Saturday, May 18, 2013

" ಶಾಸ್ತ್ರಿಗಳ ಮಗಳು "

ರ್ರೀ...ಸ್ವಲ್ಪ ಈ ಅಡ್ರೆಸ್ಸ್
ಎಲ್ಲಿ ಬರುತ್ತೆ ಅಂತ......
ಫ್ಲೀಜ್ ಹೇಳೋಗ್ತೀರಾ.....
ಮೇಲಿಂದ ಕೆಳಕ್ಕೆ ನೋಡಿ
ಛೀ ಥೂ ಎಲ್ಲಿಂದ ಬರತ್ತಾರೊ
ಈ ಪಾಪಿ ಬೇವರ್ಸಿ ನನ್ಮಕ್ಕಳು
ಜಡೆಯ ಕಂಡರೆ ಸಾಕು, ಜೊಲ್ಲು
ಸುರಿಸ್ತಾರೆ, ಮುಖಕ್ಕೆ ನೇರ
ಮಾತುಗಳಲ್ಲಿ ಉಗಿದಿದ್ದಳು
ಅವಳ ಮಾತಿಂದ ಸಿಟ್ಟೇರಿತ್ತು !

ಹಲೋ! ಮರ್ಯಾದೆ, ಇರಲಿ
ತೋಳೇರಿಸಿ ಕೊಂಡೋದೆ
ಏನ್ರೀ...ಬಾಯಿ ಇದೆ ಅಂತ
ಜೋರ್ ಮಾತಾಡಿದರೆ ಬಾಯ್
ಹೊಲಿ ಬೇಕಾಗುತ್ತೆ, ಹುಶಾರಿರಲಿ ?
ವಿಧ್ಯಾವಂತರಿದ್ದೀರಿ, ನೋಡೋಕೆ
ಈ ರೀತಿ ನೀವ್ ಮಾತಾಡೋಕೆ,
ನಾಚ್ಕೆಯಾಗಲ್ವೇ? ದಬಾಯಿಸಿದ್ದೆ !

ಸಾರಿ ಸರ್, ನಿಮಗಲ್ಲ ನಾನ್ಹೇಳಿದ್ದು
ಅಲ್ಲೊಬ್ಬ ಪೊರ್ಕಿ ಏನ್ ಬುಲ್ ಬುಲ್
ಮಾತಾಡಕ್ಕಿಲ್ಲಾ, ಬರೋಕ್ಕಿಲ್ವಾಂದ
ಅದಕ್ಕೆ ಬಯ್ಕೊಂಡ್ ಬರ್ತಿದ್ದೆ ಐಯಾಂ
ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಸರ್

ಆ ಅಡ್ರೆಸ್ ಚೀಟಿ ಕೊಡಿ ಎಲ್ಲೋಗ್ಬೇಕೊ
ಹೇಳ್ತೀನಿ, ಚೀಟಿ ಕೈಗಿತ್ತಿದ್ದೆ , ಅದನ್ನೋದಿ
ಓ ಮೈಗಾಡ್, ನಾನು ನಿಮಗಾಗೆ ಬಂದಿದ್ದು
ಅಪ್ಪ ಬರಲಿಕ್ಕಾಗ್ಲಿಲ್ಲ , ತುರ್ತು ಕೆಲಸವಿತ್ತು
ನಾನೇ " ಸತ್ಯಭಾಮ " ಶಾಸ್ತ್ರಿಗಳ ಮಗಳು !

No comments:

Post a Comment