Monday, September 23, 2013

ನನ್ನವಳಿಗೆ ವಿಚ್ಛೇದನ ಕೊಡಬೇಕಿದೆ ?

ನೀವೇನೇ ಅಂದುಕೊಳ್ಳಿ
ನನಗಂತೂ ಸಾಕಾಗಿದೆ
ನನ್ನವಳ ಜೊತೆ ಏಗಿ ಏಗಿ,
ನನಗೆ ಉಳಿದಿರುವ ದಾರಿ
ವಿಚ್ಛೇದನ ಕೊಡುವುದೊಂದೆ;

ನೀವು ಅಂದು ಕೊಳ್ಳಬಹದು
ಇವನಿಗೇನು ಹಣದ ಹುಚ್ಚೇ
ಅಥವಾ ಹೆಂಡತಿಯ ಕಾಟವೆ,
ಹೌದು ಸ್ವಾಮೀ ಒಂದೇ ಎರಡೆ
ಹೇಳುತ್ತಾ ಹೋದರೆ ನೂರಾರು

ಮೊದಲೆಲ್ಲಾ ನನ್ನವಳು ಸಣ್ಣಗೆ
ಬಳುಕುವ ಬಳ್ಳಿಯಂತಿದ್ದವಳು
ಒಂದು ಮಗುವಾದ ಮೇಲೆ ನೋಡಿ
ದುಂಡು ದುಂಡಗೆ ಗುಜ್ಜಾನೆಯಂತೆ,
ಹಾಸಿಗೆಯ ತುಂಬೆಲ್ಲಾ ಇವಳ ಶರೀರ

ನಾ ಎಲ್ಲಿ ಹೋಗಿ ಮಲಗಲಿ ನೀವೇ ಹೇಳಿ
ವಿಚ್ಛೇದನ ಕೊಡಲು ಇದೊಂದೇ ಕಾರಣ
ನಾ ನೀಡುವೆನೆಂದು ಕೋಪಿಸಿ ಕೊಳ್ಬೇಡಿ
ಮುದ್ದಾದ ಹೆಣ್ಣು ಮಗುವನ್ನು ಇವಳೆತ್ತರೂ ತವರಿನಲ್ಲಿಯೇ ಬೆಳೆಯಲು ಬಿಟ್ಟಿಹಳು

ನನಗೂ ಒಂದರ್ಥದಲ್ಲಿ ಒಳ್ಳೆಯದೇ ಅಲ್ಲವೆ ಇಲ್ಲಿಂದಾಚೆಗೆ ಶುಕ್ರದೆಶೆ ಎಂದು ಕೊಂಡರೆ
ನಿದ್ರೆಗಳಿಲ್ಲದೆ ಕಳೆದ ರಾತ್ರಿಗಳೇ ಅತಿಹೆಚ್ಚು
ನನ್ನಾಕೆ ಕುಂಭಕರ್ಣನ ವಂಶದವಳಿರ ಬೇಕು
ಆ ಗೊರಕೆಯ ಸದ್ದಿಗೆ ನಿದ್ದೆ ಹೇಗೆ ಬರಬೇಕು

ನನ್ನವಳ ಎಬ್ಬಿಸಿ ಬೈದದ್ದೂ ಆಯ್ತೆನ್ನಿ
ಬೇಕಿದ್ದರೆ ಬೇರೆಲ್ಲಾದರು ಎದ್ದು ಹೋಗಿ
ಇಲ್ಲವಾದರೆ ಕಿವಿಗಳಿಗೆ ಹತ್ತಿಯಿಟ್ಟು ಮಲಗಿ
ಅದೂ ಮಾಡಾಯ್ತು, ಎಚ್ಚರವಿಲ್ಲದೆ ಮಲಗಿ
ಪ್ರತಿ ದಿನ ನಾ ಮೇಲೇಳುವುದೂ ಲೇಟು !!


2 comments:

  1. ಮುದ್ದಾದ ಮಗುವನ್ನು ತವರಿಂದ ಕರೆಸಿ ನಿಮ್ಮೊಟ್ಟಿಗೆ ಇರಿಸಿಕೊಂಡು ನೋಡಿ. ಆಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು.

    ReplyDelete
  2. ಮಗಳ ಸಾಕಲಾರದೆ ತನ್ನ ತವರಲ್ಲೇ ಬೆಳೆಯಲು ಬಿಟ್ಟು, , ಇಲ್ಲೂ ಮನೆಯ ಕೆಲಸಗಳ ಮಾಡಲಾಗದೆ ನಾನೇ ಮನೆಗೆಲಸ ಅಡಿಗೆಯ ಮಾಡಿ ಇಲ್ಲೂ ದುಡಿದು ಆಫೀಸಿನಲ್ಲೂ ದುಡಿಯುವಂತಾಗಿದೆ.( ಇಷ್ಟಟಕ್ಕೆಲ್ಲಾ ನನ್ನವಳ ದಡೂತಿ ದೇಹ ) ಹ ಹ ಹ... ಧನ್ಯವಾದಗಳು Chandrashekar Ishwar Naik.

    ReplyDelete