ್ಲ, ನೋಟವೂ ಇಲ್ಲ !

ಹೋಗಲಿ ಬಾಯ್ಬಿಟ್ಟು ಹೇಳ ಬಾರದವಳು
ಮಕ್ಕಳ ಮೇಲೆ ಪ್ರತಾಪ ರೌದ್ರಾವತಾರ !
ನನಗೂ ಸಾಕಾಗಿತ್ತು, ಇವಳಾರ್ಭಟ ಕಂಡು 
ಮದುವೆಯ ವಾರ್ಷಿಕೋತ್ಸವವು ಬೇಡೆಂದು
ಮಗಳು ಬಿಲ್ಲು ತಂದಿತ್ತಾಗಲೇ ಗೊತ್ತಾಗಿದ್ದು !

ನನ್ನವಳ ಕೊರಳಿಗೆ ರತ್ನ ಖಚಿತ ಮಾಲೆ 
ಕೈಗಳಿಗೆರಡೆರುಡು ಬಂಗಾರದ ಕಲ್ಬಳೆ
ಆಶ್ಚರ್ಯ ಪಡಿಸೋಣವೆಂದು ಹಾಗೆ ಇಟ್ಟು, 
ವಾರ್ಷಿಕೋತ್ಸವದಂದು ಕೊಡೋಣವೆಂದು
ಇಷ್ಟೆಲ್ಲಾ ಅನುಮಾನಗಳಿಗೆ ಕಾರಣನಾಗಿದ್ದೆ !


2 comments:

  1. ಸಂಸಾರದ ಸರಿಗಮ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ. ಅಚ್ಚೃ ಪಡಿಸಲು ಎಟ್ಟಿಟ್ಟ ಉಡುಗೊರೆ ಅನುಮಾನಕ್ಕೆ ದಾರಿಯಾದದ್ದು ಸಹಜವೇ ಅಲ್ಲವೇ! ಒಳ್ಳೆಯ ಕವನ.

    ReplyDelete
  2. ಧನ್ಯವಾದಗಳು ಬದರಿನಾಥ್ ಪಲವಳ್ಳಿ ಸರ್.

    ReplyDelete