Friday, April 18, 2014

" ಹೃದಯ ಕದ್ದ ತುಂಟಿ "

ಕಣ್ಣಗಳಲ್ಲೇ ಎದೆಯ ಬಗೆದು
ಹೃದಯವ ಕದ್ದು ಹೋದವಳ
ನಾ ಹೇಗೆ ಎಲ್ಲೆಂದು ಹುಡುಕಲಿ.. ?
ಇಲ್ಲೇ.. ಎಲ್ಲೋ... ಅವಿತಿದ್ದು
ಮುಸಿಮುಸಿ ನಗುವ ಅವಳ
ಕೆಂದುಟಿಯ ಕಡಿವ ಪರಿಗೆ
ಏನೆಂದು ಹೆಸರಿಡಿದು ಕರೆಯಲಿ.. ?
ತಿರುತಿರುಗಿ ನೋಡಿ ಹೊರಟವಳ
ಹಿಂಬಾಲಿಸದೆ ನಾ ಬಡ ಬಡಿಸಿ
ಮೈಮರೆತು ಸೋತು ಕೂತವನ
ಕತ್ತು ಅತ್ತಿತ್ತ ಕೊಂಕಿಸಿ ನೊಂದರೂ
ಕದ್ದು ಕಣ್ಣರಳಿಸಿ ನೋಡುವವನ ಚಿತ್ತ
ಸುತ್ತ ಮುತ್ತಲಿದ್ದವರ ಮೇಲೆ ಬಿದ್ದು 
ಮತ್ತೆ ಬಂದವಳ ಕಣ್ತುಂಬ ಕಂಡು
ಮೆಲ್ಲನೆ ಎದ್ದು ಕನಸಿನಾಗಸದಿ ತೇಲಿ
ನಾ ಪ್ರೀತಿಯ ಹಾಡೊಂದ ಗುನುಗಿದ್ದೆ

2 comments:

  1. ಇಂತಹ ಕಳ್ಳಿಯರು ನನಗೂ ಇದ್ದರು ಗತದಲ್ಲಿ!

    ReplyDelete
    Replies
    1. ಅಕ್ಕಪಕ್ಷದಲ್ಲಿದ್ದ ಜನ ನೋಡಿ ಸುಮ್ಮನಾಗುತ್ತಿದ್ದರು ಮನವಾಡೇ... ಎಂದು

      Delete