Saturday, September 28, 2013

ಅವರೇನೂ ಮಾಡ್ಲಿಲ್ಲ !!!

ಹೌದೇನೇ ಸುಗುಣಾ...,
ನಾ ಕೇಳಿದ್ದು ನಿಜವೆ
ಅಳಿಯಂದಿರು ಇತ್ತೀಚೆಗೆ
ಏನೋ ಯಡವಟ್ಟು
ಮಾಡಿ ಕೊಂಡರಂತೆ
ಆ ಕೆಲಸದವಳ ಜೊತೆಗೆ;
ನಾ ಮೊದಲೇ ಬಡ್ಕೊಂಡೆ
ಆ ನಿನ್ನ ಗಂಡನ ಮೇಲೆ
ಸದಾ ಒಂದು ಕಣ್ಣಿಟ್ಟಿರು,
ಜಡೆಯ ಕಂಡರೆ ಸಾಕು
ಈ ಗಂಡಸರ ಕೈಕಾಲು
ನೆಲದ ಮೇಲೆ ನಿಲ್ಲಲ್ಲ
ಆಕಾಶದಲ್ಲಿ ಹಾರಾಡುತ್ತೆ;
ಈಗ ಅನುಭವಿಸು ತಾಯಿ
ನನಗೇ ಈ ವಿಷಯವ ಕೇಳಿ 
ಸಂಕಟ ತಡೀಲಾರದೆ ಬಂದೆ !

ಅಯ್ಯೋ!!!... ಅಮ್ಮಾ.....,
ಇದೆಲ್ಲವ ನಿಂಗ್ಯಾರೇಳಿದ್ರು
ಅವರೇನೂ ಮಾಡ್ಲಿಲ್ಲ
ಅವರಂತವರಲ್ಲ ತಿಳೀತೇ
ಆದದ್ದು ಎಲ್ಲಾ ನನ್ನಿಂದಲೇ
ಹಾಳಾದ್ದು ಸಂಜೆಯ ಮಳೆಗೆ
ಆ ಕೆಲಸದವಳು ನೆನೆದಿದ್ದಳು;
ಬಟ್ಟೆ ಬದಲಾಯಿಸಲು ಹೇಳಿ
ನನ್ನ ಸೀರೆಯ ಹುಡಲು ಕೊಟ್ಟು
ಈ ಅವಾಂತರಕ್ಕೆ ಕಾರಣಳಾದೆ
ನನ್ನವರು ನಾನೆಂದು ತಿಳಿದು
ಅವಳ ಹಿಂಬದಿಯಿಂದ ಹಿಡಿದದ್ದೇ
ಇಷ್ಟೆಲ್ಲಾ ಕತೆಗೆ ಆಹಾರವಾಗಿದ್ದು
ಇನ್ನಾದರೂ ಮೆಲ್ಲಗೆ ಮಾತಾಡು
ಅವರು ಬರುವ ಹೊತ್ತಾಯಿತು ॥

4 comments:

  1. ಕೊನೆಗೂ ನಿಜ ಗೊತ್ತಾಯಿತಲ್ಲಾ....

    ReplyDelete
  2. ಎಲ್ಲರಿಗೂ ನಿಜ, ಗೊತ್ತಾಗಿದ್ದಕ್ಕೆ ಅವ ನಿರಾಳವಾಗಿ ತಲೆ ಎತ್ತಿಕೊಂಡು ಓಡಾಡುವಂತಾಗಿದ್ದು. ಧನ್ಯವಾದಗಳು Chandrashekar Ishwar Naik

    ReplyDelete
  3. ನೋಡಿದ್ರಾ ನೀವೂ ತಪ್ಪು ತಿಳಿದುಕೊಂಡ್ರೀ...

    ReplyDelete
  4. ಕಣ್ಣಿಗೆ ಕಂಡಿದ್ದು ಸುಳ್ಳಾಗ ಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಅಲ್ಲವೆ ಬದರಿಜಿ.

    ReplyDelete