Saturday, June 14, 2014

" ಕನಸೋ.... ಇದು, ನನಸೋ.... ಇದು " !!!

ಗಾಡ ನಿದ್ದೆಯಲ್ಲಿದ್ದವನ ಎಬ್ಬಿಸಿತ್ತು
ಕಾಲಿಂಗ್ ಬೆಲ್ಲಿನ ಜೋರು ಶಬ್ಧ
ಬೆಚ್ಚಿ ಬಿದ್ದು , ಕಣ್ಣುಜ್ಜುತ ಮೇಲೆದ್ದಿದ್ದೆ
ಹೊತ್ತಲ್ಲದ ಹೊತ್ತಲ್ಲಿ ಯಾರಿರಬಹುದು...?
ನನ್ನವಳೋ...... ಮಲಗಿದರೆ ಮುಗಿಯಿತು
ಇವಳ ಎಬ್ಬಿಸಿದರೂ ಏನೂ ಪ್ರಯೋಜನವಿಲ್ಲ;
ಮೈಮೇಲೆ ಹಾವು, ಚೇಳು ಹರಿದಾಡಿದರೂ...
ಏನೂ.... ಗೊತ್ತಾಗದು, ಎಚ್ಚರವಾಗದು
ಇವಳೆಲ್ಲೋ... ಕುಂಭಕರ್ಣನ ವಂಶದವಳಿರಬೇಕು
ಹೇಳಲಾಗದೆ ನಿದ್ದೆಗಣ್ಣಲ್ಲೇ ತಡವರಿಸಿ ಎದ್ದು
ಬಾಗಿಲ ಬಳಿ ಬಂದು ಯಾರು ಯಾರದು...?
ನಾನೆ ರ್ರೀ... ಎಂದಿತು ಸುಕೋಮಲ ಹೆಣ್ಣಿನ ಧ್ವನಿ
ನಾನು ಎಂದರೆ ಹೆಸರು, ಊರಿಲ್ಲವೆ ನಿನಗೆ ?
ಗಡುಸಾಗಿ ಪ್ರಶ್ನಿಸಿ ಥೂ.. ಹಾಳಾದ್ದು ಹೊತ್ತುಗೊತ್ತಿಲ್ಲ
ಈ ಭಿಕ್ಷುಕರಿಗೆ ಊರಲ್ಲಿ ಹೇಳುವರಿಲ್ಲ , ಕೇಳುವರಿಲ್ಲ
ಮೈ ಬಗ್ಗಿಸಿ ದುಡಿಯದೆ, ಹಾಯಾಗಿ
ತಿರುದುಣ್ಣುವುದೇ.... ಇವರ ಕಾಯಕ
ಅಯ್ಯೋ... ಮುಂದೆ ಹೋಗಮ್ಮ ನಿನ್ನಂತವರು
ಬೆಳಿಗ್ಗೆಯಿಂದ ಬಂದು ಹೋದವರೆಷ್ಟೋ .....!!!
ನನ್ನವಳು ಏನೂ... ತಂಗಳು ಪಂಗಳು ಉಳಿಸಿಲ್ಲ
ಇಂದು ನನಗೇ... ಏನೂ ಸಾಕಾಗಲೇ... ಇಲ್ಲ
ಇನ್ನು ನಿನಗೆಲ್ಲಿಂದ ತಂದು ಹಾಕಲಿ
ಈ ಹೊತ್ತಲ್ಲದ ಹೊತ್ತಲ್ಲಿ ಭಿಕ್ಷಾಟಣೆಗೆ ಬರಬೇಕೆ....?
ರ್ರೀ... ನಾನು ರ್ರೀ.... ನಿಮ್ಮ ಪುಷ್ಪಾ...
ಬೇಗ ಬಾಗಿಲು ತೆಗೆಯ ಬಾರದೆ ತುಂಬಾ ಹಸಿವು
ನೋಡಿ ಅಮ್ಮ ಇಲ್ಲೇ... ಸುಸ್ತಾಗಿ ಕೂತಿಹರು
ಹಾಳು ಬಸ್ಸು ಕೈಕೊಟ್ಟು, ಇಷ್ಟು ತಡವಾಯ್ತು
ಮೈಯಲ್ಲ ಬೆವೆತು ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದೆ,
ಆಗಾದರೆ ನನ್ನ ಪಕ್ಕ ಮಲಗಿದವಳು ಯಾರು ?
ಇವಳೆಲ್ಲಿ...?, ಚಂದ್ರನಂತೆ ಹೊಳೆವ ಅವಳು...!!!
ಆ ನೀಳ ಕೇಶರಾಶಿ, ತುಂಬಿದೆದೆಯಲ್ಲರಳಿದ ಯೌವನ ಹುಣ್ಣಿಮೆಯ ಬೆಳದಿಂಗಳ ರೂಪ ಸೌಂದರ್ಯದ ವದನ
ನನ್ನ ಮನವ ಅರಿತವಳಂತೆ ದೆವ್ವವಿರಬೇಕು ರ್ರೀ...?!
ದೆ ದೆ ದೆ ದೆವ್ವವೇ.... ಬಾಯೆಲ್ಲಾ ಒಣಗಿ
ಮಾತಾಡದೆ ಮೈಮನ ಗರಬಡಿದಿತ್ತು
ಸರಿಯಾಗಿ ನನ್ನ ಕಣ್ಬಿಟ್ಟು ನೋಡ್ರೀ....
ಏನಾದ್ರೂ... ಯಡವಟ್ಟು ಮಾಡ್ಕೊಂಡ್ರೋ... ಹೇಗೆ?
ಗೊತ್ತಲ್ಲ, ಮಾರಿ.......ಹಬ್ಬ!!

4 comments:

  1. ಯಪ್ಪಾ ಎದೆ ದಸಕ್ ಎಂದಿತು............................................................. :(

    ReplyDelete
    Replies
    1. ನನ್ನವಳು ಕರೆದಳೆಂದು ಇನ್ನೇನು ಬಾಗಿಲ ತೆಗೆಯ ಬೇಕು, ಹಿಂಬದಿಯಿಂದ ಹೆಗಲ ಮೇಲೆ ಕೈ ಬಿತ್ತು ತಿರುಗಿ ನೋಡಿದರೆ ಕೆದರಿದ ನೀಳ ಕೇಶರಾಶಿಯ ನನ್ನವಳು, ಹೊರಗೊಂದು ಹೆಣ್ಣು ಒಳಗೊಂದು ಹೆಣ್ಣು ಈ ಇಬ್ಬರಲ್ಲಿ ಯಾರು ನನ್ವವಳು ಬೆ ಬೆ ಬೆ ಬೆ ಮಾತೇ... ಹೊರಡದು, ಗಂಟಲೆಲ್ಲಾ ಒಣಗಿ ತಲೆ ತಿರುಗಿ ಕಿರುಚಿ ಬಿದ್ದಿದೆ. ಕನಸುಗಳು ಎಷ್ಟೊಂದು ವಿಚಿತ್ರ ಅಲ್ಲವೆ ಬದರಿಜಿ.

      Delete
  2. ಸುಪ್ತಮನಸಿನಲ್ಲಿರುವ ಆಸೆಯೇ ಕನಸಿನ ರೂಪ ಪಡೆಯಿತೇ..? ಆದರೂ ದೆವ್ವದ ಕಲ್ಪನೆಯೇ ಭಯಾನಕ..!

    ReplyDelete
    Replies
    1. ನಿಜ, ಕನಸುಗಳೇ.... ಹಾಗೆ ಸುಪ್ತ ಮನಸ್ಸಿನ ಮೇಲೆ ಎಂದೂ.... ಕಾಣದ ; ಒಮ್ಮೊಮ್ಮೆ ಕಲ್ಪಿಸಲು ಆಗದ ರೀತಿ ಮಾಯಾ ಲೋಕದಲ್ಲಿ ಸುತ್ತಾಡಿಸಿ, ರೋಮಾಂಚನಗೊಳಿಸಿ ಕಾಟ ಕೊಡುವಾಗ ಭಯಭೀತರಾಗಲೇ... ಬೇಕು. ಮೊದಲ ಬಾರಿಗೆ ಬ್ಲಾಗಿಗೆ ಭೇಟಿಯಿತ್ತು ನಿಮ್ಮ ಅನಿಸಿಕೆಗಳಿಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು Nagalakshmi Shashikumar ಮೇಡಮ್ .

      Delete