ನನ್ನವಳಿಗೇಕೋ ಇತ್ತೀಚೆಗೆ
ನನ್ನ ಮೇಲೆ ಅನುಮಾನ !
ನಿಮಗೂ ನನ್ಮೇಲೆ ಅನುಮಾನವೇ?
ಕಳೀ ಬೇಡಿ ಸ್ವಾಮೀ ನನ್ನ ಮಾನ !
ನನ್ನ ಮೇಲೆ ಅನುಮಾನ !
ನಿಮಗೂ ನನ್ಮೇಲೆ ಅನುಮಾನವೇ?
ಕಳೀ ಬೇಡಿ ಸ್ವಾಮೀ ನನ್ನ ಮಾನ !
ನಾನವನಂತವನಲ್ಲ !
ಏನೋ ಬರುವುದು ಸ್ವಲ್ಪ ಲೇಟು
ಅಲ್ಲೇ ಒಂಚೂರ್ ತಿಂದು, ಕುಡಿದು
ಸುಧಾರಿಸಿ ಕೊಂಡು ಮನೆಗೆ ಬರೋದು
ನಿಮಗೆ ಗೊತ್ತಿದೆಯಲ್ಲ, ಈ ಟ್ರಾಫಿಕ್
ಸಿಗ್ನಲ್ಲು ಹಾಳಾದ ರಸ್ತೆ !
ಅಲ್ಲೇ ಒಂಚೂರ್ ತಿಂದು, ಕುಡಿದು
ಸುಧಾರಿಸಿ ಕೊಂಡು ಮನೆಗೆ ಬರೋದು
ನಿಮಗೆ ಗೊತ್ತಿದೆಯಲ್ಲ, ಈ ಟ್ರಾಫಿಕ್
ಸಿಗ್ನಲ್ಲು ಹಾಳಾದ ರಸ್ತೆ !
ಛೆ ಛೇ ಮಾನಿನಿ ಮದಿರೆ ಅವೆಲ್ಲ
ನನಗಂತೂ ಇಲ್ಲವೇ ಇಲ್ಲ ಬಿಡಿ,
ಮುದ್ದಾದ ಮತ್ತೇರಿಸುವ ಮಡದಿಯಿರೆ
ಮನೆಗೆ ಬರದೆ ಮತ್ತೆಲ್ಲಿಗೆ ಹೋಗಲಿ ಹೇಳಿ ?
ಸ್ನೇಹಿತರ ಅಡ್ಡದಲ್ಲಿ ಅಡ್ಡಾಡಿದವನಲ್ಲ !
ನನಗಂತೂ ಇಲ್ಲವೇ ಇಲ್ಲ ಬಿಡಿ,
ಮುದ್ದಾದ ಮತ್ತೇರಿಸುವ ಮಡದಿಯಿರೆ
ಮನೆಗೆ ಬರದೆ ಮತ್ತೆಲ್ಲಿಗೆ ಹೋಗಲಿ ಹೇಳಿ ?
ಸ್ನೇಹಿತರ ಅಡ್ಡದಲ್ಲಿ ಅಡ್ಡಾಡಿದವನಲ್ಲ !
ಆದರೂ ಇವಳಿಗೇಕೆ ಬಂತು ಅನುಮಾನ !
ನಾ ಅಂತವನಲ್ಲ ಎಂಬುದವಳಿಗೂ ಗೊತ್ತು
ಯಾರು ಸುರಿದರೋ ಅವಳ ಮೃದು ಮನಕೆ
ನಾ ಅಂತವನಲ್ಲ ಎಂಬುದವಳಿಗೂ ಗೊತ್ತು
ಯಾರು ಸುರಿದರೋ ಅವಳ ಮೃದು ಮನಕೆ
ಅನುಮಾನದ ಒಗ್ಗರಣೆಯ ಬಿಸಿಯ ತುಪ್ಪ!
ಮಾತಿಲ್ಲ ಕತೆಯಿಲ್ಲ, ನೋಟವೂ ಇಲ್ಲ !
ಮಾತಿಲ್ಲ ಕತೆಯಿಲ್ಲ, ನೋಟವೂ ಇಲ್ಲ !
ಹೋಗಲಿ ಬಾಯ್ಬಿಟ್ಟು ಹೇಳ ಬಾರದವಳು
ಮಕ್ಕಳ ಮೇಲೆ ಪ್ರತಾಪ ರೌದ್ರಾವತಾರ !
ನನಗೂ ಸಾಕಾಗಿತ್ತು, ಇವಳಾರ್ಭಟ ಕಂಡು
ಮಕ್ಕಳ ಮೇಲೆ ಪ್ರತಾಪ ರೌದ್ರಾವತಾರ !
ನನಗೂ ಸಾಕಾಗಿತ್ತು, ಇವಳಾರ್ಭಟ ಕಂಡು
ಮದುವೆಯ ವಾರ್ಷಿಕೋತ್ಸವವು ಬೇಡೆಂದು
ಮಗಳು ಬಿಲ್ಲು ತಂದಿತ್ತಾಗಲೇ ಗೊತ್ತಾಗಿದ್ದು !
ಮಗಳು ಬಿಲ್ಲು ತಂದಿತ್ತಾಗಲೇ ಗೊತ್ತಾಗಿದ್ದು !
ನನ್ನವಳ ಕೊರಳಿಗೆ ರತ್ನ ಖಚಿತ ಮಾಲೆ
ಕೈಗಳಿಗೆರಡೆರುಡು ಬಂಗಾರದ ಕಲ್ಬಳೆ
ಆಶ್ಚರ್ಯ ಪಡಿಸೋಣವೆಂದು ಹಾಗೆ ಇಟ್ಟು,
ಆಶ್ಚರ್ಯ ಪಡಿಸೋಣವೆಂದು ಹಾಗೆ ಇಟ್ಟು,
ವಾರ್ಷಿಕೋತ್ಸವದಂದು ಕೊಡೋಣವೆಂದು
ಇಷ್ಟೆಲ್ಲಾ ಅನುಮಾನಗಳಿಗೆ ಕಾರಣನಾಗಿದ್ದೆ !
ಇಷ್ಟೆಲ್ಲಾ ಅನುಮಾನಗಳಿಗೆ ಕಾರಣನಾಗಿದ್ದೆ !
ಸಂಸಾರದ ಸರಿಗಮ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ. ಅಚ್ಚೃ ಪಡಿಸಲು ಎಟ್ಟಿಟ್ಟ ಉಡುಗೊರೆ ಅನುಮಾನಕ್ಕೆ ದಾರಿಯಾದದ್ದು ಸಹಜವೇ ಅಲ್ಲವೇ! ಒಳ್ಳೆಯ ಕವನ.
ReplyDeleteಧನ್ಯವಾದಗಳು ಬದರಿನಾಥ್ ಪಲವಳ್ಳಿ ಸರ್.
ReplyDelete