Thursday, May 16, 2013

ತಾಯೇ ನಿನಗಿದು ಸರಿಯೇ ?

ಯಾರದೋ ತೀಟೆಗೆ ಹುಟ್ಟಿದವಳು ಎನ್ನುತಿಹರು ಹೊತ್ತೆತ್ತು ಮುದ್ದಿಸದೆ, ದೇವಸ್ಥಾನದ ಬಳಿ ಬಿಟ್ಟು
ಓಡಿ ಹೋಗುವ ಮುನ್ನ, ನನ್ನ ಅಳು ಹಸಿವು ನಿನಗೆ
ಕೇಳದಾಯ್ತೇ, ಕೆಂಜಿರುವೆಗಳು ಮುತ್ತಿ ಕಚ್ಚುವಾಗ

ನೊಣ ಹುಳ ಹುಪ್ಪಟೆ ಮೈ ಮೇಲೆಲ್ಲಾ ಹರಿವಾಗ
ನಿನ್ನ ಕರಳು ಚುರ್ ಎನ್ನದೇ, ಕೊರೆವ ಚಳಿಗೆ ಮೈ ನಡುಗೀತೆಂದು ಕಣ್ಣಲ್ಲಿ ಒಂದಿನಿತು ಕಂಬನಿಯು ಬರಲಿಲ್ಲವೇ, ಅವನ ಮೇಲಿನ ಕೋಪದಾ

ರೋಷಕ್ಕೋ ಅಥವಾ ಮದುವೆಗೆ ಮೊದಲೇ ನೀ ತಾಯಾದೆಯಂದೋ, ಲೋಕದಾ ಅಪವಾದಕ್ಕೆ ಹೆದರಿ, ಆ ಕುಂತಿ ತನ್ನ ಕರುಳ ಕುಡಿಯ ನೀರಲ್ಲಿ ಬಿಟ್ಟಂತೆ ನೀನೂ ಅವಳಂತೆ ಅನುಸರಿಸಿದೆಯೋ

ನನ್ನ ಕೊಲ್ಲಬಹುದಿತ್ತಲ್ಲ, ಅನಾಥಳನ್ನಾಗಿಸಿದೆ ಮತ್ತೊಂದು ನೀ ಮದುವೆಯಾದೆಯೋ ಹೇಗೆ !
ಜಗದ ಕಲ್ಯಾಣಕ್ಕೆ ಋಷಿ ಮುನಿಗಳ,ತಾಪ ತಪವ ಕೆಡಿಸಿಲು ದೇವಾನು ದೇವತೆಗಳು ಅಪ್ಸರೆಯರ

ಕಳುಸಿ ಭಂಗಗೊಳಿಸುತಿದ್ದರು, ಹಾವಾ- ಭಾವದಿ ನರ್ತಿಸಿ; ಶೃಂಗಾರ ಲೀಲೆಗಳಿಂದ ಅಂಗಾಂಗಗಳ ಸ್ಪರ್ಶಿಸಿ, ಮೈಮನಸ್ಸಗಳ ಉದ್ರೇಕಿಸಿ ಮೈಥುನಕೆ ಪ್ರಚೋದಿಸಿ ವೀರ್ಯ ಸ್ಖಲನಗೊಂಡರೂ  ಬಿಡದೆ ಕಾರ್ಯ ಸಾಧಿಸುತ್ತಿದ್ದರು; ನಿನಗಾವ ಕಾರ್ಯವಿತ್ತು  

No comments:

Post a Comment