Tuesday, June 3, 2014

" ನೂಪುರ "

ಎಲ್ಲೋ....
ಬರುತಿರುವ
ಅವಳಾಗಮನದ
ಕಾಲ್ಗೆಜ್ಜೆಯ ಅಲೆಗಳಿಗೆ
ಏಕೊ ಏನೋ ನನ್ನೆದೆಯೊಳಗೆ
ಮಿಡಿತದ, ಮಿಂಚಿನ
ಹೊಸ ಪ್ರೀತಿಯ ಸಂಚಲನ ...
ಎಂದೂ... ಕಾಣದ, 
ಹೇಳದ ಚಡಪಡಿಕೆಗೆ
ನರನಾಡಿಗಳಲ್ಲಿ ಪುಟಿದೇಳುವ
ರೋಮಾಂಚನದ ವ್ಯಾಕರಣ...!! 

2 comments:

  1. ನೂಪುರದ ರಿಂಗಣವು ಪ್ರಿಯತಮನ ತುಡಿತಕೆ ಕಾರಣವು. ಲವ್ವಿರಲಿ ಸದಾ...

    ReplyDelete
    Replies
    1. ಲವ್ವುಗಿವ್ವಲ್ಲಿ ಹುಚ್ಚೆದ್ದು ಕುಣಿವ ಮನಸ್ಸಿಗೆ ಆ ನೂಪುರಾನಂದವೇ... ಅಯಸ್ಕಾಂತೀಯ ಮಂತ್ರದಂಡವಾಯ್ತು ಬದರಿನಾಥ ಪಲವಳ್ಳಿಜಿ.

      Delete