Friday, January 3, 2014

ನನ್ನವಳು - ೧

ನನ್ನವಳ ಮುಂಗುರುಳ ಕಂಡು
ಕರಿ ಮುಗಿಲಿಗೂ ತುಸು ಮುನಿಸು
ಹೆರಳ ತಾ ಹರಡಿ ನಿಂತರೆ,
ಗಿರಿಯ ನವಿಲಿಗೂ ಕುಣಿವ ಮನಸು
ಮುಡಿಗೇರೋ ಆ ಮಲ್ಲಿಗೆಗೂ
ಮನದಣಿಯೆ ಮಲಗೋ ಕನಸು
ಕೊರಳ ಕೊಂಕಿಸಿ ಕರೆವ ಕೂಗಿಗೆ
ಕೋಗಿಲೆಯೂ ತಾ ತಬ್ಬಿಬ್ಬು;
ನಡೆದು ಬರುವಾಗ ಬಳುಕಿ ಅವಳ
ನೀಳ ಜಡೆಯ ಸಿರಿ ಸೊಬಗ ಕಂಡು
ಹಾವು ಕೂಡ ತಾ ಹೆದರಿ ಓಡುವುದು
ನನ್ನೆದೆಯಾ ಅಂಗಳದಿ ನೆನಪುಗಳ
ತಂಗಾಳಿಯ ಸುಮವ ಹೊತ್ತು ತಂದಿಹಳು !

1 comment:

  1. ಬದುಕಿನ ಪೂರಾ ನೀಳಕೇಶವು ಹೀಗೆಯೇ ಇದ್ದು ಬಿಡಲಿ - ಕಡು ಕಪ್ಪಗೆ!
    ಇಂತೀ,
    ಅಕಾಲ ನೆರೆಗೂ ವಂಶಪಾರಂಪರ್ಯ ಬೋಕ್ಕು ತಲೆಯಿಂದಲೂ ನೊಂದ ಕವಿ.

    ReplyDelete