Wednesday, May 22, 2013

ಮೊದಲ ರಾತ್ರಿ ( First night )

ಅಳಿಯಂದ್ರೇ.... ಸಂಕೋಚ ಬೇಡಿ
ತಿನ್ನೀಯಪ್ಪಾ.. ಅತ್ತೆಯ ಉಪಚಾರ
ಬಗೆ ಬಗೆಯ ತಿಂಡಿ, ಹಣ್ಣು ಹಂಪಲು
ಸಿಹಿ, ತರಹೆವಾರಿ ಭಕ್ಷ ಖಾಧ್ಯಗಳು !

ಒಂದೇ ಎರಡೇ, ನಳಪಾಕದ ಮೃಷ್ಟಾನ್ನ
ತುಪ್ಪದ, ಘಮ ಘಮಿಸುವ ಸುಪರಿಮಳ
ಹೊಸ ಮದುವೆಯ ಹೆಣ್ಣು ಗಂಡಿಗೆ ಅಘ್ರ
ಬಾಳೆ ಎಲೆಯ ಮೇಲೆ ಭೂರೀ ಭೋಜನ !

ಅತ್ತೆಮಾವರ ಆದರಾಭಿಮಾನಕ್ಕೆ
ತಿನ್ನಲಾಗದೆ ನನ್ನವಳ ಕಡೆಯೇ
ದುರಗುಟ್ಟಿದ್ದೆ, ಮೆಲ್ಲಗೆ ಇಲ್ಲಿ ತಿನ್ನಿರಿ
ಅಲ್ಲಿ ನನ್ನ ತಿನ್ನುವರಂತೆ ನಕ್ಕಿದ್ದಳು !

ನಾದಿನಿ ಬಂದು, ಭಾವ ನನಗಾಗಿ ಈ
ಕಾಯಿ ಹೋಳಿಗೆ, ಬಾದಾಮಿ ಹಾಲು
ಕಲಸಿ ತಿನ್ನಿ, ಈ ರುಚಿಯ ಮುಂದೆಲ್ಲ
ಬೇರೆಲ್ಲವೂ ಸಪ್ಪೆ ಸಪ್ಪೆ, ಅಕ್ಕನ ಬಿಟ್ಟು
ನನ್ನ ಹಿಂದೆ ಬರುವಿರೆಂದು ನಗಾಡಿದ್ದಳು !

ನನ್ನೊಬ್ಬನಿಗೆ ಬಡಿಸಿದರೇಗೆ " ಪ್ರಿಯಾ "
ನಿನ್ನಕ್ಕನಿಗೂ ಚೆನ್ನಾಗಿ ತಿನ್ನಿಸಿದರಲ್ಲವೇ
ಹೋರಾಡಲು ಹೆಚ್ಚು ಶಕ್ತಿ ಬರುವುದು
ನಾನು ನನ್ನವಳಿಗೆ ಬೇಡವೆಂದರೂ
ಬಿಡದೆ ಹಟಕ್ಕೆ ಬಿದ್ದು ತಿನ್ನಿಸಿದ್ದೆ ಎನ್ನಿ !

ಅಯ್ಯೋ ವಕ್ರತುಂಡಾ ಚೌತಿಗೆ ಬಂದು
ಹೊಟ್ಟೆ ಬಿರಿಯ ಮೋದಕವ ತಿಂದಂತೆ
ಈ ಹೊಟ್ಟೆ ಉಬ್ಬಸಕ್ಕೆ ಪರಿಹಾರವಿಲ್ಲವೇ
ನಮ್ಮಿಬ್ಬರಿಗೂ ಕಷ್ಟ ಕೊಟ್ಟೆಯಲ್ಲೋ ಗಣಪ !

ಲೋ..ಮೋಹನ ಅಜೀರ್ಣಕ್ಕೆ ಯಾವುದಾರೂ
ಗುಳಿಗೆ ತಗೋಂಡು ಬಾರೋ ನಿಮ್ಮ ಭಾವನಿಗೆ ಅಯ್ಯೋ.... ಅಕ್ಕಾ ಗಂಟೆ ಹತ್ತಾಯಿತಲ್ಲೇ ಎಲ್ಲಾ ಮೆಡಿಕಲ್ ಶಾಪು ಮುಚ್ಚಿರುತ್ತೆ, ಶೆಟ್ಟರಂಗಡಿಯಲ್ಲಿ ತರುವೆನೆಂದು ನನ್ನವಳ ತಮ್ಮ ಹೊರಟಿದ್ದ !!

ಭಾವಾ ತಗೊಳ್ಳಿ ಅಜೀರ್ಣಕ್ಕೆ ಈ ಗುಳಿಗೆಯ
ಇಬ್ಬರೂ ತಿಂದಿದ್ದೆವು, ನನ್ನವಳು ಅಲಾಂಕರಕ್ಕೆ
ನಾ ಪ್ರಸ್ತದ ಕೋಣೆಗೆ, ಮಲ್ಲಿಗೆಯ ಸುವಾಸನೆ
ನನ್ನಲ್ಲಿ ಮತ್ತಷ್ಟು, ನವ ಚೈತನ್ಯ ತಂದಿತ್ತು !

ಮಲ್ಲಿಗೆ ಜಾಜಿ, ಕನಕಾಂಭರ ಕನೈದಿಲೆ, ಸಂಪಿಗೆ ಗುಲಾಬಿ, ಇಡೀ ಮಂಚವೇ ಹೂಗಳಿಂದ ತುಂಬಿತ್ತು ಪನ್ನೀರಿನ ಪರಿಮಳ, ಚಿತ್ತಾಕರ್ಷಕ ಚಿತ್ರಪಟಗಳು
ಹಿತ ಮಿತವಾದ ಸಂಗೀತ, ಧೂಪದ ಸುಗಂದ !

ಸುಮಂಗಲೆಯರ ಕಿಲಕಿಲ ನಗು, ಗೆಜ್ಜೆ ನೂಪುರ ಸರ್ವಲಾಂಕರ ಭೂಷಿತೆ, ದೇವಲೋಕದ ಅಪ್ಸರೆ
ಯರ ನಾಚಿಸುವಂತಿತ್ತು, ನನ್ನವಳ ನಾಚಿಕೆಯ
ಸಿರಿ ಸೊಬಗು,, ಸ್ವರ್ಗಕ್ಕೆ ಇನ್ನು ಮೂರೇ ಗೇಣು !

ರ್ರೀ...ಈಗ ಹೇಗಿದೆ ನಿಮಗೆ, ಈ ಹಾಲು ಕುಡೀರಿ
ಉ ಉಂ ಉಂ ಈ ಹಾಲೆಲ್ಲ ಬೇಡ ನನ್ನ ಚಿನ್ನಾ
ಒಂದು ನಿಮಿಷ ಬಂದೆ ತಾಳು, ಬಾತ್ ರೂಮಿಗೆ
ಹೊರಟೆ, ಇನ್ನೇನು ಕೂರ ಬೇಕು ನನ್ನವಳ ಕರೆ !

ರ್ರೀ... ಬೇಗ್ ಬನ್ರೀ... ಎಷ್ಟೊತ್ತ್ರೀ ಕಾಯೋದು
ನಂಗೆ ತಡಕೊಳ್ಳಕ್ಕಾತ್ತಿಲ್ಲ ಬೇಗ್ ಬನ್ನೀಯಪ್ಪ
ನಾ ಬಂದ ಒಡನೆಯೇ ಅವಳು, ತದನಂತರ
ನಾನು,ಇಡೀ ರಾತ್ರಿ ಇಬ್ಬರಿಗೂ ಭೇದಿಯಿಂದ
ಜಾಗರಣೆ !

No comments:

Post a Comment