Wednesday, June 18, 2014

" ಯಡವಟ್ಟಾಯ್ತು " - ೩

ಆಟೋದಿಂದಿಳಿದು ಬಂದವಳ ನೋಡಿ
ಅವಳು ಹೇಳಿದ ಡ್ರೆಸ್ ಕಲ್ಲರ್,
ನೀಳ ಕೇಶರಾಶಿ ಎಲ್ಲವೂ ಸರಿಯಾಗಿಯೇ ... ಇದೆ
ಆದರೆ ಅವಳ ವಯಸ್ಸೇಕೋ ....
ನನಗಿಂತ ಎರಡರಷ್ಟು ಹೆಚ್ಚಾದಂತೆ ಕಂಡರೂ...
ಅವಳ ದಡೂತಿ ದೇಹವ ಕಂಡು ಬೆಚ್ಚಿದ್ದೆ; !
ಕಣ್ಣಿಗೆ ಕಾಣದ ಹಾಗೆ, ಮರದ ಮರೆಗೆ ಸರಿದು
ಇವಳೇ... ಇರಬೇಕೆಂದು ಮನ ಹೇಳಿದರೂ...
ಒಂದು ಕ್ಷಣ ಗಲಿಬಿಲಿಗೊಂಡು ಅನುಮಾನಿಸಿ
ಛೆ ಛೇ.... ಇರಲಾರದು, ಇವಳೆಲ್ಲಿ ಅವಳೆಲ್ಲಿ ?
ಆ ಸುಸ್ವರದ ಸಿರಿ ಕಂಠದ ಕೋಗಿಲೆಯಲ್ಲಿ ?
ಮುಖಪುಟದಿ ಪ್ರೀತಿಗೆ ಮುನ್ನುಡಿ ಬರೆದು,
ಗಂಟೆಗಟ್ಟಲೆ ಸಂದೇಶಗಳ ವಿನಿಮಯದಿ
ಮನವ ಕದ್ದವಳ ನಾ ಮರೆಯಲಾದೀತೆ ?
ತನು ಮನ ಎಲ್ಲವೂ... ಅವಳೆ ಆಗಿರುವಾಗ
ಮತ್ತೊಬ್ಬಳ ಪ್ರೀತಿಸುವುದು ಸರಿಯೆ ?
ಎಷ್ಟೊಂದು ಹಗಲುಗನಸುಗಳ ಕಂಡಿದ್ದೆ;
ನನ್ನವಳು ಆಗಿರಬೇಕು, ಈಗಿರಬೇಕು
ಒಂದೇ ... ಎರಡೆ, ನೂರಾರು ...!!
ಒಮ್ಮೆ ನಿನ್ನ ಮನಸಾರೆ ಕಣ್ತುಂಬಿ ಕೊಂಡು
ಮನದಣಿಯೆ ಮುದ್ದಿಸ ಬೇಕು
ನೀನಿಲ್ಲದೆ ಈ ಜಗವೆಲ್ಲ ಶೂನ್ಯ ಶೂನ್ಯ
ಬೇಗ ಬಂದು ಬಿಡು ಚಿನ್ನೂ....
ನಾ ಇನ್ನು ಕಾಯಲಾರೆ...? ನೀ ಬರುವೆಯಲ್ಲಾ....!!
ಆರು ತಿಂಗಳ ಪ್ರೀತಿಗೆ ಕರಗಿ ಬಂದವಳ ನೋಡಿ
ಛೇ.... ಇದೆಂಥಹ ಪ್ರೀತಿ, ಪ್ರೇಮ
ನಾ ಮೋಸ ಹೋದೆನೇ....?
ಎರಡು ಮಕ್ಕಳ ತಾಯಂತಿರುವ ಇವಳ
ನಾ ಇಷ್ಟು ದಿನ ಇಷ್ಟಪಟ್ಟು ಪ್ರೀತಿಸಿದ್ದು
ಯಡವಟ್ಟಾಯ್ತು ..... ತಲೆಕೆಟ್ಟೋಯ್ತು .....!!!

2 comments:

  1. ಯ-3 ಓದಿ ಅಯ್ಯೋ ಅನಿಸಿತು ದೊರೆಯೇ!

    ReplyDelete
  2. ಫೇಸ್ ಬುಕ್ಕಲ್ಲಿ ಪರಿಚಯವಾಗಿ, ದಿನ ಕಳೆದಂತೆ ಮನಸ್ಸಿಗೂ ಹತ್ತಿರವಾದಳು.ಅವಳ ಮಾತು, ಪ್ರತಿ ನಿತ್ಯ ಕೇಳಿದರೇನೆ ನನಗೂ ಸಮಾಧಾನ ಒಬ್ಬರೊನ್ನೊಬ್ಬರು ಬಿಟ್ಟಿರಲಾಗದ ಪ್ರೀತಿಯ ಅನುಬಂಧ; ಕಾಣಲೇ ಬೇಕೆಂಬ ಹಂಬಲಕ್ಕೆ ಭೇಟಿಯ ದಿನ ಗೊತ್ತು ಮಾಡಿ ಕಾದಾಗಲೇ ಗೊತ್ತಾಗಿದ್ದು ನನಗಿಂತ ಹಿರಿಯಳು, ಎರಡು ಮಕ್ಕಳ ತಾಯಿಯಂದು. ಇತ್ತೀಚೆಗೆ ನಡೆದ fb ಯ ಪ್ರೇಮ ಪ್ರಕರಣದ ಪ್ರೇರಣೆಯಿಂದ ಬರೆದದ್ದು ಬದರಿ ಸರ್.

    ReplyDelete