Saturday, January 4, 2014

" ಬೆಳದಿಂಗಳ ಬಾಲೆ "

ನಾ ಹೇಗೆ ಹೇಳಲಿ ನಿಮಗೆ
ನನ್ನೊಳಗಿನ ತೊಳಲಾಟ
ನನಗೆ ಹೇಳದೇ ಬೇರೆ ವಿದಿಯಿಲ್ಲ
ಆಗುವುದೋ ಏನೋ ಹೇಳಿದರೆ
ಕೊಂಚ ಈ ಮನಸ್ಸಿಗೂ ನಿರಾಳ
ಅವಳು ಯಾರೋ ಏನೋ ಗೊತ್ತಿಲ್ಲ
ಫೋನಿನಲೆ ಮಧುರ ಕಂಠದಿ ಮಾತಾಡಿ
ಹಚ್ಚಿಹಳು ಅವಳೊಲವಿನ ಪ್ರೀತಿ ಹಣತೆ;
ಇಲ್ಲೆ ಎಲ್ಲೋ ಮರೆಯಲ್ಲಿ ನಿಂತು
ನನ್ನ ಎಲ್ಲ ಆಗು ಹೋಗುಗಳ ತಿಳಿದು
ಕರೆಯ ಮಾಡಿ ಬಿಡದೆ ಕಾಡುವಳಲ್ಲ
ಬಂದು ಎದಿರು ನೀ ನಿಲ್ಲೆನ್ನಲು
ಬುದ್ಧಿವಂತರು ನೀವೇ ಹುಡುಕಿ ಎನ್ನುವಳು
ಬೇಡ ಬೇಡವೆಂದರೂ ಅವಳ ದ್ವನಿಯೇ
ಮಾರ್ಧನಿಸಿ ಕಿವಿಯೊಳಗೆ,
ಕಾಡುವುದು ಪ್ರತಿರಾತ್ರಿ ಬಹಳ ಬಹಳ !

2 comments:

  1. ದೇವರಲ್ಲಿ ನನ್ನ ಮೊದಲ ಪ್ರಾರ್ಥನೆ, ಈ ವರ್ಷಕ್ಕೆ ಮೊದಲ ಅರ್ಜಿ.
    ಬೆಳದಿಂಗಳ ಬಾಲೆ ಕೈಗೆಟುಕಲಿ ಕವಿಗೆ ಈ ಬೆಳದಿಂಗಳೊಳಗೆ.

    ReplyDelete
  2. ಬೆಳದಿಂಗಳ ಬಾಲೆ ನನ್ನೆದೆಯ ಕದ ತಟ್ಟಿ, ನನ್ನ ಬೆಸ್ತು ಬೀಳಿಸಿ , ಯಾರೆಂದು ತಿಳಿಯದೆ ನಾ ಒದ್ದಾಡುವಾಗ ನನ್ನವಳು ಮುಸಿ ಮುಸಿ ನಕ್ಕಿದ್ದಳು; ಆಗಲೇ ನನ್ನವಳು ಬಾಯ್ಬಿಟ್ಟಿದ್ದು ಬೆಳದಿಂಗಳ ಬಾಲೆ ತಾನೆಂದು ಧ್ವನಿ ಬದಲಿಸಿ ಮಾತಾಡುವುದರಲ್ಲಿ ನನ್ನವಳು ಬಲು ಜಾಣೆ Badarinath Palavalli ಸರ್ರೂ....

    ReplyDelete