Tuesday, June 24, 2014

" ವಿರಹ ನೂರು ನೂರು ತರಹ "

ಮೊದ ಮೊದಲು
ಆ ನಿನ್ನ  ಕುಡಿ ನೋಟ ಕಂಡು
ನಾ ಅಂದು ಸೋತು ಹೋದೆ
ಬರಿ ತೊದಲು ಏಕೊ
ನನ್ನೊಳಗಿನ ಮಾತ
ನಾ ನಿನಗೆ ಹೇಳದೆ ಹೋದೆ
ಮನಸ್ಸಿಗೂ ತುಸು ಭಾರ
ನಿದಿರೆಯೂ ಬರದು ತೀರ
ನೀ ಬರದೆ ಈ ಬೆಳದಿಂಗಳೂ
ನನ್ನೆ ಸುಡುತಿಹದು ಇಂದು
ಏಕೊ ಏನೋ ಕಾಣೆ ಜಾಣೆ


3 comments:

  1. ಸರಸ ಕವಿಯ ರಸಿಕ ಕಾವ್ಯ ಸೃಷ್ಟಿ.

    ReplyDelete
    Replies
    1. ಅವಳ ಕುಡಿ ನೋಟದಿಂದ ಬಂದ ಮೊದಲ ಬಾಣ, ಮೈ ಮನವ ತಂಗಾಳಿಯಂತೆ ಸೋಕಿ ಅಲುಗಾಡದ ಕಲ್ಲಂತೆ ಉಳಿದು ಏನೂ... ಹೇಳಲಾಗದ; ಏನೂ ಮಾತಾಡಲು ಆಗದೆ ಬೆಪ್ಪನಾಗಿದ್ದೆ....!!

      Delete
  2. ಅದ್ಭುತ ಪರಿಕಲ್ಪನೆ. ಸಂದರವಾಗಿದೆ

    ReplyDelete