Sunday, December 14, 2014

ಬಾ ಬಾ ಮಗಳೇ....


ನನ್ನ ಮಗಳೆಂದರೆ
ಮನದಿ ಏನೋ ಹರುಷ
ನವ ಉಲ್ಲಾಸ ಉಕ್ಕಿ ಹರಿವುದು
ಈ ಎದೆಯೊಳಗೆ, ಮನೆಯೊಳಗೆ
ಮಮಕಾರದ ಮಿಡಿತ, ತುಡಿತ
ಕಣ್ಗಳಲಿ ಭರವಸೆಯ ಕೋಲ್ಮಿಂಚು
ನನ್ನದೇ ರಕ್ತ ಮಾಂಸಗಳ
ಹೊತ್ತ ಜೀವಂತ ಗೊಂಬೆ
ಅರೆರ್ರೇ.... ಬಿಟ್ಟ ಕಣ್ಗಳ ಬಿಟ್ಟಂತೆ
ನೀವು ಯಾರೂ ನೋಡದಿರಿ
ಕಾಕ ದೃಷ್ಟಿಯಾದೀತು
ನಳನಳಿಸುವ ಚಂದ್ರವದನ
ಶೀತಲ ಕಿರಣ ನಗೆಯಾಭರಣ
ಹೊಳೆವ ಬಣ್ಣದ ಲಂಗವ ತೊಟ್ಟು
ಗೆಜ್ಜೆ ಕಾಲ್ಗಳಲಿ ನೆರಿಗೆ ಚಿಮ್ಮಿಸುತ
ನಡೆದು ಬರುವ ಅವಳ ದಾರಿಗೆ
ಎಂದೂ ಯಾರೂ ಅಡ್ಡಡ್ಡ ಬರದಿರಿ 

1 comment:

  1. ಮುದ್ದಿನ ಮಗಳ ಬಾಳು ಹಸನಾಗಲಿ.
    ಮನೆಮಂದಿಗೆಲ್ಲ ಪೊರೆವ ಕೈಯ್ಯಾಗಲಿ.

    ReplyDelete