Sunday, June 1, 2014

" ಯಡವಟ್ಟು "....!!! ೨

ಏಕೋ..ಏನೋ.. ನಿದ್ದೆಯಿಲ್ಲದೆ ಒದ್ದಾಡುತ್ತಿದ್ದರೆ
ನನ್ನವಳಿಗೆ ಎಲ್ಲಿಲ್ಲದ ಮುಸಿಮುಸಿ ನಗು
ನನ್ನ ತಲೆಯೊಳಗೆ ಅನುಮಾನದ ಹುಳ ಬಿಟ್ಟು
ಯೋಚಿಸುವಂತೆ ಮಾಡಿ, ಮಗ್ಗುಲ ಬದಲಾಯಿದರೂ
ಹಾಳಾದ್ದು ಹತ್ತಿರ ಸುಳಿಯದು ನಿದ್ದೆ;
ಎದೆ ಎತ್ತರಕ್ಕೆ ಬೆಳೆದು ನಿಂತ ಮಕ್ಕಳಿರುವಾಗ
ಈ ವಯಸ್ಸಲ್ಲಿ ಮತ್ತೊಂದು ಮಗು ಬೇಕಿತ್ತೆ...?
ನಮ್ಮದೇನು ಮಕ್ಕಳಿಲ್ಲದ ಸಂಸಾರವೆ...?
ಇವಳಿಗಾದರು ಒಂಚೂರು ಬುದ್ದಿ ಬೇಡ ?
ಇವಳ ಅಂದು, ಆಡಿಕೊಂಡರೇನು ಬಂತು ಭಾಗ್ಯ !
ಎಲ್ಲಾ.... ನನ್ನಿಂದಾದ ತಪ್ಪುಗಳೆ,
ಉಪ್ಪು, ಹುಳಿ, ಖಾರ ತಿನ್ನುವ ದೇಹ
ಸುಮ್ಮನಿರದೆ ಇಷ್ಟೆಲ್ಲಾ ... ಯಡವಟ್ಟಾಯ್ತು
ನಾನೇ... ಒಂದಷ್ಟು ಎಚ್ಚರ ವಹಿಸಿದ್ದಿದ್ದರೆ ಹೀಗಾಗುತ್ತಿತ್ತೆ? 
ಕಂಡವರು ನಿಲ್ಲಿಸಿ ಕೇಳಿದರೆ ಏನೆಂದು ಉತ್ತರಿಸಲಿ
ಎಲ್ಲರ ಮುಂದೆ ಇನ್ನು ತಲೆಯೆತ್ತಿ ಓಡಾಡುವಂತಿದೆಯೆ? 
ನಡುರಾತ್ರಿಯ ಸುಖ ನಿದ್ದೆಯಲ್ಲಿದ್ದ ನನ್ನವಳ ಎಬ್ಬಿಸಿ
ನಿಜವೇನೇ... ಪಾರು, ನೀ ಬಸಿರಾಗಿರುವೆಯೇ...?
ನಿಮಗೇನು ತಲೆಗಿಲೆ ಕೆಟ್ಟಿದೆಯೇ....?
ತೆಪ್ಪಗೆ ಮಾತಾಡದೆ ಮಲಗಿ, 
ನೀವಿಂತಹ ಬುದ್ದು ಅಂದು ಕೊಂಡಿರಲಿಲ್ಲ
ಕೂಗಾಡಿ ಬುಸುಗುಟ್ಟಿದರು ಬಿಡದೆ
ಬೆಳಿಗ್ಗೆ ಬೇಗ ರೆಡಿಯಾಗು ಡಾಕ್ಟರ್ ಬಳಿ ಹೋಗಿ
ನಿನ್ನ ಹೊಟ್ಟೆಯೊಳಗಿನ ಪಿಂಡ ತೆಗಿಸಿ ಬರುವ
ರ್ರೀ.... ನನಗೆ ಬರುವ ಕೋಪಕ್ಕೆ
ನಾನೇನು ಬಸಿರಾಗಿರುವೆ ಎಂದನೆ...?
ಮುಟ್ಟು ನಿಂತು ಮೂರು ತಿಂಗಳಾಯ್ತೆಂದೆ
ಮುಂದೆ ಮುಟ್ಟಾಗುವ ಕಿರಿಕಿರಿ ಇನ್ನಿಲ್ಲ;
ಒಂದೂ... ಅರ್ಥವಾಗದು ಏನು ಗಂಡಸರೋ... ನೀವು?
ಮತ್ತೆ ಮುಸುಗಿಕ್ಕಿ ನಕ್ಕು ಮಲಗಿದವಳ ಕಂಡು 
ನನ್ನೊಳಗೂ... ನಗೆಬುಗ್ಗೆ ಹರಿಸಿದ್ದಳು....

2 comments:

  1. ಇರಲೀ ಬುಡೀ ಸಾರ್ ಸಿವಾ ಕೊಡ್ತಾವ್ನೇ!!!

    ReplyDelete
    Replies
    1. ಇದ ಇಪ್ಪತ್ತೆಂಟು ವರ್ಷಗಳ ಹಿಂದೆ ಬರೆದದ್ದು , ನನ್ನ ಪರಿಚಯದವರ ಮಡದಿ, ಮಗಳು ಒಟ್ಟೊಟ್ಟಿಗೆ ಬಸಿರಾಗಿ ಈ ತಾಯಿ ಮುಜುಗರಕ್ಕೆ ಒಳಗಾಗಿ ಗರ್ಭಪಾತವ ( ನಾಟಿ ಔಷಧದಿಂದ ) ಮಾಡಿಸಿ ಸತ್ತದ್ದು ಇನ್ನೂ ಕಣ್ಮುಂದೆ ಕಟ್ಟಿದಂತಿದೆ ಬದರಿ ಸರ್...

      Delete