Sunday, September 14, 2014

' ನಾ ಕಳಕೊಂಡೆ '

ಇದೇನೇ.... ಭಾಮ, ಏನೋ ಹುಡುಕುವಂತಿದೆ
ನೀ ಏನಾದರು ಕಳೆದು ಕೊಂಡೆಯೋ... ಹೇಗೆ ?
ಹ್ಞೂಂ ರ್ರೀ ... ಹಾಳಾದ್ದು ಮಧ್ಯಾಹ್ನದಿಂದ ಕಾಣ್ತಿಲ್ಲ
ಹುಡುಕಿ, ಹುಡುಕಿ ನನಗೂ ಸಾಕಾಗಿ ಹೋಯ್ತು;
ಸರಿ ನೀವಾದರು ಸ್ವಲ್ಪ ಹುಡುಕಿ ಕೊಡಬಾರದೇ... ಚಿನ್ನವೇನಾದರು ಕಳೆದು ಕೊಂಡೆಯೋ ಹೇಗೆ ?!
ಏನು ಹೆಂಗಸರೋ.... ಏನು ... ಕಥೆಯೋ ...
ಎಲ್ಲೋ ಇಟ್ಟು, ಮತ್ತೆಲ್ಲೋ... ಹುಡುಕಾಡುವುದು
ನೀ ಕಳೆದದ್ದು ಕಿವಿಯೋಲೆಯೋ...
ಅಥವಾ ನಾ ಕಟ್ಟಿದ ತಾಳಿಯೋ... ಚಿನ್ನದ ಸರವೋ... ಅಯ್ಯೋ...!! ಅದ್ಯಾವುದು ಅಲ್ಲವೇ... ಅಲ್ಲಾರೀ
ಅದಿಲ್ಲದಿದ್ದರೆ ಏಕೋ ಏನೋ ನನ್ನ ಕೈ ಕಾಲೇ ಆಡದು
ಕೈಗೆ ಸಿಗಬೇಕು ನಿಮಗೆ ಇಂದು ಹಬ್ಬ ಹಬ್ಬವಿತ್ತು
ಹೆ ಹೆ ಹೇ... ನೀ ಏನೆ ಒಗಟು ಒಗಟಾಗಿ ಹೇಳುವೆ ?
ಏನೋ... ಡ್ರಾಪ್ ಕೇಳಿದಳೆಂದು ಕರೆತಂದೆನಷ್ಟೆ
ಇಷ್ಟಕ್ಕೆ ನೋಡಿ, ನೀ ಹೀಗೆ ನನ್ನ ಅನುಮಾನಿಸುವುದೆ
ರ್ರೀ... ಅಂತು ಇಂತು ಸಿಕ್ಕಿತು ನೋಡಿ ' ಲಟ್ಟಣಿಗೆ '
ಬೇಗ ಅಡಿಗೆ ಮನೆಯೊಳಗೆ ಬನ್ನಿ ಶುರು ಹಚ್ಚಿಕೊಳ್ಳುವೆ
ಬಂದೆ ಸ್ವಲ್ಪ ತಾಳೇ.... ಹೊಟ್ಟೆ ಏಕೋ... ಸರಿಯಿಲ್ಲ !!

2 comments:

  1. Next time, ಅವರು ತಮ್ಮ ಆಯುಧವನ್ನು ಪೊಲೀಸ್ ಆಫೀಸರರಂತೆ ಗನ್ ಇಟ್ಟುಕೊಳ್ಳುವ ಹಾಗೆ ಇಟ್ಟುಕೊಳ್ಳುವ ಚೀಲಾ ಹೊಲೆಸುತ್ತಾರಂತೆ, ಇರೀ...

    ReplyDelete