Tuesday, December 31, 2013

" ವ್ರತ "

ಏಕೋ ಏನೋ ನಿಂದು ಅತಿಯಾಯ್ತು ಕಣೆ
ನೀ ಮಾಡುವ ಪ್ರತಿನಿತ್ಯದ ಅಡುಗೆಗೆ
ಎಲ್ಲವೂ ಉದ್ದುದ್ದದ ತರಕಾರಿಗಳೇ ಬೇಕೇನೋ
ನನಗೂ ಕಹಿಯ ತಿಂದು ತಿಂದು ಸಾಕಾಯ್ತು
ಮೊನ್ನೆ ಹಾಗಲಕಾಯಿಯ ಗೊಜ್ಜು, ಮೂಲಂಗಿ ಸಾರು
ನಿನ್ನೆ ಸೋರೆಕಾಯಿ ಪಲ್ಯ, ಹೀರೆಕಾಯಿ ಚಟ್ನಿ
ಇಂದು ನುಗ್ಗೆಯ ಸಾಂಬಾರು, ಬೆಳ್ಳುಳ್ಳಿ ಕೂಟು
ನಾಳೆಗೆ ಏನು ಕಾದಿದೆಯೋ ಆ ಪರಮಾತ್ಮನೇ ಬಲ್ಲ !

ರ್ರೀ... ಗಂಡು ಮಗು ಬೇಕೋ ಬೇಡವೋ ನಮಗೆ ?
ಸುಮ್ಮನೆ ತಿಂದು ತೆಪ್ಪಗೆ ನನ್ನ ಹಿಂದೆ ರೂಮಿಗೆ ಬನ್ನಿ
ಹಾಗೆಯೇ ಅಲ್ಲಿಟ್ಟಿರುವ ಕಷಾಯವ ಕುಡಿದು,
ಈ ಬೇವಿನ ಸೂಪ್ಪು ಸೊಂಟದ ಸುತ್ತಾ ಕಟ್ಟಿ
ಬರೀ ಮೈಯಲಿ ಒಂಟಿ ಕಾಲಲ್ಲಿ ನಿಲ್ಲಿ ;
ಹುಣ್ಣಿಮೆಯಿಂದ ಹುಣ್ಣಿಮೆವರೆಗೂ ವ್ರತ
ಮದ್ಯದಲ್ಲಿ ನನ್ನ ಮುಟ್ಟಿ ವ್ರತ ಕೆಡಿಸಿದಿರೋ
ಪ್ರತಿನಿತ್ಯ ಬೆಳಗಿನ ಜಾವ ತಣ್ಣೀರಲ್ಲಿ ಸ್ನಾನ,
ಮುಚ್ಚಿರಬೇಕು ಲಂಗೋಟಿಲಿ ನಿಮ್ಮ ಮಾನ
ಅರ್ಥವಾಯ್ತೇ, ಇಲ್ಲಾಂದರೆ ಈಗಲೇ ಇದ ಓದಿ
ಮಹಾತ್ಮರು ಬರೆದ " ಸಂತಾನ ಭಾಗ್ಯ " ಪುಸ್ತಕ !!

ಲೆ ಲೇ... ನಿನಗೇನಾದ್ರೂ ತಲೆ ಕೆಟ್ಟಿದೆಯೇ
ಮುದ್ದಾದ ಎರಡು ಅವಳಿ ಹೆಣ್ಮಕ್ಕಳಿರುವಾಗ
ಗಂಡು ಗಂಡೆಂದು ನೀನೇಕೆ ಬಾಯ್ ಬಿಡುವೆ
ಗಂಡಿದ್ದರೆ ನಿನಗೇನು ಎರಡು ಕೋಡು ಬರುವುದೆ
ನಾ ಏನಾದರು ಹೇಳಿದರೆ ನೀ ಕಣ್ಣೀರ ಸುರಿಸುವೆ ॥

2 comments:

  1. ಅದ್ಯಾರು ಬರೆದರೋ ಗಂಡಸರ ಪಾಲಿಗೆ ಅಂತಹ ಘಾತುಕ " ಸಂತಾನ ಭಾಗ್ಯ " ಪುಸ್ತಕ !! ಅಕಟಕಟಾ...

    ReplyDelete
  2. ನನ್ನ ಕಷ್ಟ ನನಗೇ ಇರಲಿ, ಬದರಿ ಪ್ರಭುಗಳೇ.... ಅಪ್ಪಿತಪ್ಪಿ " ಸಂತಾನ ಭಾಗ್ಯ " ಪುಸ್ತಕದ ಬಗ್ಗೆ ಯಾರಲ್ಲಾದರೂ ( ಹೆಂಗಸರ ) ಬಳಿ ಹೇಳಿದಿರೋ ಅವರ ಗಂಡಂದಿರ ಗತಿ ನನ್ನಂತಾಗುವುದು ಬೇಡ. ಗಂಡಸರೆಲ್ಲಾ ಸೇರಿ ನನ್ನ ಶಪಿಸಿದರೆ ಕಷ್ಟ ಕಷ್ಟ....
    ( ಗಂಡು ಮಕ್ಕಳಿಲ್ಲದವರು )

    ReplyDelete